Karthik, Tanisha and Sangeetha in BBK10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಕಾರ್ಯಕ್ರಮದಲ್ಲಿ ಆರನೇ ವಾರ ಸಂಗೀತಾ - ಕಾರ್ತಿಕ್ - ತನಿಷಾ ಮಧ್ಯೆ ಜೋರು ಗಲಾಟೆ ನಡೆದಿದ್ದು, ಸಂಗೀತಾ "ಫ್ರೆಂಡ್‌ ಆಗಿ ಅವಕಾಶವಿದ್ದರೂ ನನ್ನನ್ನ ಸೇಫ್‌ ಮಾಡಲಿಲ್ಲ" ಅಂತ ಪದೇ ಪದೇ ಹೇಳಿ ಕಾರ್ತಿಕ್, ತನಿಷಾ ಇಬ್ಬರನ್ನು ಚುಚ್ಚುತ್ತಾ "ಫ್ಲಿಪ್‌", "ಹಾರ್ಟ್‌ ಬ್ರೇಕ್", "ಟ್ರಸ್ಟ್ ಇಲ್ಲ" ಎಂಬೆಲ್ಲಾ ಪದಬಳಕೆಯನ್ನ ಮಾಡಿದ್ದರು. ನಿನ್ನೆ ನಡೆದ ಕಿಚ್ಚನ ಪಂಚಾಯಿತಿ ಸುದೀಪ್‌ ಫ್ಲಿಪ್‌ ಬಗ್ಗೆ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಕಿಚ್ಚ ಸುದೀಪ್ ತನಿಷಾಗೆ ಪದೇ ಪದೇ ಈ ವಾರ ನಿಮಗೆ ‘ಫ್ಲಿಪ್’ ಎಂಬ ಪದ ಬರ್ತಿತ್ತು. ಏನು ಹಾಗಂದ್ರೆ ಅಂತ ಕೇಳಿದಕ್ಕೆ ಉಲ್ಟಾ ಹೊಡೆಯೋದು ಅಂತ ಉತ್ತರಿಸಿದರು. ಆಗ ಮತ್ತೆ ಸುದೀಪ್ ಈ ಮನೆಗೂ ಫ್ಲಿಪ್‌ಗೂ ಏನು ಸಂಬಂಧ ಅಂತ ಪ್ರಶ್ನಿಸಿದಕ್ಕೆ ಈ ಮನೆಯಲ್ಲಿ ಚೇಂಜ್‌ ಆಗುತ್ತಿರುತ್ತಾರೆ, ಅದು ಸಡನ್‌ ಆಗಿ ಆಗಬಹುದು, ಅಥವಾ ನಿಧಾನವಾಗಿ ಆಗಬಹುದು ಅಂತ ಹೇಳಿದರು. ಬಳಿಕ ಕಾರ್ತಿಕ್‌ ಇದರ ಬಗ್ಗೆ ವಿವರಿಸುತ್ತಾ,
"ಲುಡೋ ಟಾಸ್ಕ್ ನಡೆಯುವಾಗ ‘ಅದಲು ಬದಲು’ ಆಯ್ಕೆ ಸಿಕ್ತು. ಸಂಗೀತಾ ಹೋಗ್ತೀನಿ ಅಂದಳು. ನಾವು ಕಳಿಸಿಕೊಟ್ವಿ. ವರ್ತೂರು ಸಂತೋಷ್‌ ಅಪ್‌ಸೆಟ್‌ ಆಗಿ ಈ ಕಡೆ ಬಂದರು. ‘ಎದುರಾಳಿ ತಂಡದ ಒಬ್ಬರನ್ನ ಸೇಫ್ ಮಾಡಿ’ ಎಂಬ ಆಯ್ಕೆ ಬಂದಾಗ ‘ನೀವಿಬ್ರೇ ಡಿಸೈಡ್‌ ಮಾಡಬೇಡಿ. ಮೂವರೂ ಮಾಡಬೇಕು’ ಅಂತ ವರ್ತೂರು ಸಂತೋಷ್ ಹೇಳಿದರು. ನಾವು ಸಿರಿ ಹೆಸರನ್ನ ಹೇಳಿದ್ವಿ. ಅವರು ನೀತು ಎಂದರು. ಕೊನೆಗೆ ಸಿರಿ ಅವರನ್ನ ಸೇಫ್ ಮಾಡಿದ್ವಿ. ಅಲ್ಲಿ ಸಂಗೀತಾಗೆ ಎರಡೇ ಹೆಜ್ಜೆ ಉಳಿದಿತ್ತು. ಸಂಗೀತಾ ಬಗ್ಗೆ ನಾವು ಅಲ್ಲಿ ಯೋಚನೆ ಮಾಡಿದ್ದು ಹೌದು. ಅವಳು ಹೇಗಿದ್ದರೂ ಸೇಫ್ ಆಗ್ತಾಳೆ ಅಂತ ಇತ್ತು. ಆದರೆ ಸಂಗೀತಾ ಕಡೆಯಿಂದ ಫ್ಲಿಪ್ ಎಂಬ ಮಾತು ಬಂತು. ಅದು ನಮಗೆ ತುಂಬಾ ಹರ್ಟ್ ಆಯ್ತು" ಎಂದು ಹೇಳಿದರು.


