Tukali Santosh On Rakshak bullet : ಬಿಗ್ ಬಾಸ್ ಕನ್ನಡ 10 ಶೋ ಗೆ ಈ ಬಾರಿ ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಬಂದಿದ್ದಾರೆ. ನೇರ ಮಾತು, ಖಡಕ್‌ ಉತ್ತರದ ಮೂಲಕ ಜನರ ಗಮನಸೆಳೆದಿದ್ದ ರಕ್ಷಕ್‌ ಈಗ ದೊಡ್ಮನೆ ಸೇರಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿರುವ ರಕ್ಷಕ್ ಬುಲೆಟ್‌ ಸಾಕಷ್ಟು ಟ್ರೋಲ್‌ಗೆ ಒಳಗಾದವರು. 


COMMERCIAL BREAK
SCROLL TO CONTINUE READING

ʻಆರ್‌ ಬಾಸ್‌ʼ ಎಂದೇ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿರುವ ರಕ್ಷಕ್‌ಗೆ ಖ್ಯಾತಿ ನೀಡಿದ್ದು ಸಾಮಾಜಿಕ ಮಾಧ್ಯಮಗಳು. ಅವರು ನೀಡಿದ ಪ್ರತಿ ಸಂದರ್ಶನವೂ ಟ್ರೋಲ್‌ ಆಗಿದೆ. ಅವರು ಕುಳಿತರೂ ನಿಂತರೂ ಅದು ಟ್ರೋಲ್‌ ಆಗುತ್ತದೆ. ಹೀಗಿರುವಾ ರಕ್ಷಕ್‌ ಬಿಗ್‌ ಬಾಸ್‌ ಮನೆಗೆ ಬಂದಿದ್ದು ಕೆಲವರ ಕಣ್ಣು ಅವರ ಮೇಲೆಯೇ ನೆಟ್ಟಿದೆ.


ಇದನ್ನೂ ಓದಿ: ಡ್ರೋನ್‌ ವಿಚಾರವಾಗಿ ಪ್ರತಾಪ್‌ - ಸ್ನೇಹಿತ್‌ ನಡುವೆ ಬಿಗ್‌ ಫೈಟ್‌.! 


ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಕ್‌ ಅವರ ಟ್ರೋಲ್‌ ವಿಚಾರವೂ ಚರ್ಚೆಯಾಗಿದೆ. ತುಕಾಳಿ ಸಂತು ಅವರು ಈ ಬಗ್ಗೆ ವಿನಯ್ ಗೌಡ ಜೊತೆ ಮಾತನಾಡುತ್ತಿರುತ್ತಾರೆ. ಈ ವಯಸ್ಸಿಗೆ ನಿನಗೆ ಅಷ್ಟು ತಿಳುವಳಿಕೆ ಇದೆಯಲ್ಲ, ಅದು ನನಗೆ ಖುಷಿ ಆಯ್ತು. ಆದರೆ, ಟ್ರೋಲ್‌ಗಳನ್ನೆಲ್ಲಾ ನೋಡಿದಾಗ ನನಗೆ ಬೇರೆ ಅಭಿಪ್ರಾಯ ಇತ್ತು ಎಂದು ವಿನಯ್‌ ಗೌಡ ಹೇಳುತ್ತಾರೆ. 


ಆಗ ರಕ್ಷಕ್ ಸ್ಟ್ರೇಟ್ ಫಾರ್ವರ್ಡ್. ಅದು ಇಂಟರ್ವ್ಯೂನಲ್ಲಿ ಮಾತನಾಡುವಾಗ ಎಂದು ತುಕಾಲಿ ಸಂತು ಹೇಳುತ್ತಾರೆ. ಕೆಲವು ಪ್ರಶ್ನೆಗಳು ನನಗೆ ಟ್ರಿಗರ್ ಆಗುವ ಹಾಗೆ ಬಂದರೆ ಏನ ಮಾಡಲಿ ಎಂದು ರಕ್ಷಕ್‌ ಹೇಳುತ್ತಾರೆ. ಆಗ  ಒಂದು ಟ್ರೋಲ್‌ ಇವನನ್ನ ಬಿಗ್ ಬಾಸ್‌ಗೆ ಕರ್ಕೊಂಡ ಬಂತು ಅಂತ ತುಕಾಲಿ ಸಂತು ಹೇಳಿದಾಗ ರಕ್ಷಕ್ ವಿರೋಧಿಸುತ್ತಾರೆ. ಚಾನ್ಸೇ ಇಲ್ಲ. ಅದ್ಹೆಂಗೆ ಹೇಳ್ತೀರಾ? ನನ್ನ ಸ್ವಂತ ಪ್ರತಿಭೆಯಿಂದ ನಾನು ಇಲ್ಲಿಗೆ ಬಂದಿರೋದು ಎಂದು ರಕ್ಷಕ್‌ ಹೇಳುತ್ತಾರೆ. 


ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಜಡೆ ಜಗಳ.. ನಮ್ರತಾ ಜೊತೆ ವಾದಕ್ಕಿಳಿದು ಕಣ್ಣೀರಿಟ್ಟ ತನಿಷಾ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.