BBK 10: "ನಮ್ರತಾ ಹಿಂದೆ ಅಲೆಯೋದನ್ನು ಬಿಟ್ಟು ಬೇರೆ ಏನೂ ಮಾಡ್ತಿಲ್ಲ, ಅವಳ ಸೀರೆ ಮಡಚೋದು ಇದೆ ಆಯ್ತು.": ತುಕಾಲಿ ಸಂತು!

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ತುಕಾಲಿ ಸಂತು ಸ್ನೇಹಿತ್, ನಮ್ರತಾ ಗೌಡ ಮಧ್ಯೆ ಇರುವ ಬಾಂಡಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಾ, ಸ್ನೇಹಿತ್ ಆಟ ಆಡದೆ ಸುಮ್ಮನೆ ನಮ್ರತಾ ಹಿಂದೆ ಓಡಾಡಿಕೊಂಡು ಇರುತ್ತಾನೆ, ಅವನಿಗೆ ಬೇರೆ ಕೆಲಸವೇ ಇಲ್ಲ, ಅವಳ ಸೀರೆ ಮಡಚಿಕೊಂಡು ಇರ್ತಾನೆ ಎಂದು ಹೇಳಿದ್ದಾರೆ.    

Written by - Zee Kannada News Desk | Last Updated : Nov 25, 2023, 09:59 AM IST
  • ಬಿಗ್‌ಬಾಸ್‌ ಮೆನೆಯೊಳಗೆ ನಮ್ರತಾ ಜೊತೆ ಸ್ನೇಹಿತ್ ಮಾತಾಡೋದು, ಅವರ ಹಿಂದೆ ತಿರುಗೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.
  • ಭಾಗ್ಯಶ್ರೀ ಸ್ನೇಹಿತ್ ನಾಮಿನೇಟ್ ಮಾಡಿದಾಗ ಈ ಹುಡುಗ ಮನೆಯಿಂದ ಹೊರಗಡೆ ಹೋದರೆ ಅವನ ಭವಿಷ್ಯ ಏನಾಗಬೇಕು ಅಂತ ಹೇಳಿ ಕಣ್ಣೀರು ಹಾಕಿದ್ದ ಸಂತು, ಈಗ ಸ್ನೇಹಿತ್‌ಗೆ ಶಾಪ ಹಾಕುತ್ತಿದ್ದಾರೆ.
  • ತುಕಾಲಿ ಸಂತು ಸ್ನೇಹಿತ್ ಕಂಡರೆ ಆಗದೆ, ಸ್ನೇಹಿತ್ ಹಾಗು ನಮ್ರತಾ ಯಾವತ್ತೂ ಉದ್ಧಾರ ಆಗೋದಿಲ್ಲ, ಸ್ನೇಹಿತ್ ಚಂಬು ಹಿಡಿದುಕೊಂಡು ನಿಲ್ಲುವವನು ಅಂತ ಕೂಡ ಮಾತಾಡಿದ್ದಾರೆ.
BBK 10: "ನಮ್ರತಾ ಹಿಂದೆ ಅಲೆಯೋದನ್ನು ಬಿಟ್ಟು ಬೇರೆ ಏನೂ ಮಾಡ್ತಿಲ್ಲ, ಅವಳ ಸೀರೆ ಮಡಚೋದು ಇದೆ ಆಯ್ತು.": ತುಕಾಲಿ ಸಂತು! title=

Tukali Santosh Talks About Snehith  And Namratha: ಬಿಗ್‌ಬಾಸ್‌ ಮೆನೆಯೊಳಗೆ ನಮ್ರತಾ ಜೊತೆ ಸ್ನೇಹಿತ್ ಮಾತಾಡೋದು, ಅವರ ಹಿಂದೆ ತಿರುಗೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಸ್ನೇಹಿತ್, ನಮ್ರತಾ ಪ್ರೇಮಿಗಳು, ಕಪಲ್ ಅಂದರೆ ಅದನ್ನು ನಮ್ರತಾ ಸಹಿಸೋದಿಲ್ಲ. ಇತ್ತ ಸ್ನೇಹಿತ್‌ "ನಮ್ರತಾ ಮೇಲೆ ನನಗೆ ಫೀಲಿಂಗ್ಸ್ ಇದೆ" ಎಂದರೆ, ಅದನ್ನು ನಮ್ರತಾ ಎಂಟರ್‌ಟೇನ್ ಮಾಡಲ್ಲ. ಸದ್ಯ  ಇವರಿಬ್ಬರ ಆತ್ಮೀಯತೆ ಬಗ್ಗೆ ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್‌ಗೆ ಚಿಂತೆ ಶುರುವಾಗಿದೆಯೋ ಅಂತನಿಸುತ್ತದೆ.