ಇದನ್ನು ಓದಿ: ಬಿಗ್ ಬಾಸ್ ಮನೆಯಿಂದ ಕಾಣೆಯಾದ ಸಂಗೀತಾ! ಇದ್ದಕ್ಕಿದ್ದಂತೆ ಆಚೆ ಬಂದ್ರಾ?


ಅದಕ್ಕೆ ಸಂಗೀತಾ  ನಾವು ಟೀಮ್‌ ಆಗಿದ್ಯಾಕೆ ಅಂದ್ರೆ ನಮ್ಮಲ್ಲಿ ಅಂಡರ್‌ಸ್ಟಾಂಡಿಂಗ್ ಇದೆ. ನಾವು ಫ್ರೆಂಡ್ಸ್ ಅಂತ. ‘ಅದಲು ಬದಲು’ ಬಂದಾಗ ನಾವು ವರ್ತೂರು ಸಂತೋಷ್  ಮನೆ ತಗೊಂಡ್ವಿ. ಯಾಕಂದ್ರೆ ಅದು ಲೀಡ್‌ನಲ್ಲಿ ಇತ್ತು ಅಂತ. ‘ನಾನು ಹೋಗ್ತೀನಿ’ ಅಂತ ಹೇಳಿದೆ. ಯಾರೂ ಕೂಡ ನಾನು ಹೋಗ್ಲಾ ಅಂತ ಡಿಸ್ಕಷನ್ ಬಂದಿಲ್ಲ ಎಂದಿದಕ್ಕೆ, ಕಿಚ್ಚ ಸುದೀಪ್ ನೀವೂ ಡಿಸ್ಕಸ್‌ ಮಾಡಿಲ್ಲ. ನೀವೇ ಆಕ್ಚುಲಿ ಪುಶ್ ಮಾಡ್ತಿದ್ರಿ… ನೀವೇ ಹೋಗ್ಬೇಕಂತ. ಆಗ ಡಿಸ್ಕಷನ್ ಯಾಕೆ ಮಾಡಲಿಲ್ಲಅಂತ ಕೇಳಿದಕ್ಕೆ ಅವರೂ ಕೇಳಬಹುದಿತ್ತು. ನನ್ನ ಕಡೆಯಿಂದ ನಾನು ಇಂಟ್ರೆಸ್ಟ್ ತೋರಿಸಿದೆ ಅಂತ ಹೇಳಿದರು. ತಿರ್ಗಾ ಸುದೀಪ್, ವಾರವಿಡೀ ‘ನೀನೂ ಕೇಳಬಹುದಿತ್ತು’ ಅಂತ ನೀವು ತುಂಬಾ ಸಲಿ ಹೇಳಿದ್ದೀರಾ. ಆದ್ರೆ ನೀವ್ಯಾಕೆ ಕೇಳಲಿಲ್ಲ ಅಂತ ಪ್ರಶ್ನಿಸಿದರು.ಅದಕ್ಕೆ ಸಂಗೀತಾ  ‘ನೀನು ಹೋಗು’ ಅಂದ್ಮೇಲೆ ನಾನು ಇನ್ನೇನು ಕೇಳಲಿ ಎಂದರು. 


