BBK 10: ಸಂಗೀತಾಗೆ ನಮ್ರತಾ ಬೆಸ್ಟ್ ಫ್ರೆಂಡ್‌:ಕಾರ್ತಿಕ್ ಟೀಂನಲ್ಲಿ ಇದ್ದಾಗ ಒಂದು ತರ ಮಾತು...!

Sangeetha And Namratha in BBK: ಬಿಗ್‌ಬಾಸ್‌ ಮನೆಯೊಳಗೆ  ಸಂಗೀತಾ ನಮ್ರತಾ ಬಳಿ ಕಾರ್ತಕ್‌ ಟೀಂ ಹಾಗೂ ಅದರಲ್ಲಿರುವ ಸದಸ್ಯರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

Written by - Zee Kannada News Desk | Last Updated : Nov 25, 2023, 10:46 AM IST
  • ಬಿಗ್‌ಬಾಸ್‌ ಮನೆಯಲ್ಲಿ ತನಿಷಾ ಕುಪ್ಪಂಡ, ಮೈಕಲ್ ಟೀಂನಲ್ಲಿ ಸಂಗೀತಾ ಇದ್ದಾಗಲೂ, ಇಲ್ಲದಿದ್ದಾಗಲೂ ಈ ಟೀಂ ಗೆದ್ದಿದೆ.
  • ಸಂಗೀತಾ ಕಾರ್ತಿಕ್‌ ಟೀಂ ಲಕ್‌ನಿಂದ ಗೆದ್ದಿದ್ದಾರೆ ಅಂತ ಅಂದಾಗ, ಅದಕ್ಕೆ ವಿನಯ್ ಹೌದು ಎಂದು ಸಮ್ಮತಿ ಸೂಚಿಸಿದ್ದಾರೆ.
  • ವಿನಯ್‌ ಹಾಗೂ ಸಂಗೀತಾ ಇವರಿಬ್ಬರೂ ಫ್ರೆಂಡ್ಸ್, ಸಂಗೀತಾ ಹೇಳಿದ್ದಕ್ಕೆಲ್ಲ ವಿನಯ್ ಈಗ ಹು ಅಂತಾರೆ, ಸಂಗೀತಾ ಗೆದ್ದರೆ ವಿನಯ್ ಈಕೆಯನ್ನು ಭುಜದ ಮೇಲೆ ಹಾಕಿಕೊಂಡು ಮೆರೆಸ್ತಾರೆ.
BBK 10: ಸಂಗೀತಾಗೆ ನಮ್ರತಾ ಬೆಸ್ಟ್ ಫ್ರೆಂಡ್‌:ಕಾರ್ತಿಕ್ ಟೀಂನಲ್ಲಿ ಇದ್ದಾಗ ಒಂದು ತರ ಮಾತು...! title=

Sangeetha Shares About Karthik Team: ಬಿಗ್‌ಬಾಸ್‌  ಮನೆಯಲ್ಲಿ ತನಿಷಾ ಕುಪ್ಪಂಡ, ಮೈಕಲ್ ಟೀಂನಲ್ಲಿ ಸಂಗೀತಾ ಇದ್ದಾಗಲೂ, ಇಲ್ಲದಿದ್ದಾಗಲೂ ಈ ಟೀಂ ಗೆದ್ದಿದ್ದು, ಇದೀಗ ಸಂಗೀತಾ ಶೃಂಗೇರಿ ಕಾರ್ತಿಕ್‌ ಟೀಂನಿಂದ ವಿನಯ್ ಟೀಂಗೆ ಜಂಪ್ ಆಗಿದ್ದಾರೆ. ಅಂದು ಕಾರ್ತಿಕ್ ಟೀಂನಲ್ಲಿದ್ದು, ತಮ್ಮ ಗೆಲುವನ್ನು ಸಂಭ್ರಮಿಸಿದ್ದ ಸಂಗೀತಾ, ಇದೀಗ ವಿನಯ್ ಟೀಂಗೆ ಹೋಗಿ ಸೋತ ಬಳಿಕ ಕಾರ್ತಿಕ್ ಟೀಂ ಲಕ್‌ನಿಂದ ಗೆದ್ದಿದೆ ಅಂತ ಹೇಳಿದ್ದಾರೆ. ಆಟದಲ್ಲಿ ಸೋತ ಬಳಿಕ ಡೈನಿಂಗ್ ಟೇಬಲ್‌ನಲ್ಲಿ ಕೂತ ಸಂಗೀತಾ, ನಮ್ರತಾ, ವಿನಯ್ ಗೌಡ  ಆಟದ ಸೋಲು-ಗೆಲುವಿನ ಬಗ್ಗೆ ಚರ್ಚೆ ಮಾಡಿದ್ದಾರೆ. 

