Varthur Santosh Father In Law Statement : ಬಿಗ್ ಬಾಸ್ ಮನೆಯೊಳಗಿರುವ ವರ್ತೂರ್‌ ಸಂತೋಷ್‌ ಮದುವೆ ವಿಚಾರ ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ. ವರ್ತೂರ್‌ ಸಂತೋಷ್‌ ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ತನಿಷಾ ಜೊತೆಗಿನ ಅವರ ಒಡನಾಟ ದಿನ ಕಳೆದಂತೆ ಹೆಚ್ಚುತ್ತಿದೆ. ಆದರೆ ಇದೀಗ ವರ್ತೂರ್‌ ಅವರ ಮದುವೆ ಆಗಿರೋ ಸುದ್ದಿ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ವರ್ತೂರ್‌ ಸಂತೋಷ್‌ ಮದುವೆಯ ಫೋಟೋಗಳು ವೈರಲ್‌ ಆಗುತ್ತಿವೆ. ಇದೆಲ್ಲದರ ಮಧ್ಯೆ ಸಂತೋಷ್‌ ಅವರಿಗೆ ಹೆಣ್ಣು ಕೊಟ್ಟಿದ್ದೇ ತಪ್ಪಾಯ್ತು ಎಂದು ವ್ಯಕ್ತಿಯೊಬ್ಬರು ಹೇಳಿದ ವಿಚಾರ ವೈರಲ್‌ ಆಗುತ್ತಿದೆ. 


COMMERCIAL BREAK
SCROLL TO CONTINUE READING

ವರ್ತೂರ್‌ ಸಂತೋಷ್‌ ಮಾವ ಎಂದು ಹೇಳಿರುವ ಸೋಮನಾಥ್ ಎಂಬುವವರು ಖಾಸಗಿ ನ್ಯೂಸ್‌ ಚಾನೆಲ್‌ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವರ್ತೂರ್‌ ಸಂತೋಷ್ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ವರ್ತೂರ್‌ ಸಂತೋಷ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ. ಕುಡಿದು ಮಗಳಿಗೆ ಹಿಂಸೆ ಕೊಡುತ್ತಿದ್ದ ಎಂದು ಆರೋಪಿಸಿದ್ದಾರೆ. 


ಇದನ್ನೂ ಓದಿ: ವರ್ತೂರ್‌ ಸಂತೋಷ್‌ ಈಗಾಗಲೇ ಮದುವೆ ಆಗಿದ್ದಾರಾ! ತನಿಷಾ ಜೊತೆಯ ಒಡನಾಟದ ಕತೆ ಏನು? 


ಈ ಮದುವೆಗೆ 12 ಸಾವಿರ ಮಂದಿ ಆಗಮಿಸಿದ್ದರು. ಇವನಿಗೆ ಮಗಳೂ ಇದೆ. ಆದರೆ ಈಗ ನೋಡಿದ್ರೆ ಮದುವೆ ಆಗಿಲ್ಲ ಅಂತಿದ್ದಾನೆ. ಇವರ ಅಮ್ಮನೂ ಹಾಗೇ ಹೇಳ್ತಿದ್ದಾಳೆ. ಒಡವೆ ಹಾಕಿ ನಾನೇ ಮದುವೆ ಮಾಡಿದ್ದೇನೆ ಎಂದು ಹೇಳಿದ್ದಾರೆ.


ಸಂತೋಷ್‌ ಕುಡಿಯುತ್ತಿದ್ದ.. ಡ್ರಗ್ಸ್‌ ಕೂಡ ತಗೋತಿದ್ದ. ಇದರಿಂದ ಅನಾರೋಗ್ಯಗೊಂಡಾಗ ಆಸ್ಪತ್ರೆಗೆ ಹಾಕಿ ಎರಡು ಮೂರು ತಿಂಗಳ ಬಳಿಕ ಹುಷಾರಾದ್ಮೆಲೆ ಮನೆಗೆ ಕಳಿಸಿದ್ದೀನಿ. ಅವರ ಅಮ್ಮ ಇಲ್ಲದೆ ಗಂಡ - ಹೆಂಡತಿ ನಡುವೆ ತಂದಿಡುತ್ತಿದ್ರು. ಇವನು ಸಂಜೆ ಬಂದು ಕುಡಿದು ನನ್ನ ಮಗಳಿಗೆ ಹೊಡೀತಾ ಇದ್ದ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ವರ್ತೂರ್‌ ಸಂತೋಷ್‌ ತಾಯಿ ಆಗಲಿ, ಅವರ ಮನೆಯವರು, ಸ್ನೇಹಿತರು ಯಾವುದೇ ವಿಚಾರ ಬಿಟ್ಟುಕೊಟ್ಟಿಲ್ಲ. (ಈ ಸುದ್ದಿಯನ್ನು ಊಹಾಪೋಹಗಳನ್ನು ಆಧರಿಸಿ ಬರೆಯಲಾಗಿದ್ದು, ಜೀ ಕನ್ನಡ ನ್ಯೂಸ್‌ ಪುಷ್ಠೀಕರಿಸುವುದಿಲ್ಲ) 


ಇದನ್ನೂ ಓದಿ: BBK10: ಕಿಚ್ಚನ ಮಾತಿಗೂ ಒಪ್ಪದ ವರ್ತೂರ್.. ಹೊರಹೋಗುವ ಪಟ್ಟು ಹಿಡಿದಿರೋದು ಯಾಕೆ? ಇಲ್ಲಿದೆ ನೋಡಿ ಅಸಲಿ ಕಾರಣ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.