ಬಳಿಕ ಕಿಚ್ಚ ಸುದೀಪ್, ನೀವು ಹೋಗ್ತೀನಿ ಎಂದಾಗ  "ಹೋಗಬೇಡʼ ಅನ್ನೋಕೆ ಅವರಿಗೆ ಮನಸ್ಸಾಗಲಿಲ್ಲ. ಒಬ್ಬ ಫ್ರೆಂಡ್‌ ಹೋಗಲು ಇಷ್ಟಪಟ್ಟರು. ಬಾಕಿ ಇಬ್ಬರು ಅದಕ್ಕೆ ಸ್ಪಂದಿಸಿದರು. "ನಾನೂ ಹೋಗಬೇಕು" ಅಂತ ಹೇಳುವ ಮನಸ್ಸು ಇಬ್ಬರಿಗೂ ಇರಲಿಲ್ಲ. ತನಿಷಾ, ಕಾರ್ತಿಕ್.. ನಿಮ್ಮಿಬ್ಬರಿಗೆ ಹೋಗಬೇಕು ಅಂತ ಅನಿಸಲಿಲ್ವಾ? ಅಂತ ಕೇಳಿದಕ್ಕೆ ತನಿಷಾ ಅನಿಸಿತ್ತು ಸರ್‌ ಅಂತ ಹೇಳಿದರು. ಆಗ ಕಾರ್ತಿಕ್ ಸಹ ಹೌದು ಸರ್‌. ನಾವು ಚರ್ಚೆ ಮಾಡೋಕೆ ಮುನ್ನವೇ ಸಂಗೀತಾ ‘ಹೋಗ್ತೀನಿ’ ಎಂದಳು ಎಂದು ಹೇಳಿದರು. ಅದಕ್ಕೆ  ಸುದೀಪ್, ಇದನ್ನ ನೋಡಿ ತಾನೇ ವರ್ತೂರು ಸಂತೋಷ್ ಹೇಳಿದ್ದು ನೀವು ನೀವೇ ಚರ್ಚೆ ಮಾಡುವ ಹಾಗಿಲ್ಲ. ನಮ್ಮನ್ನೂ ಕೇಳಿ ಅಂತ.. ಹೇಳಿದಕ್ಕೆ ಕಾರ್ತಿಕ್‌ ಹೌದು ಸರ್‌ ಎಂದು ಒಪ್ಪಿಕೊಂಡರು.


ಇದನ್ನು ಓದಿ: BBK 10 : ಡಬಲ್ ಎಲಿಮಿನೇಷನ್..‌ ನಿನ್ನೆ ಇಶಾನಿ ಔಟ್‌, ಇಂದು ಹೊರ ಬರ್ತಾರಾ ಈ ಸ್ಪರ್ಧಿ?


ಕಿಚ್ಚ ಸುದೀಪ್ ‘ಅವರು ಕೇಳಲಿಲ್ಲ’ ಅನ್ನೋದು ಸೋ ಈಸಿ. ನೀವು ಕೇಳಿದ್ರಾ? ಅವರಿಬ್ಬರು ನಿಮ್ಮ ಫ್ರೆಂಡ್ಸ್. ನೀವು ಅವರ ಫ್ರೆಂಡ್‌ ಅಲ್ವಾ? ನಿಮಗೂ ಸೇಫ್ ಮಾಡುವ ಅವಕಾಶ ಸಿಕ್ತು. ಆದರೆ, ನೀವು ಅಲ್ಲಿ ಎಥಿಕ್ಸ್ ಹುಡುಕುತ್ತೀರಿ. ಫ್ರೆಂಡ್‌ ಆಗಿ ಅವರಿಬ್ಬರಲ್ಲಿ ನೀವೂ ಒಬ್ಬರನ್ನ ಸೇಫ್ ಮಾಡಬಹುದಿತ್ತು. ಮಾಡಲಿಲ್ಲ! ಎಂದಿದಕ್ಕೆ ಸಂಗೀತಾ, ವರ್ತೂರು ಸಂತೋಷ್ ಮನೆಗೆ ನಾನು ಬಂದಿದ್ದೆ. ಅಲ್ಲಿಗೆ ಬರದೇ ಹೋಗಿದ್ದರೆ ನನಗೆ ಗೆಲ್ಲುವ ಚಾನ್ಸಸ್ ಇರ್ತಿರ್ಲಿಲ್ಲ ಎಂದಿದಕ್ಕೆ ಸುದೀಪ್, ನೋ.. ಇವರಿಬ್ಬರು ನಿಮ್ಮನ್ನ ಅಲ್ಲಿಗೆ ಕಳುಹಿಸಲಿಲ್ಲ ಅಂದಿದ್ದರೆ ನೀವು ಗೆಲ್ಲೋಕೆ ಸಾಧ್ಯ ಆಗುತ್ತಿರಲಿಲ್ಲ. ಸರ್‌ಫೇಸ್‌ ಲೆವೆಲ್ ಶುರುವಾಗೋದು ಇಲ್ಲಿ. ಸಂಗೀತಾ  ಪ್ರಾಬಬಿಲಿಟಿ ಆಫ್‌ ವಿನ್ನಿಂಗ್ ಇತ್ತೆಂದರು. ಸುದೀಪ್ - ಅದು ಮ್ಯಾಟರ್‌ ಅಲ್ಲ ಎಂದಿದಕ್ಕೆ ಸಂಗೀತಾ  ಅಲ್ಲಿ ಲಕ್ ಇತ್ತು ಎಂದರು.ಕಿಚ್ಚ ಸುದೀಪ್ , ಬೇಸಿಕಲಿ.. ಅವರಿಬ್ಬರಿಗೆ ಕ್ರೆಡಿಟ್ ಕೊಡೋದು ಬೇಡ ಎಂದಿದಕ್ಕೆ ಸಂಗೀತಾ , ನೋ ಸರ್‌. ನಾನು ಒಪ್ಪಿಕೊಳ್ಳಲ್ಲ ಎಂದು ಹೇಳಿದರು.