ಆ ವೇಳೆ ಸಂಗೀತಾ ಕಾರ್ತಿಕ್‌ ಟೀಂ ಲಕ್‌ನಿಂದ ಗೆದ್ದಿದ್ದಾರೆ ಅಂತ ಅಂದಾಗ, ಅದಕ್ಕೆ ವಿನಯ್ ಹೌದು ಎಂದು ಸಮ್ಮತಿ ಸೂಚಿಸಿದ್ದಾರೆ. ಅಂದು ನಾವು ಫೇರ್ ಗೇಮ್ ಆಡಿ, ಆಟ ಗೆದ್ದಿವಿ ಎಂದು ಕಾರ್ತಿಕ್, ತನಿಷಾ ಜೊತೆ ಸೇರಿಕೊಂಡು ಕುಣಿದಿದ್ದ ಸಂಗೀತಾಗೆ ಸದ್ಯ ವಿನಯ್ ಗೌಡಸ್ವೀಟ್ ರೀತಿ ಕಂಡಿದ್ದಾರೆ, ನಮ್ರತಾ, ಸ್ನೇಹಿತ್ ಕೂಡ ಒಳ್ಳೆಯವರ ತರ ಕಾಣುತ್ತಿದ್ದಾರೆ. ಅಂದು ಕಾರ್ತಿಕ್ ಟೀಂನಲ್ಲಿ ಸಂಗೀತಾ ಇದ್ದಾಗಲೂ ಲಕ್ ಕೈ ಹಿಡಿದಿರಬೇಕು, ಅದನ್ನು ನೋಡಿ ನಾವು ಶ್ರಮ ಪಟ್ಟಿ ಗೆದ್ದಿದ್ದೇವೆ ಅಂತ ಕುಣಿದಿರಬೇಕು ಅಲ್ಲವೇ ಅಂತ ಸಂಗೀತಾ ಎಂದಿದ್ದಾರೆ

ಇದನ್ನೂ ಓದಿ: 

ಇದೀಗ ತನಿಷಾ ಏನೇ ಮಾತಾಡಿದ್ರೂ ಸಂಗೀತಾಗೆ ಇಷ್ಟವೇ ಆಗ್ತಿದರೇ, ಕಾರ್ತಿಕ್ ಅಂದು ತೋರಿಸಿದ್ದ ಸ್ನೇಹ, ಪ್ರೀತಿ, ಕಾಳಜಿ ಎಲ್ಲವನ್ನು ಸಂಗೀತಾ ಮರೆತು ಡಬಲ್ ಗೇಮ್ ಆಡುತ್ತಿದ್ದಾರೆ, ಫೇಕ್ ಎನ್ನೋ ರೀತಿಯಲ್ಲಿ ಸಂಗೀತಾ ನಮ್ರತಾ ಮುಂದೆ ಹೇಳಿಕೊಂಡಿದ್ದಾರೆ. ಅಂದು ನಮ್ರತಾ ಜೊತೆ ಕಾರ್ತಿಕ್ ಫ್ಲರ್ಟ್ ಮಾಡಿದ್ರೆ, ಆಟದಲ್ಲಿ ಅವರಿಗೆ ಆದ್ಯತೆ ಕೊಟ್ಟಿದ್ರೆ ಸಂಗೀತಾಗೆ ಸಹಿಸಲು ಆಗುತ್ತಿರಲಿಲ್ಲ. ನಮ್ರತಾ ಜೊತೆ ಸಂಗೀತಾ ಸಿಕ್ಕಾಪಟ್ಟೆ ಜಗಳ ಆಡಿದ್ದವರು, ಈಗ ಇದೇ ನಮ್ರತಾ ಮುಂದೆ ಸಂಗೀತಾ ಮನಸ್ಸಿನ ಮಾತನ್ನು ಹಂಚಿಕೊಳ್ಳುತ್ತಿದ್ದಾರೆ. ವಿನಯ್ ಗೌಡ, ಸಂಗೀತಾ ಜಗಳ ಆಡೋದನ್ನು ನೋಡಿ ವೀಕ್ಷಕರು ಇವರಿಬ್ಬರಿಗೂ ಏನಾಗಿದೆ? ಮೊದಲೇ ಸಮಸ್ಯೆ ಇತ್ತಾ ಅಂತೆಲ್ಲ ಪ್ರಶ್ನೆ ಹಾಕಿಕೊಂಡು ತಲೆ ಕೆಡಿಸಿಕೊಂಡಿದ್ದರು. 

ಈಗ ವಿನಯ್‌ ಹಾಗೂ ಸಂಗೀತಾ ಇವರಿಬ್ಬರೂ ಫ್ರೆಂಡ್ಸ್, ಸಂಗೀತಾ ಹೇಳಿದ್ದಕ್ಕೆಲ್ಲ ವಿನಯ್ ಈಗ ಹು ಅಂತಾರೆ, ಸಂಗೀತಾ ಗೆದ್ದರೆ ವಿನಯ್ ಈಕೆಯನ್ನು ಭುಜದ ಮೇಲೆ ಹಾಕಿಕೊಂಡು ಮೆರೆಸ್ತಾರೆ. ಬಿಗ್ ಬಾಸ್ ಮನೆಯಲ್ಲಿ ತೋರಿಸುವ ಎಪಿಸೋಡ್‌ಗಳನ್ನು ನೋಡಿದರೆ ಸಂಗೀತಾ ಬಗ್ಗೆ ಕಾರ್ತಿಕ್ ಅಷ್ಟಾಗಿ ಏನೂ ಹೇಳೋದಿಲ್ಲ. ಯಾವ ಯಾವ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಜಗಳ ಆಯ್ತು ಅಂತ ಹೇಳಬಹುದು ಅಷ್ಟೇ. ಆದರೆ ಸಂಗೀತಾ ಅವರು ಮಾತ್ರ ಕಾರ್ತಿಕ್ ಹೇಗೆ? ತನಿಷಾ ಹೇಗೆ? ಕಾರ್ತಿಕ್ ಟೀಂ ಹೇಗಿದೆ? ಅಲ್ಲಿನ ಪ್ಲಸ್, ಮೈನಸ್ ಎಲ್ಲವನ್ನು ನಮ್ರತಾ ಟೀಂ ಜೊತೆ ಹಂಚಿಕೊಳ್ಳುತ್ತಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News