BBK 10: ‘ಬಿಗ್ ಬಾಸ್’ ಮನೆಯೊಳಗೆ ಗಲಾಟೆಯೋ ಗಲಾಟೆ; ಕಾರ್ತಿಕ್ vs ನೀತು ವಾಕ್ಸಮರ!

Bigg Boss Kannada 10: ಕಾರ್ತಿಕ್ ಎಲಿಮಿನೇಷನ್ ಪಾಸ್ ಟಾಸ್ಕ್ ನಲ್ಲಿಯೂ ಡ್ರೋನ್ ಪ್ರತಾಪ್ ಅವರ ಮೈಮೇಲೆ ಬಿದ್ದು ಎಳೆದಾಡಿದ್ದರು. ಇಷ್ಟು ದಿನ ಕಾಮ್ ಹುಡುಗನಾಗಿ, ಎಲ್ಲರಿಗೂ ಸ್ನೇಹಿತನಾಗಿ ಇದ್ದ ಕಾರ್ತಿಕ್ ಇಷ್ಟೊಂದು ಅಗ್ರೆಸಿವ್ ಆಗಿ ಬದಲಾಗಿದ್ದು ಯಾಕೆ? ಇದರ ಪರಣಾಮ ಏನಾಗಬಹುದು? ಅನ್ನೋದನ್ನು ಕಾದು ನೋಡಬೇಕಿದೆ.

Written by - YASHODHA POOJARI | Edited by - Puttaraj K Alur | Last Updated : Oct 30, 2023, 05:34 PM IST
  • ‘ಬಿಗ್‌ ಬಾಸ್’ ಮನೆಯೊಳಗೆ ಗಲಾಟೆ ಜೋರಾಗಿದ್ದು, ಕಾರ್ತಿಕ್ ಮತ್ತು ನೀತು ನಡುವೆ ವಾಕ್ಸಮರ!
  • ನಾಲ್ಕನೇ ವಾರ ಎಲ್ಲಾ ಸ್ಪರ್ಧಿಗಳು ಮೈಕೊಡವಿಕೊಂಡು ಸ್ಪರ್ಧೆಗೆ ಬಿದ್ದಂತಿದೆ
  • ಸಖತ್ ಅಗ್ರೆಸಿವ್ ಆಗಿರುವ ಕಾರ್ತಿಕ್ ಮನೆಯ ಕ್ಯಾಪ್ಟನ್‌ ಜೊತೆಗೆ ಜಗಳಕ್ಕೆ ನಿಂತಿದ್ದಾರೆ
BBK 10: ‘ಬಿಗ್ ಬಾಸ್’ ಮನೆಯೊಳಗೆ ಗಲಾಟೆಯೋ ಗಲಾಟೆ; ಕಾರ್ತಿಕ್ vs ನೀತು ವಾಕ್ಸಮರ! title=
ಕಾರ್ತಿಕ್ vs ನೀತು ವಾಕ್ಸಮರ!

ಬೆಂಗಳೂರು: ‘ಬಿಗ್‌ ಬಾಸ್’ ಮನೆಯೊಳಗೆ ಗಲಾಟೆ ಜೋರಾಗಿದೆ. ನಾಲ್ಕನೇ ವಾರ ಎಲ್ಲಾ ಸ್ಪರ್ಧಿಗಳೂ ಮೈಕೊಡವಿಕೊಂಡು ಸ್ಪರ್ಧೆಗೆ ಬಿದ್ದಂತಿದೆ. ಕಾರ್ತಿಕ್ ಅಂತೂ ಸಖತ್ ಅಗ್ರೆಸಿವ್ ಆಗಿದ್ದಾರೆ. ಮನೆಯ ಕ್ಯಾಪ್ಟನ್‌ ಜೊತೆಗೆ ಜಗಳಕ್ಕೆ ನಿಂತಿದ್ದಾರೆ.

ಅಡುಗೆ ಮನೆಯಲ್ಲಿ ಕಾರ್ತಿಕ್ ಮತ್ತು ನೀತು ಮಧ್ಯೆ ಮಾತಿನ ಚಕಮಕಿ‌ ಶುರುವಾಗಿದೆ. ನೀತು ಅವರು ಕಾರ್ತಿಕ್‍ಗೆ 'ಹಿತ್ತಾಳೆ ಕಿವಿ' ಎಂದು ಜರಿದಿದ್ದಾರೆ. ಅಲ್ಲದೇ 'ನಾನು ಒಂದ್ಸಲ ಹೇಳಿದ್ಮೇಲೆ ಮುಗಿದೋಯ್ತು ಎಂದೂ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮಾತಿಗೆ ಮಾತು ಬೆಳೆದು ಕಾರ್ತಿಕ್ 'ನೀವು ಕ್ಯಾಪ್ಟನ್. ಸಮಸ್ಯೆಯನ್ನು ಬಗೆಹರಿಸಿಕೊಡಲು ಸಾಧ್ಯವಾದರೆ ಬಗೆಹರಿಸಿ. ಇಲ್ಲವಾದರೆ ಮುಚ್ಕೊಂಡು ಕೂತ್ಕೊಂಡ್ ಬಿಡಿ' ಎಂದು ಕಿರುಚಾಡಿದ್ದಾರೆ.

ಇದನ್ನೂ ಓದಿವರುಣ್ ತೇಜ್ ಮತ್ತು ಲಾವಣ್ಯ ಆರತಕ್ಷತೆ ನಡೆಯುವ ಸ್ಥಳದ ಮಾಲೀಕರು ಈ ಸ್ಟಾರ್‌ ಹೀರೋ..!

ಇವೆಲ್ಲವೂ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ. ಕಾರ್ತಿಕ್ ಎಲಿಮಿನೇಷನ್ ಪಾಸ್ ಟಾಸ್ಕ್‍ನಲ್ಲಿಯೂ ಡ್ರೋನ್ ಪ್ರತಾಪ್ ಅವರ ಮೈಮೇಲೆ ಬಿದ್ದು ಎಳೆದಾಡಿದ್ದರು. ಇಷ್ಟು ದಿನ ಕಾಮ್ ಹುಡುಗನಾಗಿ, ಎಲ್ಲರಿಗೂ ಸ್ನೇಹಿತನಾಗಿ ಇದ್ದ ಕಾರ್ತಿಕ್ ಇಷ್ಟೊಂದು ಅಗ್ರೆಸಿವ್ ಆಗಿ ಬದಲಾಗಿದ್ದು ಯಾಕೆ? ಇದರ ಪರಣಾಮ ಏನಾಗಬಹುದು? ಅನ್ನೋದನ್ನು ಕಾದು ನೋಡಬೇಕಿದೆ.

ನೀವು ‘ಬಿಗ್‌ ಬಾಸ್’ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannadaದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: Jawan: ಇನ್ನೆರಡು ದಿನಗಳಲ್ಲಿ ಒಟಿಟಿಗೆ ಶಾರುಕ್‌ ನ್ಯೂ ಸಿನಿಮಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News