ಕಿಚ್ಚ ಸುದೀಪ್, "ಫ್ರೆಂಡ್‌ಶಿಪ್‌ ಬಗ್ಗೆ ನಾನು ಫ್ಲಿಪ್‌ನಲ್ಲಿ ಮಾತನಾಡಬೇಕಾದರೆ ನಾನೂ ಹಾನೆಸ್ಟ್ ಆಗಿ ಕೇಳಬೇಕು ಯಾಕೆ ಈ ಕಾಮೆಂಟ್‌? ಕಾರ್ತಿಕ್, ತನಿಷಾ ನಿಮ್ಮ ಪರ ನಿಂತರೂ ಹಾಗೆ ಹೇಳಿದ್ಯಾಕೆ? ಪದೇ ಪದೇ ನೀವು ‘ನೀವ್ಯಾಕೆ ಕೇಳಲಿಲ್ಲ, ನೀವು ಕೇಳಬೇಕಿತ್ತು’ ಅಂತ ಹೇಳುತ್ತಲೇ ಇದ್ರಿ. ಬಹುಶಃ ಪ್ರತಿಯೊಬ್ಬ ತಾಯಿಯೂ ಇನ್ಮೇಲೆ ಮಗು ಕೇಳ್ತಿಲ್ಲ ಅಂತ ಊಟ ಕೊಡೋದನ್ನ ನಿಲ್ಲಿಸಿಬಿಟ್ಟರೆ.. ಆ ಸಂಬಂಧ ಏನು? ಪಕ್ಕದಲ್ಲಿರುವ ಸ್ನೇಹಿತ ಹಸಿವು ಅಂತ ಬಾಯ್ಬಿಟ್ಟು ಹೇಳಲಿಲ್ಲ.. ಅದಕ್ಕೆ ಗೊತ್ತಾಗಲಿಲ್ಲ ಅಂದ್ರೆ ಆ ವಾಲ್ಯೂ ಏನು? ಏನೂ ಯೋಚನೆ ಮಾಡದೆ.. ನಿಮ್ಮ ಮಾತನ್ನ ಕೇಳಿದ ತಕ್ಷಣ ಆಕಡೆಗೆ ಕಳುಹಿಸಿಕೊಟ್ರಲ್ಲ. ಅದಾದ್ಮೇಲೂ ಅನ್ನಿಸಿಕೊಂಡ್ರಲ್ಲ. ಅದರ ವಾಲ್ಯೂ ಏನು? ಇದೇನಾ ನಿಮ್ಮ ಫ್ರೆಂಡ್‌ಶಿಪ್‌? ಈ ಫ್ರೆಂಡ್‌ಶಿಪ್‌ನಲ್ಲಿ ನೀವು 100% ಗಿವಿಂಗ್ ಆಗಿದ್ದೀರಾ?" ಎಂದು ಪ್ರಶ್ನಿಸಿದಾಗ ಸಂಗೀತಾ ನಾನು ನನ್ನ ಕಡೆಯಿಂದ ಕೊಟ್ಟಿದ್ಧೀನಿ ಸರ್. ಅಲ್ಲಿತನಕ. ಮತ್ತೆ ಅದಕ್ಕೆ ಸುದೀಪ್ ಸಂಗೀತಾ ಕೊಟ್ಟಿದ್ದಾರೆ ಅನ್ಸುತ್ತಾ ಎಂದ ಕೇಳಿದಕ್ಕೆ ಕಾರ್ತಿಕ್ ಹಾಗೂ ಸಂಗೀತಾ ನೋ ಸರ್ ಎಂದರು. ಕಿಚ್ಚ ಸುದೀಪ್  ಆಗ ನಿಮ್ಮ ಮೂರು ಜನರ ಫ್ರೆಂಡ್‌ಶಿಪ್ ಹೇಗನಿಸುತ್ತದೆಂದು ಕೇಳಿದಕ್ಕೆ ತನಿಷಾ ಎಲ್ಲೋ ಒಂದು ಕಡೆ ಫ್ರೆಂಡ್‌ಶಿಪ್ ಹಾಳಾಗಬಾರದು ಅಂತ ಸ್ವಲ್ಪ ಜಾಸ್ತಿನೇ ಅಡ್ಜಸ್ಟ್ ಮಾಡಿಕೊಳ್ತಿದ್ದೀವಿ ಅನ್ಸತ್ತೆ ಸರ್ ಎಂದಿದ್ದಾರೆ.


