Sangeetha And Drone Prathap In BBK: ಬಿಗ್‌ಬಾಸ್‌ ಮನೆಯೊಳಗೆ ಬಿಗ್‌ಬಾಸ್‌ ಲೋಕ ಆಟದಲ್ಲಿ ಕಳೆದ ಎರಡು ದಿನಗಳಿಂದ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ.  ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆಯುತ್ತಿದ್ದು, ಹಲವರು ಟಾರ್ಗೆಟ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮತ್ತು ವಿನಯ್ ಮಧ್ಯ, ಕಾರ್ತಿಕ್ ಮತ್ತು ವಿನಯ್ ಮಧ್ಯ, ಸಂಗೀತಾ ಮತ್ತು ನಮ್ರತಾ ಮಧ್ಯ ಹೀಗೆ ವೈಯಕ್ತಿಕವಾಗಿ ಆಟಗಳನ್ನು ಆಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈ ಟಾಸ್ಕ್‌ನಲ್ಲಿ ಒಬ್ಬರಿಗೊಬ್ಬರನ್ನು ಕೆಣಕುತ್ತಿದ್ದು, ಇದೀಗ ದೊಡ್ಮನೆಯಲ್ಲಿ ಎಲ್ಲೋ ಒಂದು ಕಡೆ ಅನಾಹುತ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು. ಬಹುಶಃ ಅದೇ ಆಗಿರಬಹುದು. ಟಾಸ್ಕ್ ವೊಂದರಲ್ಲಿ ಅವರ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಅಸ್ವಸ್ಥಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದರಿಂದ ನಿನ್ನೆ ದಿಢೀರ್ ನೆ ದೊಡ್ಮನೆಯಿಂದ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಹೊರ ಬಂದಿದ್ದಾರೆ ಎಂಬ ಅಪ್ಡೃಟ್‌ ಸಿಕ್ಕಿದೆ.


 



ಇದನ್ನೂ ಓದಿ: BBK 10: ವಿನಯ್‌ಗೆ ಕಾರ್ತಿಕ್‌ನಿಂದ ಚಪ್ಪಲಿ ಹೊಡೆತಾ: ಕೋಪದಲ್ಲಿ ನಮ್ರತಾ ಹೇಳಿದ್ದಾದರೂ ಏನು?


ಹೌದು.. ನಿನ್ನೆ ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್ ನಲ್ಲಿ ಡ್ರೋನ್ ಮತ್ತು ಸಂಗೀತಾ ಗಾಯ ಮಾಡಿಕೊಂಡಿದ್ದು, ಇಬ್ಬರ ಕಣ್ಣಿಗೆ ಮತ್ತು ಮೂಗು, ಬಾಯಿಗೆ ನೀರು ಬಿದ್ದ ಪರಿಣಾಮದಿಂದ ಇಬ್ಬರೂ ಒದ್ದಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಮಿಕಲ್ ನೀರಿನ ಪರಿಣಾಮದಿಂದಾಗಿ ಸದ್ಯಕ್ಕೆ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ತನಿಷಾರನ್ನು ಹೀಗೆಯೇ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಬಿಗ್ ಬಾಸ್ ಮನೆಗೆ ಕರೆತರಲಾಗಿತ್ತು. 


ಈ ಇಬ್ಬರನ್ನೂ ಹಾಗೆಯೇ ಮಾಡುವ ಸಾಧ್ಯತೆ ಇದೆ. ಈ ವಿಷಯದ ಕುರಿತಂತೆ ಚಾನೆಲ್‌ನವರಾಗಲೇ ಅಥವಾ ಬಿಗ್‌ಬಾಸ್‌ ಶೋಗೆ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸಂಗೀತಾ ಹಾಗೂ ಡ್ರೋನ್‌ ಪ್ರತಾಪ್‌ ಬಿಗ್‌ಬಾಸ್‌ ಮನೆಯಿಂದ ಹೊರಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಮಾಹಿತಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನ್ಯೂಸ್ ಭರ್ಜರಿ ಸೇಲ್ ಆಗುತ್ತಿದೆ. ಇಂದಿನ ಬಿಗ್‌ಬಾಸ್‌ ಪ್ರೋಮೋ ಗಮನಿಸಿದರೇ ಅದರಲ್ಲೂ ಸಂಗೀತಾ ಹಾಗೂ ಡ್ರೋನ್‌ ಪ್ರತಾಪ್‌ ಮಿಸ್‌ ಆಗಿರುವುದನ್ನ ನೋಡಿದರೇ ಈ ವಿಷಯ ನಿಜ ಎಂದು ತಿಳಿದು ಬರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