BBK10: `ಇದು ನನ್ನ ಟೀಂಗೆ ಮಾಡಿದ ಮೋಸ ಒಂದೇ ಅಲ್ಲ, ನನಗೆ ನಾನೇ ಮಾಡಿಕೊಂಡ ಮೋಸ`: ಮೈಕಲ್ ಅಜಯ್
Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಯಾವಾಗಲು, ಮುಂದೆ ಯಾರೇ ಇರಲೀ, ಇರುವ ವಿಷಯವನ್ನು ಇದ್ದ ಹಾಗೆ ಹೇಳುತ್ತಿದ್ದವರು, ಸದ್ಯ ಪ್ರೇಯಸಿ ಇಶಾನಿಗೋಸ್ಕರ ಸುಳ್ಳು ಫಲಿತಾಂಶವನ್ನು ನೀಡಿದ್ದು, ತಮ್ಮ ತಂಡದವರಿಗೆ ಮೋಸ ಮಾಡಿದ್ದಾರೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Michael Vs Eshani: ಬಿಗ್‌ಬಾಸ್ ಮನೆಯಲ್ಲಿ, ನಿನ್ನೆ ಬಿಗ್‌ಬಾಸ್ ಟಾಸ್ಕ್‌ವೊಂದು ನೀಡಿದ್ದರು. ಆ ಆಟದಲ್ಲಿ ಸೊಂಟಕ್ಕೆ ಟಬ್ ಕಟ್ಟಿಕೊಂಡು ಪೋಲ್‌ಗೆ ಕಟ್ಟಿದ್ದ ಬಲೂನ್ ಅನ್ನು ಮುಟ್ಟದೆ, ಒಡೆದು ಅದರಲ್ಲಿರುವ ನೀರನ್ನು ಸೊಂಟಕ್ಕೆ ಕಟ್ಟಿದ್ದ ಟಬ್‌ನಲ್ಲಿ ಹಾಕಿ, ಅದನ್ನು ತಂಡಕ್ಕೆ ಕೊಟ್ಟಿದ್ದ ದೊಡ್ಡ ಬೌಲ್‌ನಲ್ಲಿ ಹಾಕಬೇಕಿತ್ತು. ಇದು ಕಷ್ಟದ ಟಾಸ್ಕ್ ಆಗಿದ್ದು ಗಂಧದ ಗುಡಿ ಹಾಗೂ ವಜ್ರಕಾಯ ತಂಡಗಳು ಈ ಟಾಸ್ಕ್ ಆಡುವಾಗ ಒಂದಷ್ಟು ಉಲ್ಲಂಘನೆ ಮಾಡಿದ್ದವು.
ಈ ಆಟದ ಕೊನೆಯ ರೌಂಡ್‌ನಲ್ಲಿ ತನಿಷಾ ಕೈಯಿಂದಲೇ ಬಲೂನ್ ಒಡೆದರೆ, ಇತ್ತ ವಿನಯ್ ಕೂಡ ಆಟ ಆಡುವಾಗ ಕಾರ್ತಿಕ್‌ರನ್ನು ತಳ್ಳಿದ್ದರು. ಒಟ್ಟಾರೆಯಾಗಿ 'ಗಂಧದ ಗುಡಿ' ಹೆಚ್ಚು ನೀರು ಸಂಗ್ರಹ ಮಾಡಿದ್ದು, ತಮ್ಮ ಟೀಂ ತಪ್ಪು ಮಾಡಿದ್ದನ್ನು ಈಶಾನಿ ಒಪ್ಪಲಿಲ್ಲ. ಆದರೆ ಪ್ರತಿ ಬಾರಿಯೂ 'ಗಂಧದ ಗುಡಿ' ಟೀಂ ತಪ್ಪು ಮಾಡಿದೆ, ಆಟ ಸರಿ ಇಲ್ಲ ಅಂತ ಈಶಾನಿ ಕಿರುಚುತ್ತಲೇ ಇದ್ದರು. ಈಶಾನಿ ತನ್ನ ಗರ್ಲ್‌ಫ್ರೆಂಡ್ ಎಂದು ಮೈಕಲ್ ಆರಂಭದಲ್ಲಿ ಸಮಾಧಾನವಾಗಿ ಮಾತನಾಡಿ ಆಟದ ಬಗ್ಗೆ ಸರಿಯಾದ ನಿರ್ಣಯ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು.
