ಗಿಣಿರಾಮ ಮೂಲಕ ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಡಲಿದ್ದಾರೆ ನಟಿ ಸುಷ್ಮಾ..!

ಜೀ ಕನ್ನಡ ವಾಹಿನಿಯ ಜನ ಮೆಚ್ಚಿದ ಧಾರಾವಾಹಿ 'ಯಾರೇ ನೀ ಮೋಹಿನಿ' ತನ್ನ ವಿಭಿನ್ನ ಕಥೆಯಿಂದ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸದಾ ಮುದ್ದು ಮಾವನ ಜಪ ಮಾಡುತ್ತಾ ಅಳುವ ಬೆಳ್ಳಿ ಅಲಿಯಾಸ್ ಸುಷ್ಮಾ ಶೇಖರ್‌ ಆಕ್ಟಿಂಗ್‌ ನೋಡಿ ಜನ ಫಿದಾ ಆಗಿದ್ದರು..

Written by - CHARITHA PATEL | Edited by - Manjunath Naragund | Last Updated : May 30, 2022, 04:30 PM IST
  • ನಂತ್ರ ಆ ಸೀರಿಯಲ್‌ನ ಕಲಾವಿದರು ಬೇರೆ ಬೇರೇ ಪ್ರಾಜೆಕ್ಟ್‌ಗಳಲ್ಲಿ ಸಖತ್‌ ಬ್ಯುಸಿ ಆದ್ರು..
  • ಆದ್ರೆ ನಮ್‌ ಬೆಳ್ಳಿ ಅಲಿಯಾಸ್‌ ಸುಶ್ಮಾ ಶೇಖರ್‌ ಮಾತ್ರ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು..ಸುಷ್ಮಾ ಅವ್ರ ಫ್ಯಾನ್ಸ್‌ ಕೂಡಾ ಅವ್ರ ನೆಚ್ಚಿನ ನಟಿಯನ್ನ ಮಿಸ್‌ ಮಾಡಿಕೊಳ್ತಾಯಿದ್ರು..
  • ಅದರಲ್ಲೂ ಆಗಾಗ ರೀಲ್ಸ್‌ನಲ್ಲಿ ಸುಶ್ಮಾ ಅವರನ್ನ ನೋಡಿ ಕಣ್ತುಂಬಿಕೊಳ್ತಾಯಿದ್ರು..
ಗಿಣಿರಾಮ ಮೂಲಕ ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಡಲಿದ್ದಾರೆ ನಟಿ ಸುಷ್ಮಾ..! title=
file photo

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನ ಮೆಚ್ಚಿದ ಧಾರಾವಾಹಿ 'ಯಾರೇ ನೀ ಮೋಹಿನಿ' ತನ್ನ ವಿಭಿನ್ನ ಕಥೆಯಿಂದ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸದಾ ಮುದ್ದು ಮಾವನ ಜಪ ಮಾಡುತ್ತಾ ಅಳುವ ಬೆಳ್ಳಿ ಅಲಿಯಾಸ್ ಸುಷ್ಮಾ ಶೇಖರ್‌ ಆಕ್ಟಿಂಗ್‌ ನೋಡಿ ಜನ ಫಿದಾ ಆಗಿದ್ದರು.. ಇನ್ನೂ  'ಯಾರೇ ನೀ ಮೋಹಿನಿ' ಧಾರಾವಾಹಿ ಕೂಡ ಟಿಆರ್‌ಪಿಯಲ್ಲಿ ಅನೇಕ ಬಾರಿ ಟಾಪ್ 5 ಸ್ಥಾನಗಳಲ್ಲಿತ್ತು. ಶ್ರುತಿ ನಾಯ್ಡು ನಿರ್ದೇಶನ ಹಾಗೂ ನಿರ್ಮಾಣದ ಈ ಸೀರಿಯಲ್‌ಗೆ ಒಳ್ಳೆಯ ಪ್ರಖ್ಯಾತಿ ಕೂಡ ಇತ್ತು. ಆದರೆ ಕಥೆ ಮುಂದೆ ಸಾಗುವುದಿಲ್ಲ ಎಂಬ ಬೇಸರ ಪ್ರೇಕ್ಷಕರಿಗಿತ್ತು, ಬಳಿಕ ಸೀರಿಯಲ್‌ ವೈಂಡಪ್‌ ಆಯ್ತು.

ನಂತ್ರ ಆ ಸೀರಿಯಲ್‌ನ ಕಲಾವಿದರು ಬೇರೆ ಬೇರೇ ಪ್ರಾಜೆಕ್ಟ್‌ಗಳಲ್ಲಿ ಸಖತ್‌ ಬ್ಯುಸಿ ಆದ್ರು.. ಆದ್ರೆ ನಮ್‌ ಬೆಳ್ಳಿ ಅಲಿಯಾಸ್‌ ಸುಶ್ಮಾ ಶೇಖರ್‌ ಮಾತ್ರ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು..ಸುಷ್ಮಾ ಅವ್ರ ಫ್ಯಾನ್ಸ್‌ ಕೂಡಾ ಅವ್ರ ನೆಚ್ಚಿನ ನಟಿಯನ್ನ ಮಿಸ್‌ ಮಾಡಿಕೊಳ್ತಾಯಿದ್ರು.. ಅದರಲ್ಲೂ ಆಗಾಗ ರೀಲ್ಸ್‌ನಲ್ಲಿ ಸುಶ್ಮಾ ಅವರನ್ನ ನೋಡಿ ಕಣ್ತುಂಬಿಕೊಳ್ತಾಯಿದ್ರು.. No description available.

