ಬೆಂಗಳೂರು: ಪವರ್ ಸ್ಟಾರ್ ಅಗಲಿಕೆ ನಂತ್ರ ಪವರ್ ಫ್ಯಾನ್ಸ್ ಗಳು ಯುವರಾಜ್ ಅವರಲ್ಲಿ ಅಪ್ಪುನ ಕಾಣ್ತಿದ್ದಾರೆ.. ಅಪ್ಪು ನಟಿಸ ಬೇಕಿದ್ದ ಕತೆಯಲ್ಲಿ ಯುವ ಹೀರೋ ಆಗಿ ಕಾಣಿಸಲಿದ್ದು, ಇಂದು ಸಂಜೆ ಯುವ ಅಭಿನಯದ ಚಿತ್ರದ ಟೈಟಲ್ ಟೀಸರ್ ರಿವೀಲ್ ಆಗಲಿದೆ. ಇನ್ನು ಈ ಟೀಸರ್ ಬರೋಕು ಮುಂಚೆ ಒಂದಷ್ಟು ಈ ಸಿನಿಮಾ ಬಗ್ಗೆ ಇಲ್ಲಿದೆ ಕೆಲವು Exclusive ಮಾಹಿತಿ.
ಹೌದು, ರಾಜ್ ಕುಟುಂಬದ ಕುಡಿ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರ ಸಿಕ್ಕಿದ್ದು, ಪ್ರಚಾರ ಇಲ್ಲದ ಈ ವಿಚಾರ ಏನು ಅಂತ ತಿಳಿದ್ರೆ ದೊಡ್ಮನೆ ಅಭಿಮಾನಿಗಳು ಫುಲ್ ಖುಷ್ ಆಗ್ತಾರೆ....
ಶಬರಿ ರಾಮನಿಗಾಗಿ ಕಾಯ್ತುದ್ದ ರೀತಿಯಲ್ಲೆ ದೊಡ್ಮನೆ ಅಭಿಮಾನಿ ದೇವರುಗಳು ಯುವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡದನ್ನ ಕಾಯ್ತಿದ್ರು.. ಈಗ ಕೊನೆಗೂ ಆ ಶುಭಗಳಿಗೆಗೆ ಕಾಲ ಕೂಡಿಬಂದಿದೆ. ನಾಳೆ ದೊಡ್ಮನೆ ಕುಡಿ ಅಣ್ಣಾವ್ರ ಮುದ್ದಿನ ಮೊಮ್ಮಗ. ಯುವರಾಜ್ ನಾಯಕನಾಗಿ ನಟಿಸಲಿರುವ ಮೊದಲ ಚಿತ್ರ ಅದ್ದೂರಿಯಾಗಿ ಸೆಟ್ಟೇರಲಿದೆ. ಅಲ್ಲದೆ ಅದೇ ದಿನ ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡಲು ನಿರ್ದೇಶಕ
ಸಂತೋಷ್ ಆನಂದ್ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ- Amitabh Bachchan: ಥಿಯೇಟರ್ನಲ್ಲಿ ಅಮಿತಾಭ್ ಪ್ಯಾಂಟ್ ಒಳಗಡೆ ಇಲಿ ಹೋದಾಗ..
ಅಪ್ಪು ಅಕಾಲಿಕ ಮರಣದ ನಂತರ ಪವರ್ ಸ್ಟಾರ್ ಗಾಗಿ ಮಾಡಿಸಿದ್ದ ಕತೆಯನ್ನು ಯುವರಾಜ್ ಗೆ ಚಿತ್ರ ಮಾಡ್ತಿರೋದಾಗಿ ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡಿದ್ರು... ಯಾವಾಗ ಈ ವಿಚಾರ ಅಧಿಕೃತವಾಯ್ತೋ ಆ ಕ್ಷಣದಿಂದಲೇ ಈ ಚಿತ್ರದ ಮೇಲೆ ನಿರೀಕಕ್ಷೆಗಳು ಮೌಂಟ್ ಎವರೆಸ್ಟ್ ಎತ್ತರಕ್ಕೆ ಬೆಳಿದಿತ್ತು. ಇನ್ನು ಇದನ್ನು ಸೂಕ್ಷ್ಮ ವಾಗಿ ಗಮನಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೈವೋಲ್ಟೇಜ್ ಚಿತ್ರ ಮಾಡಲೇಬೇಕು ಎಂದು ನಿರ್ಧರಿಸಿ ಹಗಲು ರಾತ್ರಿ ಕೆಲಸ ಮಾಡೊದ್ರ ಜೊತೆಗೆ ಯುವರಾಜ್ ನನ್ನು ಕತೆಗೆ ತಕ್ಕಂತೆ ಹುರಿಗೊಳಿಸಿ ಕೊನೆಗೂ ಈಗ ಚಿತ್ರವನ್ನು ಶೂಟಿಂಗ್ ಹಂತಕ್ಕೆ ತಂದಿದ್ದಾರೆ.
