Varthur Santhosh : ವರ್ತೂರ್ ಸಂತೋಷ್ ಬಂದ್ ಕೂಡ್ಲೇ ಗೆಟೌಟ್ ಅಂತಿರೋ ಬಿಗ್ ಮಂದಿ!
Varthur Santosh Re Entry To Bigg Boss : ವರ್ತೂರ್ ಸಂತೋಷ್ ಬಿಗ್ಬಾಸ್ ಮನೆಗೆ ಮರಳಿದ್ದಂತೂ ಆಗಿದೆ. ಮನೆಯ ಸದಸ್ಯರೆಲ್ಲರೂ ಅವರನ್ನು ಕಂಡು ಸಂತೋಷಪಟ್ಟಿದ್ದಾರೆ. ಆದರೆ ಆ ಸಂತೋಷ ಎಷ್ಟು ಹೊತ್ತು? ಸಂತೋಷ್ ಮುಖದಲ್ಲಿಯೇ ಸಂತೋಷ ಮಾಯವಾಗುವಂತೆ ಬಂದೆರಗಿದೆ ಎಲಿಮಿನೇಷನ್ನ ನಾಮಿನೇಷನ್ ಸೆಷನ್!
Bigg Boss Kannada Season 10 : ಮನೆಯ ಸದಸ್ಯರಲ್ಲಿ ಹಲವರು ಸಂತೋಷ್ ಎಲಿಮಿನೇಷನ್ಗೆ ನಾಮಿನೇಟ್ ಆಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣವೂ ಸಮರ್ಥನೀಯವೇ ಎನ್ನಿ! ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿದೆ.
ಸ್ಪರ್ಧಿಗಳು ಹಲವು ಜಿದ್ದಾಜಿದ್ದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ತಮ್ಮನ್ನು ತಾವು ‘ಸೇಫ್’ ಮಾಡಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲ ಸವಾಲುಗಳ ಸಮಯದಲ್ಲಿ ವರ್ತೂರ್ ಸಂತೋಷ್ ಇರಲಿಲ್ಲ. ಅವರಿಗೆ ಅದೊಂದು ಅಡ್ವಾಂಟೇಜ್. ಹಾಗಾಗಿ ಅವರು ಈಗ ಮನೆಯಲ್ಲಿ ಸೇಫ್ ಜೋನ್ನಲ್ಲಿ ಇರುವುದು ನ್ಯಾಯವಲ್ಲ ಎನ್ನುವುದು ಅವರ ವಾದ.
ಇದನ್ನೂ ಓದಿ: ಜೈಲರ್ ಸಿನಿಮಾ ರೆಕಾರ್ಡ್ ಬ್ರೇಕ್: 500 ಕೊಟಿ ಗಡಿದಾಟಿದ ವಿಜಯ್ ಚಿತ್ರ - Leo
ಸಂಗೀತಾ, ವಿನಯ್, ಸ್ನೇಹಿತ್ ಸೇರಿದಂತೆ ಬಹುತೇಕ ಸದಸ್ಯರು, ಸಂತೋಷ್ ಅವರನ್ನು ಎಲಿಮಿನೇಷನ್ಗೆ ನಾಮಿನೇಟ್ ಮಾಡಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆಯೇ ಸಂತೋಷ್ ಮುಖದಲ್ಲಿನ ಸಂತೋಷದ ನಗು ಮಾಯವಾಗಿದೆ. ಒಂದು ವಾರದಲ್ಲಿ ಮನೆಯೊಳಗಿನ ಲೆಕ್ಕಾಚಾರಗಳೆಲ್ಲ ಬದಲಾಗಿವೆ, ಹಾಗಾಗಿ ಇಲ್ಲಿ ಉಳಿದುಕೊಳ್ಳಲು ತಾವು ನಡೆಸುವ ಸ್ಟ್ರಾಟಜಿ ಕೂಡ ಬದಲಾಗಬೇಕು ಎಂಬುದು ಅವರ ಅರಿವಿಗೆ ಬಂದಂತಿದೆ.
ಈಗಷ್ಟೇ ಮನೆಯ ಹೊರಗೆ ಒಂದು ಪರೀಕ್ಷೆಯನ್ನು ಎದುರಿಸಿ ಮರಳಿರುವ ಸಂತೋಷ್ ಮನೆಯೊಳಗಿನ ಹಲವು ರೀತಿಯ ಪರೀಕ್ಷೆಗಳನ್ನು ಹೇಗೆ ಎದುರಿಸುತ್ತಾರೆ? ಅದರಲ್ಲಿ ಗೆಲ್ಲುತ್ತಾರಾ ಅಥವಾ ಸೋತು ಮರಳುತ್ತಾರಾ? ಗೊತ್ತಾಗಲು JioCinemaದಲ್ಲಿ ಉಚಿತವಾಗಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಕನ್ನಡವನ್ನು ವೀಕ್ಷಿಸಿ. ಬಿಗ್ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
ಇದನ್ನೂ ಓದಿ: BBK 10: ‘ಬಿಗ್ ಬಾಸ್’ ಮನೆಯೊಳಗೆ ಗಲಾಟೆಯೋ ಗಲಾಟೆ; ಕಾರ್ತಿಕ್ vs ನೀತು ವಾಕ್ಸಮರ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.