Bollywood Actor jackie shroff: ಚಿತ್ರರಂಗದ ಇತಿಹಾಸದಲ್ಲಿ ಅನೇಕ ನಟರು ತಮ್ಮ ನಟನೆಯ ಆಧಾರದ ಮೇಲೆ ಬಾಲಿವುಡ್ ಅನ್ನು ವರ್ಷಗಳ ಕಾಲ ಆಳಿದ್ದಾರೆ... ಆದರೆ ಅವರೆಲ್ಲ ತಮ್ಮ ಬಾಲ್ಯವನ್ನು ಅತ್ಯಂತ ಬಡತನದಲ್ಲಿ ಕಳೆದವರು.. ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಈ ನಟ ಕೂಡ ಅವರಲ್ಲಿ ಒಬ್ಬರು. ಇವರು ಸಿಗರೇಟ್ ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬವನ್ನು ನಡೆಸುತ್ತಿದ್ದರಂತೆ.. 


COMMERCIAL BREAK
SCROLL TO CONTINUE READING

ಇವರು ಬೇರೆಬ ಯಾರೂ ಅಲ್ಲ ಬಾಲಿವುಡ್‌ನ 'ಹೀರೋ' ಜಾಕಿ ಶ್ರಾಫ್.. ಒಂದು ದಿನ ಇವರು ಬಸ್ ನಿಲ್ದಾಣದಲ್ಲಿ ನಿಂತಾಗ ಜಾಹೀರಾತು ಏಜೆನ್ಸಿಯ ವ್ಯಕ್ತಿಯೊಬ್ಬರು ಗಮನಿಸಿದರು. ಅಂದೇ ಅವರ ಅದೃಷ್ಟ ಬದಲಾಗಿ.. ಆ ದಿನದ ನಂತರ ಜಾಕಿ ಶ್ರಾಫ್ ಗ್ಲಾಮರ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಇಂದಿಗೂ ಬಿ-ಟೌನ್‌ನಲ್ಲಿ ಅವರ ಪ್ರಭಾವ ಮುಂದುವರಿದಿದೆ..


ಇದನ್ನೂ ಓದಿ-Bigg Boss: 'ಬಾತ್‌ರೂಮ್‌ನಲ್ಲಿ...', ಬಿಗ್‌ಬಾಸ್‌ ಮನೆಯ ಶಾಕಿಂಗ್ ಸಿಕ್ರೇಟ್‌ ರಿವೀಲ್‌ ಮಾಡಿ ಖ್ಯಾತ ಸ್ಪರ್ಧಿ!


ಇಂದು ಐಷಾರಾಮಿ ಜೀವನ ನಡೆಸುತ್ತಿರುವ ಜಾಕಿ ಶ್ರಾಫ್ ಮುಂಬೈನ ಒಂದು ಚಿಕ್ಕಕೋಣೆಯಲ್ಲಿ ವಾಸಿಸುತ್ತಿದ್ದರು ಎಂಬುದು ಕೆಲವೇ ಜನರಿಗೆ ತಿಳಿದಿದೆ.. ನಟನ ತಂದೆ ಜ್ಯೋತಿಷಿಯಾಗಿದ್ದರು. ಆದ್ದರಿಂದ ಅವರ ಬಾಲ್ಯವು ಬಡತನದಲ್ಲಿ ಕಳೆದಿದೆ..


10 ವರ್ಷದವರಾಗಿದ್ದ ಜಾಕಿ ಅವರಿಗೆ ಶೀಕ್ಷಣ ಕೊಡಿಸಲು ಆತನ ತಾಯಿ ಪಾತ್ರೆಗಳನ್ನು ತೊಳೆಯಲು ಹೋಗುವುದು ಮತ್ತು ಮನೆಯಲ್ಲಿ ಸೀರೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಇವರುರ 10 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ತನ್ನ ತಾಯಿಗೆ ಸಹಾಯವಾಗುವಂತೆ ಕೆಲಸ ಮಾಡಲು ಪ್ರಾರಂಭಿಸಿದರು.. ಮನೆಯ ಖರ್ಚನ್ನು ನಿಭಾಯಿಸಲು, ಜಾಕಿ ಪೋಸ್ಟರ್ ಅಂಟಿಸುವುದು, ಥಿಯೇಟರ್ ಹೊರಗೆ ಕಡಲೆಕಾಯಿ ಮಾರಾಟ ಮತ್ತು ಸಿಗರೇಟ್ ಮಾರಾಟದಂತಹ ಅನೇಕ ಕೆಲಸಗಳನ್ನು ಮಾಡುತ್ತಿದ್ದರಂತೆ.. 


ಇದನ್ನೂ ಓದಿ-Rajinikanth Salary: ಅತಿಥಿ ಪಾತ್ರಕ್ಕೂ ಕೋಟಿಗಟ್ಟಲೆ.. ಲಾಲ್ ಸಲಾಂಗಾಗಿ ರಜನಿಕಾಂತ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?


ನಂತರ ಒಂದು ದಿನ ಜಾಕಿ ಬಸ್ ನಿಲ್ದಾಣದಲ್ಲಿ ನಿಂತಾಗ, ಸೂಪರ್ಸ್ಟಾರ್ ಆಗುವ ಪಯಣ ಪ್ರಾರಂಭವಾಯಿತು. ಏಕೆಂದರೆ ಅಲ್ಲಿ ನಟ ಜಾಹೀರಾತು ಏಜೆನ್ಸಿಯ ವ್ಯಕ್ತಿಯನ್ನು ಭೇಟಿಯಾಗಿ.. ಮಾಡೆಲಿಂಗ್ ಅವಕಾಶ ಪಡೆದುಕೊಂಡರಂತೆ.. ನಟನಿಗೆ ಮೊದಲ ಫೋಟೋಶೂಟ್‌ಗೆ 7 ಸಾವಿರ ರೂಪಾಯಿ ಸಿಕ್ಕಿತು ನಂತರ ಜಾಕಿ ಅದನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡರು.


ಮುಂದೆ ಜಾಕಿ ಅವರಿಗೆ ಸುಭಾಯ್ ಘಾಯ್ ಅವರ ‘ಹೀರೋ’ ಚಿತ್ರದಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಾಗ ತಮ್ಮ ನಟನೆ ಮತ್ತು ಆಕರ್ಷಕ ಶೈಲಿಯಿಂದ ಅವರು ಇಡೀ ದೇಶದ ಜನತೆಯ ಹೃದಯದಲ್ಲಿ ನೆಲೆಸಿದರು.. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ. ಇಂದು ಜಾಕಿ ತನ್ನ ಶ್ರಮದ ಆಧಾರದ ಮೇಲೆ ಸುಮಾರು 212 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯನಾಗಿದ್ದಾನೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.