ಇದನ್ನು ಓದಿ: “ಅಪ್ಪಾ ತಪ್ಪಾಯ್ತಪ್ಪ… ಕ್ಷಮಿಸು!”- ತಂದೆ ಕರೆ ಮಾಡುತ್ತಿದ್ದಂತೆ ಬಿಕ್ಕಿಬಿಕ್ಕಿ ಅಳುತ್ತಾ ಡ್ರೋಣ್ ಪ್ರತಾಪ್ ಹೀಗಂದಿದ್ದೇಕೆ?


ಕೊನೆಯದಾಗಿ ಕಿಚ್ಚ ಸುದೀಪ್‌  "ಸಂಗೀತಾ ಹೇಗಿದ್ದರೂ ಸೇಫ್ ಆಗ್ತಾಳೆ ಈಗ ಅಂತ ಕಾರ್ತಿಕ್, ತನಿಷಾ ಮಾತನಾಡಿಕೊಂಡರು. ಅದು ವರ್ತೂರು ಸಂತೋಷ್‌ಗೆ ಕೇಳಿಸಲಿಲ್ಲ. ವರ್ತೂರು ಸಂತೋಷ್ ಬಂದ್ಮೇಲೆ ಸಿರಿ ಹೆಸರನ್ನ ತಗೊಳ್ತಾರೆ. ದುರಾದೃಷ್ಟ ಏನಂದರೆ.. ಸಂಗೀತಾ ಅವರೇ.. ತಾವು ಸೇಫ್ ಆದ್ಮೇಲೂ ಇಷ್ಟೆಲ್ಲಾ ಮಾಡಿದ್ದು ಸರಿ ಅಲ್ಲ. ಹೇಗೆ ಕಾಣ್ತಿದ್ದೀರಾ ತಾವು ಅಂದರೆ… Actually ಡೌಟ್ ಇದೆ. ತಾವು ಮೂರೂ ಜನ ಆಡೋಕೆ ಹೋಗಿದ್ದೀರಾ.. ಇಲ್ಲ ಸಂಗೀತಾನ ಗೆಲ್ಲಿಸೋಕೆ ನೀವಿಬ್ಬರೂ ಹೋಗಿದ್ದೀರಾ ಅಂತ. ಹಾಗೇ ಹೊರಗಡೆ ಇದೆ. ಫ್ರೆಂಡ್‌ಶಿಪ್‌ ತಪ್ಪು ಅಂತ ಹೇಳುತ್ತಿಲ್ಲ. ಡೋಂಟ್‌ ಮೇಕ್‌ ಇಟ್‌ ಟಾಕ್ಸಿಕ್. ಹೊರಗಡೆ ನೋಡುತ್ತಿರುವವರಿಗೆ ಟಾಕ್ಸಿಕ್ ಮಾಡಬೇಡಿ. ಮಾರಲ್ ಆಫ್ ದಿ ಸ್ಟೋರಿ - ವಾದ ಮಾಡುತ್ತಿದ್ದವರು ಸೇಫ್ ಆಗಿದ್ದಾರೆ. ಉತ್ತರ ಕೊಡುತ್ತಿದ್ದವರು ನಾಮಿನೇಟ್ ಆಗಿದ್ದಾರೆ."ಎಂದು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.