ಜೈಪುರದ ನಹರ್ಗಾ ಕೋಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆ
ಜೈಪುರ: ಸಂಜಯ್ ಲೀಲಾ ಬನ್ಸಾಲಿ ಅವರ `ಪದ್ಮಾವತಿ' ಚಿತ್ರದ ವಿವಾದದ ನಡುವೆ, ರಾಜಸ್ಥಾನದ ನಹರ್ಗಾ ಕೋಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹವೊಂದು ಕಂಡುಬಂದಿದ್ದು, ಹತ್ತಿರದ ಕಲ್ಲು ಬಂಡೆ ಮೇಲೆ ಚಿತ್ರದ ವಿರುದ್ಧ ಘೋಷಣೆಗಳನ್ನು ಬರೆಯಲಾಗಿದೆ.
ಮೃತ ವ್ಯಕ್ತಿಗೆ 40 ವರ್ಷವಿರಬಹುದೆಂದು ಅಂದಾಜಿಸಲಾಗಿದ್ದು, ಯಾರೆಂದು ತಿಳಿದುಬಂದಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯೂ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಯಲಿದೆ ಎಂದು ಜೈಪುರ(ಉತ್ತರ) ಡಿಸಿಪಿ ಸತ್ಯೇಂದ್ರ ಸಿಂಗ್ ತಿಳಿಸಿದ್ದಾರೆ.