ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನ್ನೋ ಹೆಸರಲ್ಲೇ ಪವರ್ ಇದೆ. ಒಂದಷ್ಟು ದಿನಗಳ ಹಿಂದೆ ಅಪ್ಪು ಫೋಟೋ ಮುಂದೆ ಶ್ವಾನವೊಂದು  ನಿಂತು ನೋಡುತ್ತಿರುವ ದೃಶ್ಯ, ಹಸುವೊಂದು ನಾಲಿಗೆಯಿಂದ ಅಪ್ಪು ಫೋಟೋವನ್ನ ಮುಟ್ಟೋ ದೃಶ್ಯ, ಪಾರಿವಾಳ ಅಪ್ಪು ಫೋಟೋ ಮೇಲೆ ಕುಳಿತು ನೋಡೋ ದೃಶ್ಯವನ್ನು ನೀವು ಕೂಡಾ ನೋಡಿರಬಹುದು.  ಇವೆಲ್ಲವನ್ನೂ ಕಂಡ ಅಭಿಮಾನಿಗಳು ನಿಜಕೂ ಪುನೀತ್ ಒಬ್ಬ ದೇವರು ಎಂದು ಕರೆದಿದ್ದರು. 


COMMERCIAL BREAK
SCROLL TO CONTINUE READING

ಪುನೀತ್ ರಾಜ್ ಕುಮಾರ್ ಗೆ ಅಪ್ಪ ಮತ್ತು ಅಮ್ಮನ ಸಮಾಧಿ ಕಂಠೀರವ ಸ್ಟುಡಿಯೋ ಬಳಿ ಆಗಾಗ ಹೋಗಿ ನಮಸ್ಕಾರ ಮಾಡಿ ಅಲ್ಲೇ  ಸಮಯ ಕಳೆಯುವ ಅಭ್ಯಾಸವಿತ್ತು. ಹಾಗಾಗಿ ಪುನೀತ್ ಆಗಾಗ ಅಲ್ಲಿಗೆ ಭೇಟಿ ನೀಡುತ್ತಾ ಇದ್ದರು. ಆದರೆ ಪುನೀತ್ ಯಾವುದೇ ವೇಳೆ ಅಲ್ಲಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಪಕ್ಷಿಗಳ ಹಿಂಡು ಹಾರಿ ಬಂದು ಚಿಲಿಪಿಲಿ ಅಂತ ಜೋರಾಗಿ ಕೂಗುತ್ತಿದ್ದವು ಅನ್ನೋದನ್ನ ಸಮಾಧಿ ಬಳಿ ಕೆಲಸ ಮಾಡುವ ವ್ಯಕ್ತಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ : Kabzaa: ಕಬ್ಜ ಸಿನಿಮಾದ ದೊಡ್ಡ ಸುದ್ದಿ ಇಂದು ರಿವೀಲ್.! ಸ್ಯಾಂಡಲ್‌ವುಡ್‌ನ 3 ಸೂಪರ್ ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ!


ಈ ವಿಚಾರ ನಿಜಕ್ಕೂ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಹಾಗಾದರೆ ಏನಿದರ ಒಳ ರಹಸ್ಯ ಅನ್ನೋದು ಮಾತ್ರ ಪ್ರಶ್ನೆಯಾಗೇ ಉಳಿದಿದೆ. ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಅಪ್ಪು ಅವರನ್ನ ದೇವರಂತೆ ಪೂಜಿಸುವ ಮಂದಿ ಹೆಚ್ಚಿದ್ದಾರೆ. ಎಲ್ಲರ ಮನೆಮನಗಳಲ್ಲಿ ಅಪ್ಪು ಶಾಶ್ವತವಾಗಿ ನೆಲೆಸಿದ್ದಾರೆ. ಎಲ್ಲೆಡೆ ಏನೇ ಕಾರ್ಯಕ್ರಮ ನಡೆದರೂ ಅಲ್ಲಿ ಅಪ್ಪುಗೆ ವಿಶೇಷ ನಮನ ಸಲ್ಲಿಸಲಾಗುತ್ತದೆ. ಕಳೆದ ಬಾರಿ ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ರಿಲೀಸ್ ಆಗಿತ್ತು. 


ಈ ಬಾರಿ ಅಪ್ಪು ಹುಟ್ಟುಹಬ್ಬದ ದಿನ ಏನೆಲ್ಲಾ ಕಾರ್ಯಕ್ರಮಗಳು ಇರುತ್ತೆ ಗೊತ್ತಾ? ಅಪ್ಪು ಅಭಿಮಾನಿಗಳು ಈ ಬಾರಿಯ ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಅದು ಕೂಡಾ ಸಮಾಜಮುಖಿ ಕೆಲಸಗಳನ್ನ ಮಾಡುವ ಮೂಲಕ ಮಾದರಿಯಾಗಬೇಕು ಅನ್ನೋ ಚಿಂತನೆಯಲ್ಲಿ ಇದ್ದಾರೆ. ರಕ್ತದಾನ, ಅನ್ನದಾನ ಜೊತೆಗೆ ನೇತ್ರಾದಾನದ ಅಭಿಯಾನ ಹೀಗೆ ಹಲವಾರು ರೀತಿಯಲ್ಲಿ ಪ್ಲಾನ್  ಮಾಡಿಕೊಂಡಿದ್ದಾರೆ. 


ಇದನ್ನೂ ಓದಿ : ಅಣ್ಣಾವ್ರ ಮೊಮ್ಮಗ, ಅಪ್ಪು ಮಗ ಯುವ ಸಿನಿಮಾ ಬಗ್ಗೆ ಇಲ್ಲಿದೆ Excusive ಮಾಹಿತಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.