Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಕಣ್ಣಿಗೆ ಕಾಣುವಂತೆ ಗುಂಪುಗಾರಿಕೆ ಪ್ರದರ್ಶನವಾಗುತ್ತಿದೆ. ಮೊದ ಮೊದಲು ಟಾಸ್ಕ್‌ ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದ ಈ ಗ್ರೂಪಿಸಂ ಈಗ ಪರ್ಸನಲ್‌ ಆಗುತ್ತಿದೆ. ಇದು ಬಿಗ್‌ ಬಾಸ್‌ ಮನೆಯಲ್ಲಿರುವ ಕೆಲವು ಕಂಟೆಸ್ಟಂಟ್‌ಗಳ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ ವೀಕ್ಷಕರು ಸಹ ಇದರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಬಿಗ್‌ ಬಾಸ್‌ ಮನೆಯಲ್ಲಿನ ಗುಂಪುಗಾರಿಕೆ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಬಾತ್‌ರೂಮ್‌ ಏರಿಯಾದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗುತ್ತಿದೆ. ಕಲರ್ಸ್ ಕನ್ನಡ ಬಿಗ್‌ ಬಾಸ್‌ ಪ್ರೋಮೋ ಒಂದನ್ನು ಶೇರ್‌ ಮಾಡಿದೆ. ಅದರಲ್ಲಿ ಸ್ನೇಹಿತ್‌ ಬಾತ್‌ರೂಮ್‌ನಲ್ಲಿ ಇರುತ್ತಾರೆ. ಆಚೆ ಟವೆಲ್, ಬಟ್ಟೆ ಹಿಡಿದು ಪ್ರತಾಪ್‌ ಕಾಯುತ್ತಿರುತ್ತಾರೆ.


ಇದನ್ನೂ ಓದಿ : ಪ್ರತಿ ಬಾರಿ ಟಾಸ್ಕ್‌ನಲ್ಲೂ ಹೈಡ್ರಾಮಾ! ವಾರವಿಡಿ ಭೇಷ್‌ ಅನಿಸಿಕೊಂಡು ಕೊನೆಯಲ್ಲಿ ಎಡವಿದ್ರಾ ಕಾರ್ತಿಕ್?‌ 


ಸ್ನೇಹಿತ್‌ ಸ್ನಾನ ಮುಗಿಸಿ ಹೊರ ಬರುತ್ತಾರೆ. ಆಗ ವಿನಯ್‌ ಅವರು ಸ್ನೇಹಿತ್‌ ʻನಾನು ಸ್ವಲ್ಪ ಹೋಗಿ ಬರ್ತಿನಿʼ ಅಂತ ಹೇಳಿ ಟವೆಲ್‌ ತೆಗೆದುಕೊಂಡು ಬಂದು ಸೀದಾ ಸ್ನೇಹಿತ್‌ ಇದ್ದ ಬಾತ್‌ ರೂಮ್‌ಗೆ ಹೋಗುತ್ತಾರೆ.  ತಮ್ಮ ಸ್ನಾನ ಆಗಿದ್ದರೂ ವಿನಯ್‌ ಬರುವವರೆಗೂ ಸ್ನೇಹಿತ್‌ ಬಾತ್‌ರೂಮ್‌ನಿಂದ ಆಚೆ ಬರದೇ ಬಾಗಿಲ ಹತ್ತಿರವೇ ನಿಂತಿರುತ್ತಾರೆ.  


ಬಹಳ ಹೊತ್ತಿನಿಂದ ಆಚೆಯೇ ಕಾಯುತ್ತಿದ್ದ ಡ್ರೋನ್‌ ಪ್ರತಾಪ್‌ ಅವರಿಗೆ ಇದು ಇಷ್ಟವಾಗುವುದಿಲ್ಲ. ಅವರು ಇದನ್ನು ವಿರೋಧಿಸುತ್ತಾರೆ. ʻಬೇಕ ಬೇಕಾದವರಿಗೆ ಬಾತ್‌ರೂಮ್‌ ಬ್ಲಾಕ್‌ ಮಾಡ್ಕೊಂಡು ನಿಮಗೆ ಇಷ್ಟ ಬಂದಾಗೆ ಇರೋಕೆ ಆಗಲ್ಲ ಇಲ್ಲಿʼ ಎಂದು ಪ್ರತಾಪ್‌ ಹೇಳುತ್ತಾರೆ. 


 


ಬಿಗ್’ಬಾಸ್ ಮನೆಯೊಳಗೆ ಹಾಟ್ ರೊಮಾನ್ಸ್… ನಟಿಯ ಸೀರೆ ಎತ್ತಿ ಸೊಂಟಕ್ಕೆ ಮುತ್ತು ಕೊಟ್ಟ ಸಹಸ್ಪರ್ಧಿ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.