ಇದನ್ನು ಓದಿ: BBK10: ಈ ವಾರ 7 ಮಂದಿ ನಾಮಿನೇಟ್..! ನಿಮ್ಮ ಪ್ರಕಾರ ಈ ವಾರ ಯಾರು ಔಟ್ ಆಗಬಹುದು?
ಆಮೇಲೆ ಮೈಕಲ್ ಎರಡೂ ತಂಡಗಳ ತಪ್ಪನ್ನು ಲೆಕ್ಕ ಹಾಕಿ 'ಗಂಧದ ಗುಡಿ' ಟೀಂ ಹೆಚ್ಚು ಪಾಯಿಂಟ್ಸ್ ಪಡೆದಿದೆ ಎಂದು ಮೈಕಲ್ ಹೇಳಿದ್ದು, ಈ ನಿರ್ಧಾರ ಈಶಾನಿಗೆ ಇಷ್ಟವೇ ಆಗಲಿಲ್ಲ. ಆಗ ಇಶಾನಿ ನೀರು ತುಂಬಿದ್ದ ಬಲೂನ್ ಅನ್ನು 'ವಜ್ರಕಾಯ' ತಂಡದ ಟಬ್‌ಗೆ ಹಾಕಿ ಎರಡೂ ತಂಡದ ಡಬ್‌ಗಳಲ್ಲಿ ನೀರು ಸಮವಾಗಿವೆ. ಈ ಆಟ ಡ್ರಾ ಆಗಿದೆ ಎಂದು ಹೇಳಿದ್ದು, ಮೈಕಲ್‌ಗೆ ಬೇಸರ ತಂದಿದೆ. ಬಳಿಕ "ನಾನು ನಿನ್ನ ಇಷ್ಟಪಡ್ತೀನಿ. ಅದಕ್ಕೆ ಹೆಚ್ಚು ವಾದ ಮಾಡಿಲ್ಲ. ಬೇರೆಯವರು ಇದ್ದಿದ್ದರೆ ವಾದ ಮಾಡುತ್ತಿದ್ದೆ. ಈ ನಿರ್ಧಾರ ನನ್ನ ನೈತಿಕತೆ ವಿರುದ್ಧವಾಗಿದೆ. ನಾನು ನನ್ನ ಟೀಂಗೆ ಮೋಸ ಮಾಡಿಲ್ಲ. ನನಗೆ ನಾನೇ ಮೋಸ ಮಾಡಿಕೊಂಡಿದ್ದೀನಿ" ಅಂತ ಮೈಕಲ್ ಇಶಾನಿಗೆ ಹೇಳಿದ್ದರು.
ಮೈಕಲ್ ಹಾಗೂ ಈಶಾನಿ ಸರಿಯಾಗಿ ಉಸ್ತುವಾರಿ ಮಾಡಿಲ್ಲ ಅಂತ ಬಿಗ್ ಬಾಸ್ ಘೋಷಣೆ ಮಾಡಿದ್ದು, ಕೊನೆಯದಾಗಿ ಉಸ್ತುವಾರಿಗೆ ಗೌರವ ಕೊಟ್ಟು ಈ ಆಟ ಡ್ರಾ ಆಗಿದೆ ಎಂದು ಹೇಳಿದರು. ಮೈಕಲ್ ಉಸ್ತುವಾರಿ ಮಾಡಿದ್ದು 'ಗಂಧದ ಗುಡಿ' ತಂಡಕ್ಕೆ ಇಷ್ಟವೆ ಆಗಿಲ್ಲ. ಇನ್ನು ವಿನಯ್ ಅವರ 'ವಜ್ರಕಾಯ' ತಂಡದ ಬಳಿ ಹೋಗಿ ಮೈಕಲ್ ಅವರು ಹೇಗೆ ಆಟ ಆಡಬೇಕು ಎಂದು ಹೇಳಿದ್ದರು. ಇದು ವೀಕ್ಷಕರಿಗೆ ಇಷ್ಟವೇ ಆಗಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.