ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್‌ ಜೋಡಿಯನ್ನು ಬಾಲಿವುಡ್‌ನಲ್ಲಿ ಅತ್ಯಂತ ಪ್ರಸಿದ್ಧ ಕಪಲ್‌ ಎಂದೇ ಪರಿಗಣಿಸಲಾಗಿದೆ. ಇವತ್ತಿಗೂ ಮಾಧ್ಯಮಗಳಲ್ಲಿ ಇವರಿಬ್ಬರ ಪ್ರೀತಿಯ ಬಗ್ಗೆ ಮಾತುಕತೆಗಳು ನಡೆಯುತ್ತದೆ. ಸಿನಿಮಾ ಸೆಟ್‌ನಲ್ಲಿ ಪ್ರೀತಿಯ ಬಲೆಗೆ ಬಿದ್ದ ಇಬ್ಬರೂ, ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಇದೀಗ ಐಶ್ವರ್ಯಾ ಮತ್ತು ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 15 ವರ್ಷಗಳೇ ಕಳೆದಿದೆ. ಈ ಜೋಡಿಯ ಕೆಲವೊಂದು ಸ್ವಾರಸ್ಯಕರ ಸಂಗತಿಯನ್ನು ಇಲ್ಲಿ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಐಶ್‌ ಮೇಲೆ ಪ್ರೀತಿಯಾದ ಬಳಿಕ ಆಕೆಗೆ ಪ್ರಪೋಸ್‌ ಮಾಡಲು ಅಭಿಷೇಕ್‌ ಬಚ್ಚನ್‌ ನಕಲಿ ಉಂಗುರವನ್ನು ನೀಡಿದ್ದರಂತೆ. ಈ ಸುದ್ದಿ ನಿಮಗೆ ಆಶ್ಚರ್ಯ ಮೂಡಿಸಿದರೂ ಸಹ ನಿಜ. ಇದಕ್ಕೆ ಕಾರಣವನ್ನೂ ಅಭಿಷೇಕ್‌ ಹೇಳಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ 'ಗುರು' ಚಿತ್ರದ ಶೂಟಿಂಗ್‌ನಲ್ಲಿದ್ದರು. ಇಬ್ಬರೂ ಸ್ಟಾರ್‌ಗಳು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಅಭಿಷೇಕ್‌ಗೆ ಉಂಗುರ ಖರೀದಿಸಲು ಸಮಯ ಸಿಗಲಿಲ್ಲವಂತೆ. ಇದರಿಂದಾಗಿ ಶೂಟಿಂಗ್‌ಗೆ ಬಳಸಲಾದ ನಕಲಿ ಉಂಗುರವನ್ನು ನೀಡಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದಾರಂತೆ. 


ಇದನ್ನು ಓದಿ: ಗಿಣಿರಾಮ ಮೂಲಕ ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಡಲಿದ್ದಾರೆ ನಟಿ ಸುಷ್ಮಾ..!


2000ನೇ ಇಸವಿಯಲ್ಲಿ ಮೊದಲ ಬಾರಿಗೆ ಅಭಿಷೇಕ್ ಮತ್ತು ಐಶ್ವರ್ಯಾ 'ಧೈ ಅಕ್ಷರ್ ಪ್ರೇಮ್ ಕೆ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಇಬ್ಬರ ಭೇಟಿ ಸ್ನೇಹಕ್ಕೆ ತಿರುಗಿತ್ತು. ಮೂರು ವರ್ಷಗಳ ನಂತರ ಅಂದರೆ 2003ರಲ್ಲಿ ಮತ್ತೊಮ್ಮೆ ‘ಕುಚ್ ನಾ ಕಹೋ’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. 2005ರಲ್ಲಿ ಐಶ್ವರ್ಯಾ ‘ಬಂಟಿ ಔರ್ ಬಬ್ಲಿ’ ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದರು. ಈ ಹಾಡಿನ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಇದರ ನಂತರ ಅವರು 'ಉಮ್ರಾವ್ ಜಾನ್', 'ಗುರು' ಮತ್ತು 'ಧೂಮ್ 2' ನಂತಹ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು.


14 ಜನವರಿ 2007 ರಂದು, ಇಬ್ಬರೂ ಮುಂಬೈನ ಜಲ್ಸಾದಲ್ಲಿರುವ ಅಭಿಷೇಕ್ ಅವರ ಬಂಗಲೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥ ನಡೆದು ಮೂರು ತಿಂಗಳ ನಂತರ ಅಂದರೆ ಏಪ್ರಿಲ್ 20, 2007 ರಂದು ಇಬ್ಬರೂ ಸ್ಟಾರ್‌ಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 


ಇದನ್ನು ಓದಿ: ಕಲರ್ ಫುಲ್ 'ಡ್ಯಾನ್ಸಿಂಗ್ ಚಾಂಪಿಯನ್' ಫಿನಾಲೆಗೆ' ಅದ್ಧೂರಿ ತೆರೆ


ವಯಸ್ಸಿನಲ್ಲಿ ಅಭಿಷೇಕ್‌ಗಿಂತ ಐಶ್ವರ್ಯಾ ರೈ ಮೂರು ವರ್ಷ ದೊಡ್ಡವರು ಎಂಬುದು ಅಲ್ಲರಿಗೂ ಗೊತ್ತೇ ಇದೆ. ಮದುವೆಯ ನಂತರ, ಇಬ್ಬರೂ ಹನಿಮೂನ್‌ಗಾಗಿ ಯುರೋಪ್‌ಗೆ ಹೋಗಿದ್ದರು. ಇನ್ನು ಮದುವೆಯಾದ ನಾಲ್ಕು ವರ್ಷಗಳ ನಂತರ 16 ನವೆಂಬರ್ 2011 ರಂದು ಐಶು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅವಳಿಗೆ ಆರಾಧ್ಯ ಬಚ್ಚನ್‌ ಎಂದು ನಾಮಕರಣ ಮಾಡಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.