BBK 10: `ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದು ರೀ`: ಕಿಚ್ಚನ ಮಾತಿಗೆ ವೀಕ್ಷಕರ ಚಪ್ಪಾಳೆ!
Bigg Boss Kannada: ಬಿಗ್‌ಬಾಸ್ ಮನೆಯೊಳಗೆ ಟಾಸ್ಕ್ಗಳಿಗಾಗಿ ತುಕಾಲಿ ಸಂತು ಮತ್ತು ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡಿದ್ದನ್ನ ನೋಡಿ, ವಾರದ ಕಥೆಯ ಕಿಚ್ಚನ ಪಂಚಾಯಿತಿಯಲ್ಲಿ `ನಾನೂ ತಲೆ ಬೋಳಿಸಿದ್ಮೇಲೆ ಜನಪ್ರಿಯತೆ ಪಡೆದಿದ್ದು` ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.
Tukali Santosh And Karthik Mahesh: ಬಿಗ್‌ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮ ಆರಂಭವಾಗಿ ಏಳು ವಾರಗಳು ಉರುಳಿದ್ದು, ಏಳನೇ ವಾರದ ಟಾಸ್ಕ್‌ಗಳಲ್ಲಿ ಬಂದ ಸವಾಲಿನಿಂದಾಗಿ ತುಕಾಲಿ ಸಂತು ಹಾಗೂ ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡರು. ಚಾಲೆಂಜ್‌ನ ಸ್ವೀಕರಿಸಿ ಕಂಪ್ಲೀಟ್ ಹೆಡ್ ಶೇವ್ ಮಾಡಿದರು. ಇದೇ ವಿಚಾರದ ಕುರಿತಾಗಿ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮಾತಿಗಿಳಿದರು. ಕಿಚ್ಚ ಸುದೀಪ್ ಅಭಿನಯದ, 2001ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಸಿನಿಮಾ ʼಹುಚ್ಚ’ದಲ್ಲಿ ದೃಶ್ಯಗಳಿಗಾಗಿ ತಲೆ ಬೋಳಿಸಿಕೊಂಡಿದ್ದರು. ‘ಹುಚ್ಚ’ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ಸಚ್ಚಿದಾನಂದ ಅಲಿಯಾಸ್ ‘ಕಿಚ್ಚʼ ಆಗಿದ್ದು, ಈ ಸಿನಿಮಾದ ಪಾತ್ರದಿಂದಾಗಿ ಸುದೀಪ್‌ಗೆ ಸಿಕ್ಕ ಜನಪ್ರಿಯತೆಯಿಂದಲೇ, ಇವರ ಹೆಸರಿನೊಂದಿಗೆ ‘ಕಿಚ್ಚ’ ಬೆರತುಹೋಗಿದೆ. 22 ವರ್ಷಗಳ ಬಳಿಕವೂ ಎಲ್ಲರೂ ಸುದೀಪ್‌ನ್ನ ಪ್ರೀತಿಯಿಂದ ‘ಕಿಚ್ಚ ಸುದೀಪ್’ ಅಂತ ಕರೆಯುತ್ತಾರೆ.
ನಿನ್ನೆ ನಡೆದ ವಾರದ ಪಂಚಾಯಿತಿಯಲ್ಲಿ, ಕಿಚ್ಚ ಸುದೀಪ್ ಬಿಗ್‌ಬಾಸ್ ವೇದಿಕೆ ಮೇಲೆ ‘ಹುಚ್ಚ’ ಸಿನಿಮಾಗಾಗಿ ತಾವು ಹೆಡ್ ಶೇವ್ ಮಾಡಿಕೊಂಡಿದ್ದನ್ನ ನೆನೆದು ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಶನಿವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ತುಕಾಲಿ ಸಂತು ಹಾಗೂ ಕಾರ್ತಿಕ್ ಮಹೇಶ್ ಜೊತೆಗೆ ಮಾತಿಗಿಳಿದ ಸುದೀಪ್, "ಹೇಗಿದೆ ಹವಾಮಾನ?" ಎಂದು ಪ್ರಶ್ನಿಸಿದಕ್ಕೆ ಕಾರ್ತಿಕ್ "ಚೆನ್ನಾಗಿದೆ. ಡಿಫರೆಂಟ್ ಆಗಿದೆ" ಎಂದು ಹೇಳಿದರು. ಆಗ ಸುದೀಪ್ ತುಕಾಲಿಗೆ "ತಲೆ ತುಂಬಾ ತಂಪಾಗಿ ಇರಬೇಕಲ್ವಾ?" ಎಂದು ಸುದೀಪ್ ಕೇಳಿದಾಗ, ತುಕಾಲಿ ಸಂತು "ಹೌದು.. ನನಗಂತೂ ಈ ವಾರ ತುಂಬಾ ಡಿಫರೆಂಟ್ ಆಗಿತ್ತು. ಮರೆಯುವ ಹಾಗೇ ಇಲ್ಲ. ನನ್ನದು ಸಿನಿಮಾ ಕಮಿಟ್‌ಮೆಂಟ್ ಇತ್ತು" ಎಂದರು.
