Sangeeta Sringeri: `ಕೋಟಿ ಕೊಟ್ರು ಬಿಗ್ಬಾಸ್ಗೆ ಹೋಗಲ್ಲ` ಎಂದಿದ್ದ ಚಾರ್ಲಿ ನಟಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ಯಾಕೆ?
Sangeeta Sringeri Entry to Bigboss: ಸ್ಯಾಂಡಲ್ವುಡ್ ಬೆಡಗಿ ಸಂಗೀತಾ ಶೃಂಗೇರಿ ಬಿಗ್‌ಬಾಸ್ ಶೋಗೆ ಹೋಗಲ್ಲ ಎಂದು ಹೇಳಿದವರು, ಸದ್ಯ ಬಿಗ್ಬಾಸ್ಗೆ ಸ್ಪರ್ಧಿಯಾಗಿ ಹೋಗಿದ್ದಾರೆ. ನೆನ್ನೆ ಬಿಗ್ ಬಾಸ್ನಲ್ಲಿ ಈ ನಟಿ ಶೋನಲ್ಲಿ ಭಾಗವಹಿಸಲು ಕಾರಣವನ್ನು ಸಹ ತಿಳಿಸಿದ್ದಾರೆ. ಹಾಗಾದ್ರೆ ಸಂಗೀತಾ ಹೇಳಿರು ಕಾರಣವಾದರು ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Sangeeta Sringeri: ನಟಿ ಸಂಗೀತಾ ಶೃಂಗೇರಿ ಮೊದಲು ʼಹರ ಹರ ಮಹದೇವ್ʼ ಧಾರವಾಹಿಯ ಮೂಲಕ ಪ್ರೇಕ್ಷಕರ ಕಣ್ಣಿಗೆ ಬಿದ್ದವರು. ನಂತರ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿ ಹೆಸರು ಮಾಡಿದ್ದಾರೆ. 7777 ಚಾರ್ಲಿ, ಲಕ್ಕಿ ಮ್ಯಾನ್ , ಶಿವಾಜು ಸುರತ್ಕಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಗಾಗ ಫೊಟೋ ಶೂಟ್‌ಗಳಿಂದ ಮಾಡಿಸಿ ಸೊಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುವುದರ ಮೂಲಕ ಹೆಚ್ಚು ಆಕ್ಟಿವ್ ಆಗಿರುತ್ತಾರೆ.
ನಟಿ ಸಂಗೀತಾಗೆ ಈ ಹಿಂದೆ ಪತ್ರಕರ್ತರೊಬ್ಬರು ಕರೆ ಮಾಡಿ, ‘ಮೇಡಂ ನೀವು ಬಿಗ್ ಬಾಸ್‌ಗೆ ಹೋಗುತ್ತಿದ್ದೀರಂತೆ ನಿಜವೇ?’ ಎಂದು ಪ್ರಶ್ನಿಸಿದಾರು. ಅದಕ್ಕೆ ಈಕೆ ಕೋಟಿ ಕೊಟ್ರು ನಾನು ಬಿಗ್ಬಾಸ್ಗೆ ಹೋಗಲ್ಲ ಎಂದಿದ್ದರಂತೆ.ಈ ಅವರಿಗೆ ಬಿಗ್ ಬಾಸ್‌ಗೆ ಹೋಗಲು ಇಷ್ಟವಿಲ್ಲ ಎಂದು ಹೇಳಿದ್ದರು. ಆದರೆ ನಟಿ ಸಂಗೀತಾ ಈಗ ಬಿಗ್‌ಬಾಸ್ ಮನೆಗೆ ಸ್ಪರ್ದಿಯಾಗಿ ಬಂದಿದ್ದಾರೆ.
ಇದನ್ನೂ ಓದಿ-ಬಿಡುಗಡೆಯಾಯ್ತು ಕೆ. ಸಂಗಮೇಶ್ ಪಾಟೀಲ್ ನಿರ್ದೇಶನದ ʼಜೀವಸಖಿʼ!
ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಈ ಬಗ್ಗೆ ವಿಚಾರಿಸಿದಾಗ ನಟಿ ಸಂಗೀತಾ ಆಗಿನ ಅವರ ಮನಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಸಂಗೀತಾ "ಬಹಳ ಮುದ್ದಾದ ಪಾತ್ರಗಳಲ್ಲಿ ಜನರು ನನ್ನನ್ನು ಈವರೆಗೆ ನೋಡಿದ್ದಾರೆ. ಆದರೆ ನನ್ನ ಪಾತ್ರಗಳಂತೆ ಸಾಫ್ಟ್ ಅಲ್ಲ ನಾನು. ವ್ಯಕ್ತಿಯಾಗಿ ನಾನು ಬಹಳ ಬೋಲ್ಡ್, ಸಾಹಸಮಯಿ. ನನ್ನ ಪಾತ್ರಗಳಿಗಿಂತಲೂ ನನ್ನ ನಿಜ ವ್ಯಕ್ತಿತ್ವ ಹೆಚ್ಚು ಆಕರ್ಷಿಕವಾಗಿದೆ. ಆದರಿಂದ ಆ ನನ್ನ ನಿಜ ವ್ಯಕ್ತಿತ್ವವನ್ನು ತೋರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ಸವಾಲುಗಳೆಂದರೆ ಬಹಳ ಇಷ್ಟ. ಬಿಗ್‌ಬಾಸ್ ನನ್ನ ವ್ಯಕ್ತಿತ್ವಕ್ಕೆ ಸವಾಲು ಹಾಕುತ್ತದೆ ಎಂದು ಅನಿಸಿದ್ದರಿಂದ ನಾನು ಇಲ್ಲಿಗೆ ಬಂದಿದ್ದೇನೆ" ಎಂದಿದ್ದಾರೆ
ಬಿಗ್‌ಬಾಸ್ ಸೀಸನ್ 10ರ ನಿಯಮದ ಪ್ರಕಾರ ಓಟಿಂಗ್‌ನಲ್ಲಿ ಸಂಗೀತಾ ಅವರಿಗೆ 80ಕ್ಕೂ ಕಡಿಮೆ ಮತಗಳು ಸಿಕ್ಕಿದ್ದವು. ಆದರಿಂದ ಸಂಗೀತಾ ಅವರಿಗೆ ವೇಟಿಂಗ್ ರೂಮ್‌ಗೆ ಕಳುಹಿಸಲಾಗಿತ್ತು. ಅಂತಿಮಾವಾಗಿ ಕಡಿಮೆ ಮತ ಪಡೆದ ಸ್ಪರ್ದಿಗಳ ಜೊತೆ ಸಂಗೀತಾ ಅವರನ್ನು ದೊಡ್ಮನೆಗೆ ಕಳುಹಿಸಲಾಗಿತ್ತು. ಕಡಿಮೆ ಮತ ಪಡೆದ ಸಂಗೀತಾಗೆ ಇನ್ನು ಹೆಚ್ಚು ಚೆನ್ನಾಗಿ ಬಿಗ್ ಮನೆಯಲ್ಲಿ ಬೇರೆ ಸ್ವರ್ದಿಗಳ ಜೊತೆ ಪೈಪೋಟಿ ನೀಡಬೇಗಾಗುತ್ತದೆ.
ಇದನ್ನೂ ಓದಿ-BiggBoss Kannada 10: ಈ ಬಾರಿ ದೊಡ್ಮನೆಗೆ ಮೈಕಲ್ ಎನ್ನುವವರ ಎಂಟ್ರಿ...! ಯಾರಿವರು?
ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಸೆಲೆಬ್ರೆಟಿ ಹಾಗು ವೀಕ್ಷಕರಿಗೆ ಎರಡು ರೀತಿಯ ಅಭಿಪ್ರಾಯಗಳು ಇರುತ್ತವೆ. ಕೆಲವರು ಬಿಗ್‌ಬಾಸ್ ಅನ್ನು ತಮ್ಮ ವೃತ್ತಿಗೆ ಬೆಳವಣೆಗೆ ಎಂದು ಭಾವಿಸಿದರೆ, ಇನ್ನು ಕೆಲವರು ಕೆಲಸ ಇಲ್ಲದವರು, ಕನಿಷ್ಠರು ಮಾತ್ರವೇ ಹೋಗುತ್ತಾರೆ ಎಂದು ಆಲೋಚಿಸುತ್ತಾರೆ. ಇನ್ನು ಕೆಲವರು, ಬಿಗ್ ಬಾಸ್‌ಗೆ ಹೋದರೆ ಮೌಲ್ಯ ಕಡಿಮೆ ಎಂದೆಲ್ಲ ಯೋಚಿಸುತ್ತಾರೆ. ಅದೇ ರೀತಿ ಸಂಗೀತಾ ಮೊದಲು ಬಿಗ್‌ಬಾಸ್ ಮನೆಗೆ ಹೋಗುವುದು ಬೇಡವೆಂದು ನಂತರ ತಮ್ಮ ಅಭಿಪ್ರಾಯ ಬದಲಾಯಿಸಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಎಂದು ತಿಳಿದು ಬಂದಿದೆ.
ಮುಂದಿನ ದಿನಗಳಲ್ಲಿ ಸಂಗೀತಾ ಬಿಗ್‌ಬಾಸ್ ಮನೆಯಲ್ಲಿ ಉಳಿಯುತ್ತಾರವೋ ಇಲ್ಲವೋ ಎಂದು ತಿಳಿಯುತ್ತದೆ. ಏನೆಯಾಗಲಿ ಸಂಗೀತಾ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡಿ ವೀಕ್ಷಕರ ಮನಸ್ಸಲ್ಲಿ ಮನೆ ಮಾಡಲಿ ಎಂದು ಆಶಿಸೋಣ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.