ಬಾಲಿವುಡ್ ಖ್ಯಾತ ನಟ ಪಂಕಜ್ ತ್ರಿಪಾಠಿಯವರ ತಂದೆ ನಿಧನ..!
ನಟ ಪಂಕಜ್ ತ್ರಿಪಾಠಿ ಅವರ ತಂದೆ ಪಂಡಿತ್ ಬನಾರಸ್ ತಿವಾರಿ ಅವರು ಸೋಮವಾರ, ಆಗಸ್ಟ್ 21, 2023 ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಬನಾರಸ್ ತಿವಾರಿ ಅವರು ಬಿಹಾರದ ಬಲ್ಸಂಡ್ ಗ್ರಾಮ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
Pankaj Tripathi father death : ನಟ ಪಂಕಜ್ ತ್ರಿಪಾಠಿ ಅವರ ತಂದೆ ಪಂಡಿತ್ ಬನಾರಸ್ ತಿವಾರಿ ಅವರು ಸೋಮವಾರ, ಆಗಸ್ಟ್ 21, 2023 ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಬನಾರಸ್ ತಿವಾರಿ ಅವರು ಬಿಹಾರದ ಬಲ್ಸಂಡ್ ಗ್ರಾಮ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ನಟ ಪಂಕಜ್ ತ್ರಿಪಾಠಿ ಅವರ ತಂದೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪಂಕಜ್ ಅವರ ಪೋಷಕರು ಬಿಹಾರದಲ್ಲಿ ವಾಸಿಸುತ್ತಿದ್ದರೆ, ನಟ ಮುಂಬೈನಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದಾರೆ. ತಂದೆಯ ನಿಧನದ ಸುದ್ದಿ ತಿಳಿದ ಪಂಕಜ್ ತ್ರಿಪಾಠಿ ಅವರು ಬಿಹಾರದ ಗೋಪಾಲ್‌ಗಂಜ್ ಪ್ರದೇಶದಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ: ಟೋಬಿಗೆ ಸೆನ್ಸಾರ್ ಮಂಡಳಿಯಿಂದ ಸಿಕ್ಕ ಸರ್ಟಿಫಿಕೇಟ್ ಯಾವುದು?
ಈ ಕುರಿತು ತ್ರಿಪಾಠಿ ಕುಟುಂಬ ಅಧಿಕೃತ ಹೇಳಿಕೆ ನೀಡಿದ್ದು, ಪಂಕಜ್ ತ್ರಿಪಾಠಿ ಅವರ ತಂದೆ ಪಂಡಿತ್ ಬನಾರಸ್ ತಿವಾರಿ ಅವರು ನಿಧನರಾಗಿದ್ದಾರೆ. ಅವರು 99 ವರ್ಷಗಳ ಆರೋಗ್ಯಕರ ಜೀವನವನ್ನು ನಡೆಸಿದರು. ಅವರ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. ಪ್ರಸ್ತುತ ಪಂಕಜ್ ತ್ರಿಪಾಠಿ ಗೋಪಾಲ್‌ಗಂಜ್‌ನಲ್ಲಿರುವ ತಮ್ಮ ಹಳ್ಳಿಗೆ ಹೋಗುತ್ತಿದ್ದಾರೆ.
ಪಂಕಜ್ ತ್ರಿಪಾಠಿ ಅವರು ಹುಟ್ಟಿದ ನಂತರ ಅವರ ಪೋಷಕರು ಆರಂಭದಲ್ಲಿ ಪಂಕಜ್ ತಿವಾರಿ ಎಂದು ಹೆಸರಿಸಿದರು. ಆದರೂ ಅವರು ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಅವರ ಹೆಸರನ್ನು ಬದಲಾಯಿಸಲಾಗಿತ್ತು. ಈ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ನಟ ದುಲ್ಕರ್ ಸಲ್ಮಾನ್ ʼಖಾಸಗಿ ಅಂಗʼಗಳನ್ನು ಮುಟ್ಟಿದ ಯುವತಿ..! ನಟಿನಾ ಅಥವಾ ಸಾಮಾನ್ಯ ಹುಡುಗಿನಾ..?
ಪಂಕಜ್ ತ್ರಿಪಾಠಿ ಅವರು ಇತ್ತೀಚೆಗೆ ಬಿಡುಗಡೆಯಾದ 'OMG 2' ಚಿತ್ರದಲ್ಲಿ ನಟಿಸಿದ್ದಾರೆ. 'OMG 2' ಎರಡು ವಾರಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಕೆ ಕಂಡಿದೆ. ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಅಕ್ಷಯ್ ಕುಮಾರ್ ವಕೀಲರಾಗಿ ಮತ್ತು ಶಿವನ ಸಂದೇಶವಾಹಕರಾಗಿ ನಟಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.