ಇದನ್ನೂ ಓದಿ: ZEE5 ಟಿಟಿಯಲ್ಲಿಯೂ ಹೊಸ ದಾಖಲೆ ಬರೆದ 'RRR..!

ಇದೀಗ ಸುಶ್ಮಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಒಂದು ಸಿಕ್ಕಿದೆ.. ಅದೇನಪ್ಪಾ ಅಂದ್ರೆ ಸದ್ಯ ಸುಶ್ಮಾ ಶೇಕರ್‌ ಕಿರುತೆರೆಗೆ ಮತ್ತೆ ಮರಳಿದ್ದಾರೆ.. ಈ ವಿಷ್ಯ ಕೇಳಿದಾಕ್ಷಣ ಯಾವ ಸೀರಿಯಲ್‌ನಲ್ಲಿ ಬರ್ತಿದ್ದಾರೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡೊದು ಸಹಜ.. ಯೆಸ್‌, ಆ ಪ್ರಶ್ನೆಗೆ ಇಲ್ಲಿದೆ ಉತ್ತರ.. ಹೌದು ಕಲರ್ಸ್‌ ಕನ್ನಡದಲ್ಲಿ ಟಾಪ್‌ ಲೀಸ್ಟ್‌ನಲ್ಲಿ ಸ್ಥಾನ ಪಡೆದಿರುವ ಗಿಣಿರಾಮ ಧಾರವಾಹಿಯಲ್ಲಿ ಸುಷ್ಮಾ ಮುಖ್ಯ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ..ವಿಶೇಷ ಅಂದ್ರೆ ಸುಷ್ಮಾ ಅವ್ರ ಎಂಟ್ರಿ ಸೀರಿಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌ ನೀಡೋದು ಪಕ್ಕಾ.. 

ಇನ್ನೂ ಯಾರೇ ನೀ ಮೋಹಿನಿ ಧಾರವಾಹಿಗೆ ವೈಂಡಪ್‌ ಆದಾಗ ನಟಿ ಸುಶ್ಮಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಂದು ಪೋಸ್ಟ್‌ ಅನ್ನು ಹಾಕಿದ್ರು.. ಹೌದು 'ಯಾರೇ ನೀ ಮೋಹಿನಿ ಧಾರಾವಾಹಿ ತಂಡದ ಜೊತೆ ಕೆಲಸ  ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಸದ್ಯ  ನಾನು ಪದವಿ ಮುಗಿಸಿ ಇನ್ನೇನು ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡಲು ರೆಡಿಯಿದ್ದಾಗ ಆಗ ನೀವು ನನ್ನ ಬದುಕು ಇನ್ನಷ್ಟು ಕಲರ್‌ಫುಲ್ ಹಾಗೂ ಯಶಸ್ವಿ ಆಗುವಂತೆ ಮಾಡಲು ಈ ಅವಕಾಶ ನೀಡಿದ್ದಿರಿ. ಈ ಮೂರು ವರ್ಷ ನನ್ನ ಬದುಕಿಗೆ ಒಂದು ಮೈಲಿಗಲ್ಲು ಆಗುವುದು ಎಂದು ಭಾವಿಸುತ್ತೇನೆ. ನನ್ನನ್ನು ಸಹಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನೀವು ನನಗೆ ಮಾತ್ರ ಅಲ್ಲದೆ ಅನೇಕರಿಗೆ ಪ್ರೇರಣೆ' ಎಂದು ನಟಿ ಸುಷ್ಮಾ ಶೇಖರ್  ಶ್ರುತಿ ನಾಯ್ಡು ಜೊತೆಗಿನ ಸಂಬಂಧದ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.No description available.

ಇದನ್ನೂ ಓದಿ: ವಿಕ್ರಮ್ ಚಿತ್ರದ ಪ್ರಚಾರ: ರಜನಿಕಾಂತ್ ಅವರನ್ನು ಭೇಟಿಯಾದ ಕಮಲ್ ಹಾಸನ್

ಈ ಪೋಸ್ಟ್‌ ಹಾಕಿದ ನಂತ್ರ ಸುಷ್ಮಾ ಇಂಡಸ್ಟ್ರಿಯಿಂದ ಕೊಂಚ ಬ್ರೇಕ್‌ ತೆಗಿದುಕೊಂಡಿದ್ದರು.. ಆ ಸಂಧರ್ಭದಲ್ಲಿ ಸುಶ್ಮಿ ಎಂಎನ್‌ಸಿ ಕಂಪನಿಗೆ ಜಾಯ್ನ್‌ ಆದ್ರಾ ಎಂಬ ಪ್ರಶ್ನೆ ಕೂಡಾ ಸಾಕಷ್ಟು ಜನಕ್ಕೆ ಮೂಡಿತ್ತು.. ಇದೀಗ ಸುಶ್ಮಾ ಅವ್ರ ರೀ ಎಂಟ್ರಿ ಫ್ಯಾನ್ಸ್‌ಗೆ ಸಂತಸ ನೀಡಿದೆ.. ಆದ್ದರಿಂದ ಈಗ ಅವ್ರಿಗೆ ನಮ್‌ ಕಡೆಯಿಂದಲೂ ಆಲ್‌ ದ ಬೆಸ್ಟ್ ಹೇಳೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News