ಸಿನಿಮಾ ಸೆಟ್ ನಲ್ಲಿ ಗಾಯಗೊಂಡ ಬಾಲಿವುಡ್ ನಟಿ ದಿಶಾ ಪಟಾನಿ
ಬಾಲಿವುಡ್ ನಟಿ ದಿಶಾ ಪಟಾನಿ ಮಲಂಗ್ ಚಿತ್ರದ ಸೆಟ್‌ಗಳಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಚಿತ್ರ ತಂಡದ ವೇಳಾಪಟ್ಟಿಯ ಪ್ರಕಾರ ಅವರು ಶೀಘ್ರದಲ್ಲೇ ಸೆಟ್‌ಗೆ ಮರಳಲಿದ್ದಾರೆ ಎನ್ನಲಾಗಿದೆ.
ನವದೆಹಲಿ: ಬಾಲಿವುಡ್ ನಟಿ ದಿಶಾ ಪಟಾನಿ ಮಲಂಗ್ ಚಿತ್ರದ ಸೆಟ್‌ಗಳಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಚಿತ್ರ ತಂಡದ ವೇಳಾಪಟ್ಟಿಯ ಪ್ರಕಾರ ಅವರು ಶೀಘ್ರದಲ್ಲೇ ಸೆಟ್‌ಗೆ ಮರಳಲಿದ್ದಾರೆ ಎನ್ನಲಾಗಿದೆ.
ಸುದ್ದಿ ಮೂಲಗಳ ಪ್ರಕಾರ "ಮಲಾಂಗ್ ಚಿತ್ರದ ಚಿತ್ರೀಕರಣದಲ್ಲಿ ದಿಶಾ ಗಾಯಗೊಂಡಿದ್ದಾರೆ.ಈಗ ಅವರು ಅಗತ್ಯವಾದ ಔಷಧಿ ಹಾಗೂ ಚಿಕಿತ್ಸೆಯನ್ನು ಪಡೆದಿದ್ದು, ಅವರು ಗುಣ ಮುಖವಾಗುತ್ತಿದ್ದಾರೆ. ವೇಳಾಪಟ್ಟಿಯಂತೆ ಶೂಟಿಂಗ್ ನಲ್ಲಿ ಮತ್ತೆ ಭಾಗವಹಿಸಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಅಷ್ಟಕ್ಕೂ ದಿಶಾ ಪಟಾನಿ ಗಾಯಗೊಳ್ಳುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಅವರು ಸಲ್ಮಾನ್ ಖಾನ್ ಅವರ ಭರತ್ ನ ರಿಹರ್ಸಲ್ ಸಮಯದಲ್ಲಿ ಗಾಯಗೊಂಡಿದ್ದರು. ಈ ಸಂಗತಿಯನ್ನು ಅವರು ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. "ಇದು ನಾನು ಮಾಡಿದ ಅತ್ಯಂತ ಕಠಿಣ ಕೆಲಸಗಳಲ್ಲಿ ಒಂದಾಗಿದೆ. ಶೂಟಿಂಗ್ ಮಾಡುವಾಗ ನಾನು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದೇನೆ ಮತ್ತು ಇನ್ನೂ ಫ್ಲಿಪ್ಸ್, ಡ್ಯಾನ್ಸ್, ಫೈರ್ ಹೂಪ್ಸ್ ಅನ್ನು ನೆಗೆಯುವುದನ್ನು ಮಾಡಬೇಕಾಗಿತ್ತು. ವಾಸ್ತವವಾಗಿ, ನನ್ನ ಮೊಣಕಾಲು ಇನ್ನೂ ಇದೆ ಚೇತರಿಸಿಕೊಂಡಿಲ್ಲ. " ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು.
ಈಗ ಮಲಾಂಗ್ ಚಿತ್ರದಲ್ಲಿ ದಿಶಾ ಪಟಾಣಿ ಜೊತೆಗೆ ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್ ಮತ್ತು ಕೆ. ಕುನಾಲ್ ನಟಿಸಿದ್ದಾರೆ. ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ ಎನ್ನಲಾಗಿದೆ