Orry in Bigg Boss 17: ಸಲ್ಮಾನ್ ಖಾನ್ ನಡೆಸಿಕೊಡುವ ಕಿರುತೆರೆಯ ಫೇಮಸ್ ಶೋ ಬಿಗ್ ಬಾಸ್ 17‌ ಸದ್ಯ ಹೊಸದೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ಇದೀಗ ಓರಿ ಅಲಿಯಾಸ್ ಓರ್ಹಾನ್ ಅವತ್ರಮಣಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್‌ ಬಾಸ್ ಶೋಗೆ ಆಗಮಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ವಾರ ಹೊಸ ಸ್ಪರ್ಧಿ ವೈಲ್ಡ್‌ ಕಾರ್ಡ್‌ ಮೂಲಕ ಮನೆಗೆ ಪ್ರವೇಶಿಸುತ್ತಿದ್ದಾರೆ. ಈ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹೆಸರು ಬಿ-ಟೌನ್ ಸೆಲೆಬ್ರಿಟಿಗಳ ನೆಚ್ಚಿನ ಸ್ನೇಹಿತ ಓರಿ. ಅಸಲಿಗೆ, ಓರಿ ಕಾರ್ಯಕ್ರಮಕ್ಕೆ ಬರುವ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಅದರ ನಂತರ ಬಿಗ್‌ ಬಾಸ್‌ ನಿರ್ಮಾಪಕರು ಓರಿಗೆ ಆಹ್ವಾನವನ್ನು ಕಳುಹಿಸಿದರು. ಇದೀಗ ಶೋನಲ್ಲಿ ಓರಿ ಎಂಟ್ರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. 


ಇದನ್ನೂ ಓದಿ: BBK 10: "ನಮ್ರತಾ ಹಿಂದೆ ಅಲೆಯೋದನ್ನು ಬಿಟ್ಟು ಬೇರೆ ಏನೂ ಮಾಡ್ತಿಲ್ಲ, ಅವಳ ಸೀರೆ ಮಡಚೋದು ಇದೆ ಆಯ್ತು.": ತುಕಾಲಿ ಸಂತು! 


ಬಿಗ್ ಬಾಸ್ 17 ರ ಮುಂಬರುವ ವಾರಾಂತ್ಯದ ಸಂಚಿಕೆಯ ಪ್ರೋಮೋಗಳನ್ನು ಬಿಡುಗಡೆ ಮಾಡಲಾಗಿದೆ. ಸಲ್ಮಾನ್ ಓರಿಗೆ ಸ್ವಾಗತ ನೀಡುತ್ತಿದ್ದು, ಅವರೊಂದಿಗೆ ಮೋಜಿನ ಮಾತುಕತೆ ನಡೆಸುತ್ತಿರುವುದು ಪ್ರೋಮೋದಲ್ಲಿ ಕಾಣಬಹುದಾಗಿದೆ. ಸಲ್ಮಾನ್ ಓರಿಯನ್ನು, ನಿಮ್ದು ವೈಲ್ಡ್ ಕಾರ್ಡ್ ಎಂಟ್ರಿ. ಆದ್ರೆ ಇಷ್ಟು ಸೂಟ್‌ಕೇಸ್‌ಗಳನ್ನು ಏಕೆ ತಂದಿದ್ದೀರಿ? ಎಂದು ಕೇಳುತ್ತಾರೆ. 'ಇದು ನನ್ನ ಪ್ರವಾಸಕ್ಕೆ' ಎಂದು ಹೇಳುತ್ತಾರೆ. ಓರಿ 6 ರಿಂದ 7 ದೊಡ್ಡ ಸೂಟ್‌ಕೇಸ್‌ಗಳೊಂದಿಗೆ ಆಗಮಿಸಿದ್ದಾರೆ. 


 


 

 

 

 



 

 

 

 

 

 

 

 

 

 

 

A post shared by ColorsTV (@colorstv)


 


ಓರಿ ಏನು ಕೆಲಸ ಮಾಡುತ್ತಾರೆ ಎಂದು ಸಲ್ಮಾನ್ ಖಾನ್ ಕೇಳಿದ್ದಾರೆ. ಅದಕ್ಕೆ ನಾನು ಎಲ್ಲರಂತೆ ಸೂರ್ಯ ಉದಯಿಸುವಾಗ ಏಳುತ್ತೇನೆ. ಚಂದ್ರ ಹುಟ್ಟುವಾಗ ಮಲಗುತ್ತೇನೆ ಎಂದು ಹೇಳಿದ್ದಾರೆ. ಆಗ ಓರಿಗೆ, ಪಾರ್ಟಿ ಅಟೆಂಡ್ ಮಾಡಿದರೆ ನಿಮಗೆ ಹಣ ಸಿಗುತ್ತದೆಯೇ’ ಎಂದು ಕೇಳಿದ್ದಾರೆ.  


ಎಲ್ಲಾ ಸೆಲೆಬ್ರಿಟಿಗಳು ನನ್ನ ಮ್ಯಾನೆಜರ್‌ಗೆ ಕರೆ ಮಾಡಿ ಪಾರ್ಟಿಗೆ ಬರಲು ಹೇಳುತ್ತಾರೆ ಎಂದು ಓರಿ ಹೇಳಿದ್ದಾರೆ. ಓರಿ ಬಳಿ ಐದು ಜನ ಮ್ಯಾನೇಜರ್ ಇದ್ದಾರಂತೆ. ಈ ಮಾತನ್ನು ಕೇಳಿ ಸಲ್ಮಾನ್‌ ಖಾನ್ ಶಾಕ್ ಆಗುತ್ತಾರೆ. 


ಇದನ್ನೂ ಓದಿ: ರಶ್ಮಿಕಾ.. ಪೂಜಾ ಹೆಗ್ಡೆ ಇಬ್ಬರೂ ಅಲ್ಲ... ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟಿ ಈಕೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.