ಈ ಸಿನಿಮಾ ಅಪ್ಪು ಆಶಿರ್ವಾದಲ್ಲೇ ಅನೌನ್ಸ್ ಆಗಿದ್ದು, ಅಪ್ಪು ಬರ್ತ್ಡೇ ದಿನದಿಂದ ಶೂಟಿಂಗ್ ಪ್ಲಾನ್ ಮಾಡಿರುವ ಸಂತೋಷ್ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲೇಬೇಕು ಎಂದು ಪ್ಲಾನ್ ಮಾಡಿದ್ದಾರೆ. ಇನ್ನು ಇಂದು ಸಂಜೆ ಚಿತ್ರದ ಮುಹೂರ್ತ ಮುಗಿಸೋದ್ರ ಜೊತೆಗೆ ಟೈಟಲ್ ರಿವೀಲ್ ಮಾಡೊದಕ್ಕೆ ಪವರ್ ಫುಲ್ ಟೀಸರ್ ರೆಡಿಮಾಡಿದ್ದಾರೆ. ಅಪ್ಪುಗಾಗಿ ರೆಡಿಯಾಗಿದ್ದ ಕತೆಯಾದ್ದರಿಂದ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಇದ್ದೇ ಇರುತ್ತೆ ಅನ್ನೋದನ್ನು ಅರಿತಿರೋ ಸಂತೋಷ್ ಆನಂದ್ ರಾಮ್ ಟೈಟಲ್ ಟೀಸರ್ ನಲ್ಲಿ ಮಾಸ್ ಡೈಲಾಗ್ ಗಳ ಸರಮಾಲೇಯನ್ನೇ ಪೋಣಿಸಿದ್ದಾರೆ ಅನ್ನೋ ಮಾಹಿತಿ ರಿವೀಲ್ ಆಗಿದೆ.
ಈಗಾಗಲೇ ಟೀಸರ್ ಕೆಲಸ ಕಂಪ್ಲೀಟ್ ಮಾಡಿ, ನಿನ್ನೆ ಡಬ್ಬಿಂಗ್ ಮುಗಿಸಿರುವ ಸಂತೋಷ್ ಆನಂದ್ ರಾಮ್ ಯುವರತ್ನ ಚಿತ್ರದಲ್ಲಿ ಅಪ್ಪುಗೆ ಬರೆದಿದ್ದ ಕೌಂಟರ್ ಗೆ ಎನ್ ಕೌಂಟರ್ ಎಂಬ ಖಡಕ್ ಹಾಡಿನ ಲೈನಿನಂತೆ ಯುವ ಟೀಸರ್ ನಲ್ಲಿ ಬ್ಲಡ್ ವಿಚಾರಕ್ಕೆ ಬಂದ್ರೆ ಬ್ಲಡ್ ಹರ್ಸೋವರ್ಗೂ ಬಿಡಲ್ಲ ಅನ್ನೋ ಖದರ್ ಡೈಲಾಗ್ ಇರೋದರ ವಾಸನೆ ಸಿಕ್ಕಿದೆ. ಇದಷ್ಟೇ ಅಲ್ಲ ಇದೇ ತರದ ಖಡಕ್ ಡೈಲಾಗ್ ಗಳು ಟೀಸರ್ ನಲ್ಲಿ ಅಡಕವಾಗಿದೆ ಅನ್ನೋ ಇಂಟ್ರೆಸ್ಟಿಂಗ್ ಸಮಾಚಾರ ಗಾಂಧಿನಗರದ ಗಲ್ಲಿಗಳಲ್ಲಿ ಗಿರ್ಕಿ ಹೊಡೆಯುತ್ತಿದೆ..
ಇದನ್ನೂ ಓದಿ- Kiccha Sudeep : ಸುದೀಪ್ ಮುಂದಿನ ಚಿತ್ರದ ಬಗ್ಗೆ ಅನೂಪ್ ಭಂಡಾರಿ ಬಿಗ್ ಅಪ್ಡೇಟ್.!?
ಇನ್ನು ಈತರದ ಮಾಸ್ ಡೈಲಾಗ್ ಸೂಕ್ಷ್ಮತೆ ಅರಿತ ಸಿನಿಮಾ ಪಂಡಿತರು ಸಂತೋಷ್ ಆನಂದ್ ರಾಮ್ ಯುವ ರಾಜ್ ಮೂಲಕ ಯಾರಿಗಾದ್ರು ಕೌಂಟರ್ ಕೊಡ್ತಾರ ಅನ್ನೋ ಚರ್ಚೆ ಶುರುವಾಗಿದೆ. ಇನ್ನು ಈ ಚರ್ಚೆ ಶುರುವಾಗೋದಕ್ಕೂ ರೀಸನ್ ಇದೆ. ಅದೇನಪ್ಪ ಅಂದ್ರೆ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ದೊಡ್ಮನೆ ಮತ್ತು ಅಭಿಮಾನಿಗಳ ಪ್ರೀತಿಯ ಅಪ್ಪು ಬಗ್ಗೆ ಕೆಟ್ಟ ಪದಗಳ ಪ್ರಯೋಗ ಮಾಡಿದ್ದಾರೆ. ಇದರಿಂದ ರೋಸಿಹೋಗಿರೋ ಸಂತೋಷ್ ಆನಂದ್ ರಾಮ್ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕೆಂಬ ಫಾರ್ಮೂಲವನ್ನು ಫಾಲೋ ಮಾಡಿದ್ದಾರೆ ಅನ್ನೋ ಮಾತು ಚರ್ಚೆ ಆಗ್ತಿದೆ. ಅದ್ರೆ ಟೀಸರ್ ನಲ್ಲಿ ಈತರದ ಡೈಲಾಗ್ ಇದ್ಯ ಇಲ್ವಾ ಅನ್ನೊದು ಇಂದು ಸಂಜೆ ರಿವೀಲ್ ಆಗಲಿದ್ದು, ಒಂದು ವೇಳೆ ಇತರದ ಡೈಲಾಗ್ ಇದ್ರೆ ಟೀಸರ್ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗೋದ್ರಲ್ಲಿ ಯಾವ್ದೆ ಡೌಟ್ ಇಲ್ಲ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.