ದೊಡ್ಮನೆಯಲ್ಲಿ ವರ್ತೂರು ಸಂತೋಷ್ ಮತ್ತು ತುಕಾಲಿ ಸ್ಟಾರ್ ಸಂತು ಅವಕಾಶ ಸಿಕ್ಕಾಗೆಲ್ಲ ವಿನಯ್ ಗೌಡ, ಸ್ನೇಹಿತ್ ಬಗ್ಗೆ ಮಾತಾಡಿಕೊಳ್ಳುತ್ತಾ, ಸ್ನೇಹಿತ್ ಏನೂ ಆಟ ಆಡಲ್ಲ, ಹಾಗೆ ಮಾಡ್ತಾನೆ, ಹೀಗೆ ಮಾಡ್ತಾನೆ ಅಂತಲೇ ತುಕಾಲಿ ಹೇಳ್ತಾರೆ, ಅವನೇನು ಮನುಷ್ಯನಾ? ದೆವ್ವಾನಾ? ಅವನ ಜನ್ಮಕ್ಕೆ ಬೆಂಕಿ ಹಾಕ ಅಂತನೂ ಸಂತು ಹೇಳುತ್ತಿದ್ದಾರೆ. ಭಾಗ್ಯಶ್ರೀ ಸ್ನೇಹಿತ್ ನಾಮಿನೇಟ್ ಮಾಡಿದಾಗ ಈ ಹುಡುಗ ಮನೆಯಿಂದ ಹೊರಗಡೆ ಹೋದರೆ ಅವನ ಭವಿಷ್ಯ ಏನಾಗಬೇಕು ಅಂತ ಹೇಳಿ ಕಣ್ಣೀರು ಹಾಕಿದ್ದ ಸಂತು, ಈಗ ಸ್ನೇಹಿತ್‌ಗೆ ಶಾಪ ಹಾಕುತ್ತಿದ್ದಾರೆ. 

ಇದನ್ನೂ ಓದಿ: Varthur santhosh : ವರ್ತೂರ್ ಸಂತೋಷ್ ಎಸ್ಕೇಪ್‌..! ಎಲ್ಲಿಗೋದ್ರು ಬಿಗ್‌ಬಾಸ್‌ ಸ್ಪರ್ಧಿ

ಹೌದು.. ತುಕಾಳಿ ಸಂತು ವರ್ತೂರ್‌ ಸಂತೋಷ್‌ ಹತ್ತಿರ "ನಮ್ರತಾ ಹಿಂದೆ ಅಲೆಯೋದನ್ನು ಬಿಟ್ಟು ಬೇರೆ ಏನೂ ಮಾಡ್ತಿಲ್ಲ, ಅವನು ಇಲ್ಲಿಗೆ ಯಾಕೆ ಬಂದಿದ್ದಾನೆ? ನಮ್ರತಾ ಹಿಂದೆ ಹೋಗೋದು, ಅವಳ ಬಟ್ಟೆ ಹಿಡ್ಕೊಂಡು ಬರೋದು, ಅವಳ ಸೀರೆ ಮಡಚೋದು ಇದೆ ಆಯ್ತು. ನಮ್ರತಾ ಸೀರೆ ಮಡಚೋಕೆ ಬಿಗ್ ಬಾಸ್‌ಗೆ ಬರಬೇಕಿತ್ತಾ? 24 ಗಂಟೆ ಅವಳ ಹಿಂದೆ ಇರುತ್ತಾನೆ. ಇದನ್ನೆಲ್ಲ ನಾವು ನೋಡಬೇಕಾ? ನಾಚಿಕೆ ಆಗ್ತಿಲ್ವಾ? ಬೇಜಾರು ಆಗ್ತಿಲ್ವಾ?" ಅಂತ ಸ್ನೇಹಿತ್‌ ಬಗ್ಗೆ ಮಾತನಾಡಿದ್ದಾರೆ.

ಒಟ್ಟಿನಲ್ಲಿ ತುಕಾಲಿ ಸಂತು ತಂಡ ಬದಲಾಯಿಸಿದ ನಂತರ ಸ್ನೇಹಿತ್ ಕಂಡರೆ  ಆಗದೆ, ಸ್ನೇಹಿತ್ ಹಾಗು ನಮ್ರತಾ ಯಾವತ್ತೂ ಉದ್ಧಾರ ಆಗೋದಿಲ್ಲ, ಸ್ನೇಹಿತ್ ಚಂಬು ಹಿಡಿದುಕೊಂಡು ನಿಲ್ಲುವವನು ಅಂತ ಕೂಡ ಮಾತಾಡಿದ್ದಾರೆ. ಇನ್ನು ಸಂತುಗೆ ವಿನಯ್ ಗೌಡ ಕಂಡರೂ ಸಹ ಇಷ್ಟವಾಗದೇ ವಿನಯ್ ಗೌಡ  ಆನೆ ಎನ್ನೋದನ್ನು ಇವರು ಸಹಿಸೋದಿಲ್ಲ. ಇನ್ನೊಂದು ಕಡೆ ವಿನಯ್ ಈ ವಾರ ಏನೂ ಮಾಡಿಲ್ಲ ಅಂತ ಕೂಡ ಸಂತು, ವರ್ತೂರು ಮಾತನಾಡಿಕೊಂಡಿದ್ದಾರೆ. ಇವರಿಬ್ಬರು ಮನೆಯಲ್ಲಿ ಯಾರು ಹೇಗೆ ಆಟ ಆಡ್ತಾರೆ? ನಾವು ಹೇಗೆ ಆಟ ಆಡಬೇಕು? ಹೇಗೆ ತಂಡವನ್ನು ಕಟ್ಟಬೇಕು? ಎಂದು ಚರ್ಚೆ ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡೋದರಲ್ಲಿ ಈ ಜೋಡಿ ಮುಂಚೂಣಿಯಲ್ಲಿದೆ ಎನ್ನಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News