BBK10 Super Sunday With Sudeep: ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌ ಗೌಡಗೆ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್‌ ಬಿಟ್ಟರೆ ಹೆಚ್ಚು ಕೋಪ ಇರುವುದು ಡ್ರೋನ್ ಪ್ರತಾಪ್ ಮೇಲೆ ಇರುವುದರಿಂದ ಕಳೆದ ವಾರ ಪೂರ್ತಿ ಪ್ರತಾಪ್‌ ಜೊತೆಗೆ ವಿನಯ್‌ ಒಂದಲ್ಲಾ ಒಂದು ರೀತಿಯಲ್ಲಿ ಕಿರಿಕ್ ತೆಗೆಯುತ್ತಿದ್ದರು. ಅದರಲ್ಲೂ ಪ್ರತಾಪ್‌ ಚಾರಿತ್ರ್ಯವಧೆ ಮಾಡುವಂತಹ  'ಮಹಿಳಾ ಸ್ಪರ್ಧಿಗಳನ್ನು ತುಂಬಾ ಕೆಟ್ಟದಾಗಿ ನೋಡ್ತಾನೆ' ಹೇಳಿಕೆಗಳನ್ನು ಕೂಡ ನೀಡಿ, ಪ್ರತಾಪ್‌ ಬಗ್ಗೆ ವಿನಯ್ ಕಾಮೆಂಟ್ ಮಾಡಿದ್ದರು. ಅದರ ಬಗ್ಗೆ ಈಗ 'ಕಿಚ್ಚ' ಸುದೀಪ್ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ನಿನ್ನೆ ನಡೆದ 'ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ' ಸಂಚಿಕೆಯಲ್ಲಿಈ ವಿಚಾರದ ಬಗ್ಗೆ ಚರ್ಚೆ ಆಗಿದ್ದು, ಎಲ್ಲ ಸ್ಪರ್ಧಿಗಳಿಗೆ ನೇರವಾಗಿ "ಪ್ರತಾಪ್‌ ಅವರು ಮನೆಯ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇಲ್ಲ" ಎಂದು ಸ್ಟೇಟ್‌ಮೆಂಟ್ ನೀಡಿ, 'ಯೆಸ್' ಆರ್ 'ನೋ' ಹೇಳಿ ಎಂದು ಸುದೀಪ್‌ ತಿಳಿಸಿದರು. ಇದಕ್ಕೆ ಇಶಾನಿ, ತುಕಾಲಿ ಸಂತು, ವಿನಯ್ ಗೌಡ 'ಯೆಸ್‌' ಎಂದು ಹೇಳಿದರು. ಅಂದ್ರೆ, ಅವರ ಪ್ರಕಾರ, 'ಪ್ರತಾಪ್‌ ಮಹಿಳಾ ಸ್ಪರ್ಧಿಗಳನ್ನು ತುಂಬಾ ಕೆಟ್ಟದಾಗಿ ನೋಡ್ತಾರೆ' ಅಂತ ಅರ್ಥ. 'ಯೆಸ್' ಎಂದಿದ್ದರ ಕುರಿತು ಈಶಾನಿ, ಸಂತು, ವಿನಯ್ ಗೌಡಗೆ ಸುದೀಪ್ ಪ್ರಶ್ನೆ ಮಾಡಿದರು.


ಇದನ್ನು ಓದಿ: ರಕ್ಷಕ್‌ ಬುಲೆಟ್‌ ಬಿಗ್‌ ಬಾಸ್ ಮನೆಯಿಂದ ಹೊರ ಬೀಳಲು ಅಸಲಿ ಕಾರಣ ಇದೇನಾ?


ಕಿಚ್ಚ ಸುದೀಪ್‌ ನೀಡಿದ ಸ್ಟೇಟ್‌ಮೆಂಟ್‌ಗೆ ಇಶಾನಿ ಪ್ರತಾಪ್ ಸರಿಯಾಗಿ ಸಂವಹನ ಮಾಡೋದಿಲ್ಲ, ಅದಕ್ಕೆ ಈ ರೀತಿ ನನಗೆ ಅನ್ನಿಸುತ್ತದೆ ಎಂದು ಹೇಳಿದಕ್ಕೆ ಸುದೀಪ್, ಅಭಿಪ್ರಾಯಕ್ಕೂ ಸಂವಹನಕ್ಕೂ ಸಂಬಂಧ ಇಲ್ಲಎಂದು ಹೇಳಿದರು. ಆಗ 'ಯೆಸ್' ಎಂದಿದ್ದ ಇಶಾನಿ 'ನೋ' ಎಂದು ಬೋರ್ಡ್ ತಿರುಗಿಸಿದರು. ಬಳಿಕ ತುಕಾಲಿ ಸಂತು, ಪ್ರತಾಪ್ ಹತ್ರನೂ ಒಳ್ಳೆಯ ರೊಮ್ಯಾಂಟಿಕ್ ಹೀರೋ ಇದ್ದಾನೆ ಎಂದಿದಕ್ಕೆ ಸುದೀಪ್ ರೊಮ್ಯಾಂಟಿಕ್ ಬಗ್ಗೆ ನಾವು ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ತುಕಾಲಿನೂ 'ಯೆಸ್' ಎಂದಿದ್ದ ತುಕಾಲಿ ಸಂತು ಕೂಡ 'ನೋ' ಎಂದು ಬೋರ್ಡ್ ತಿರುಗಿಸಿದರು.


ಕೊನೆಯದಾಗಿ ವಿನಯ್‌,  ಪ್ರತಾಪ್ ಏನ್ ಯೋಚನೆ ಮಾಡ್ಕೊಂಡು, ಎಲ್ಲಿ ನೋಡ್ತಾ ಇರ್ತಾನೆ ಅಂತಾನೇ ಗೊತ್ತಾಗಲ್ಲ ಸರ್ ಅಂದಿದಕ್ಕೆ ಸುದೀಪ್‌, ಯುವರ್ ರಾಂಗ್.. ಯಾರಾದರೂ ಕೆಟ್ಟ ದೃಷ್ಟಿಯಲ್ಲಿ ನೋಡುವುದಾಗಲಿ, ಸ್ಪರ್ಶಿಸುವುದಾಗಲಿ ಮಾಡಿದರೆ, ಆ ಸ್ಪರ್ಶದಲ್ಲಿ ನಿಮಗೆ ಅರ್ಥ ಆಗತ್ತೆ, ಇದು ಸರಿ ಇಲ್ಲ ಅಂತ. ಅದರ ಮೇಲೆ ನೀವು ನಂಬಬೇಕೇ ಹೊರತು, ಪ್ರಭಾವಿಸುವುದರ ಮೇಲಲ್ಲ ಅಂತ ಹೇಳುತ್ತಿದ್ದಂತೆಯೇ, ತಮ್ಮ ಅಭಿಪ್ರಾಯ ಬದಲಾಯಿಸುವ ವಿನಯ್, ನೋ ಎಂದು ಬೊರ್ಡ್ ತಿರುಗಿಸಿದರು.ನಂತರ ವಿನಯ್ ಗೌಡ ಅವರು 'ನನ್ನಿಂದ ತಪ್ಪಾಗಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ..' ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.