ಇದನ್ನೂ ಓದಿ: BBK 10: ಸಂಗೀತಾಗೆ ನಮ್ರತಾ ಬೆಸ್ಟ್ ಫ್ರೆಂಡ್:ಕಾರ್ತಿಕ್ ಟೀಂನಲ್ಲಿ ಇದ್ದಾಗ ಒಂದು ತರ ಮಾತು...!
ಈ ವೇಳೆ ಸುದೀಪ್ "ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದು ರೀ" ಅಂತ ಸುದೀಪ್ ಹೇಳಿದಾಗ ನೆರೆದಿದ್ದ ವೀಕ್ಷಕರು ಚಪ್ಪಾಳೆ ತಟ್ಟುತ್ತಾರೆ. ಆಗ "ಬಹಳ ಲಕ್ ಆಗಿ ನಿಮ್ಮಿಬ್ಬರ ಹತ್ತಿರ ಬಂದಿದೆ ಅಂದುಕೊಳ್ಳಿ" ಎಂದು ಸುದೀಪ್ ಹೇಳಿದಾಗ "ಹೌದು ಸರ್" ಅಂತಾರೆ ಕಾರ್ತಿಕ್ ಮಹೇಶ್ ಮತ್ತು ತುಕಾಲಿ ಸಂತು. ಬಳಿಕ ಸುದೀಪ್ ಎದುರಾಳಿ ತಂಡಕ್ಕೆ ಸಂಗೀತಾ ಕ್ಯಾಪ್ಟನ್ ಆಗ್ತಾರೆ. ತಲೆ ಬೋಳಿಸಿಕೊಳ್ಳುವ ಸವಾಲು ಹಾಕ್ತಾರೆ ಆಗ ಏನ್ನನ್ನಿಸಿತು ಎಂದು ಕೇಳಿದಾಗ ಕಾರ್ತಿಕ್ "ಎರಡು ನಿಮಿಷ ಟೈಮ್ ಕೊಟ್ಟಿದ್ದರು. ನನ್ನ ಟೀಮ್‌ಗೋಸ್ಕರ ಈ ತರಹ ಒಂದು ಮಾಡಿದರೆ, ಮುಂದೆ ಟೀಮ್‌ನವರೂ ಮೋಟಿವೇಟ್ ಆಗ್ತಾರೆ ಅನಿಸ್ತು. ಕೂದಲು ತಾನೇ ಪರ್ವಾಗಿಲ್ಲ ಅಂತ ಕೊಟ್ಟೆ ಸರ್ ಎಂದರು.
ಬಳಿಕ ತುಕಾಲಿ "ಟೀಮ್‌ಗಾಗಿ ಏನಾದರೂ ಸರಿ. ನಮ್ಮನ್ನ ನಾವು ಪ್ರೂವ್ ಮಾಡಿಕೊಳ್ಳೋಕೆ ಒಂದು ಅವಕಾಶ ಸಿಕ್ಕಂತಾಯ್ತು. ಕೂದಲು ಕೊಟ್ಟಾದರೂ ಸರಿ ನಾವು ಪ್ರೂವ್ ಮಾಡಿಕೊಳ್ಳಬೇಕು ಅನಿಸಿತು. ಕೂದಲು ಹೋದರೆ ಮತ್ತೆ ಬರುತ್ತೆ. ಆದರೆ ಈ ಮೊಮೆಂಟ್ ಬರಲ್ಲ ಅಂತ ಕೊಟ್ಟುಬಿಟ್ವಿ" ಎಂದರು. ಅದಕ್ಕೆ ಕಿಚ್ಚ ಸುದೀಪ್ "ಕೂದಲು ಬರಲ್ಲ ಅಂತ ಇದ್ದಿದ್ದರೆ..?" ಅಂತ ಪ್ರಶ್ನಿಸಿದಕ್ಕೆ ತುಕಾಲಿ ಸಂತು ಬರುತ್ತೆ ಅಂತಲೇ ಕೊಟ್ವಿ ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.