Kannada Bigg Boss 10 Nomination : ಬಿಗ್ ಬಾಸ್ ಕನ್ನಡ 10 ರ ಮೂರನೇ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ನಾಮಿನೇಷನ್ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲಾಗಿದೆ. ಅಸಮರ್ಥರ ಪೈಕಿ ಪ್ರತಾಪ್, ವರ್ತೂರು, ಸಂತೋಷ್, ಕಾರ್ತಿಕ್ ಹಾಗೂ ತನಿಷಾ ಕುಪ್ಪಂಡ ನಾಮಿನೇಟ್ ಆಗಿದ್ದಾರೆ. ಇನ್ನೂ ಸಮರ್ಥರ ಪೈಕಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ನೀತು ವನಜಾಕ್ಷಿ ಹಾಗೂ ಸಿರಿ ನಾಮಿನೇಟ್ ಆಗಿದ್ದಾರೆ.
ನಾಮಿನೇಷನ್ ವೇಳೆ ನಮ್ರತಾ ಗೌಡ ಅವರು ಅಸಮರ್ಥರ ಪೈಕಿ ತನಿಷಾ ಕುಪ್ಪಂಡ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಸೂಕ್ತ ಕಾರಣ ನೀಡುವ ವೇಳೆ, ತನಿಷಾ ಬಗ್ಗೆ ಕೊಟ್ಟ ಕಾರಣವೇ ಈಗ ಜಗಳಕ್ಕೆ ಕಾಋಣವಾಗಿದೆ. ಅವರ ಕಡೆಯಿಂದ ಕಂಟಿನ್ಯೂಸ್ ಆಗಿ ಡಿಸ್ಬರ್ಬನ್ಸ್ ಇರುತ್ತೆ ಎಂದು ನಮ್ರತಾ ಹೇಳಿದ್ದರು. ಈ ಮಾತು ತನಿಷಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು ಕಾಣಿಸಿಕೊಳ್ತು ಇಂಥದ್ದೊಂದು ಪ್ರಾಬ್ಲಮ್!!
ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ನಮ್ರತಾ ಮತ್ತು ತನಿಷಾ ನಡುವೆ ಇದೇ ವಿಚಾರಕ್ಕೆ ವಾದ ನಡೆದಿದೆ. ಈ ವೇಳೆ ನನ್ನ ವಾಯ್ಸ್ ಜೋರಾಗಿಯೇ ಇರೋದು ಎಂದು ತನಿಷಾ ಹೇಳಿದ್ದಾರೆ. ಇದಕ್ಕೆ ನಮ್ರತಾ ನಾನು ಹೇಳಿದ್ದು ಹಾಗಲ್ಲ, ನಿಮ್ಮ ವಾಯ್ಸ್ ಡಾಮಿನೇಟಿಂಗ್ ಆಗಿತ್ತು ಹೀಗೆ ಇಬ್ಬರ ನಡುವೆ ವಾದ ಮುಂದುವರೆದಿದ್ದು, ಕೊನೆಗೆ ತನಿಷಾ ಅಳಲು ಆರಂಭಿಸಿದ್ದಾರೆ.
ಟೀಕೆಗಳ ವಿಮರ್ಶೆ ಜೋರಾಗಿಯೇ ಇದೆ
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #ColorsKannada #ಬಣ್ಣಹೊಸದಾಗಿದೆ pic.twitter.com/zO1NRgkBme
— Colors Kannada (@ColorsKannada) October 11, 2023
ಇಬ್ಬರನ್ನೂ ಸಮಾಧಾನ ಪಡಿಸಲು ಮನೆಯ ಕೆಲವು ಸದಸ್ಯರು ಪ್ರಯತ್ನಿಸಿದ್ದಾರೆ. ನಿನ್ನೆಯ ನಾಮಿನೇಷನ್ ಪ್ರಕ್ರಿಯೆಯ ಬಳಿಕ ಹೀಗೆಯೇ ಒಬ್ಬೊಬ್ಬರ ಮಧ್ಯೆ ಅಸಮಾಧಾನ ಶುರುವಾಗಿದೆ. ಮೊದಲ ವಾರವೇ ಬಿಗ್ ಬಾಸ್ ಮನೆಯಲ್ಲಿ ಜಗಳ ಶುರುವಾಗಿದ್ದು, ಇನ್ನೂ ನೂರು ದಿನ ಹೇಗಪ್ಪ ಎಂದು ನೆಟ್ಟಿಜನ್ ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: Bigg Boss 10: ದೊಡ್ಮನೆಯಲ್ಲಿ ಬಿಗ್ ಫೈಟ್.. ಮೂರನೇ ದಿನವೇ ಶುರುವಾದ ಜಗಳ, ನೂರು ದಿನ ಸಾಗೋದು ಹೇಗೆ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.