ಐಶ್ವರ್ಯಾ ರೈ.. ಸಂಗೀತಾ ಬಿಜಲಾನಿ ಅಲ್ಲ.. `ಈ` ಸುಂದರಿ ಸಲ್ಮಾನ್ ಖಾನ್ ಫಸ್ಟ್ ಲವ್! ಸಲ್ಲು ಆಕೆಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ರಂತೆ..
Salman Khan First Love: ಐಶ್ವರ್ಯ ರೈ.. ಸಂಗೀತಾ ಬಿಜಲಾನಿ ಇವರ್ಯಾರು ಸಲ್ಮಾನ್ ಖಾನ್ ಫಸ್ಟ್ ಲವ್ ಅಲ್ಲ.. ಸಲ್ಲು ಬಾಯ್ ಮೊದಲು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು ಈ ಸುಂದರಿಯನ್ನ.. ಹಾಗಾದ್ರೆ ಯಾರಾಕೆ? ಈ ಸ್ಟೋರಿ ಓದಿ..
Happy Birthday Salman Khan: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಂದು ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ವಯಸ್ಸಿನಲ್ಲೂ ಹುಡುಗಿಯರು ಸಲ್ಲು ಬಾಯ್ ಅಂದ್ರೆ ಬಾಯಿ ಬಾಯಿ ಬಿಡ್ತಾರೆ.. ಆದರೆ, ಪ್ರೀತಿಯ ವಿಚಾರದಲ್ಲಿ ಸ್ವತಃ ಸಲ್ಮಾನ್ ದುರಾದೃಷ್ಟ ಎಂದು ಸಾಬೀತುಪಡಿಸಿದ್ದಾರೆ.. ಅದು ಕೂಡ ಒಂದಲ್ಲ ಎರಡಲ್ಲ ಹಲವು ಬಾರಿ. ಇನ್ನು ಸಲ್ಮಾನ್ ಪ್ರೇಮ ಪ್ರಕರಣಗಳ ಬಗ್ಗೆ ಹೇಳುವುದಾದರೆ ಎಲ್ಲರಿಗೂ ಮೊದಲು ಬರುವ ಹೆಸರು ಐಶ್ವರ್ಯಾ ರೈ. ಸಲ್ಮಾನ್ ಮತ್ತು ಐಶ್ವರ್ಯಾ ಅವರ ಲವ್ ಸ್ಟೋರಿ ಬಾಲಿವುಡ್ ನಲ್ಲಿ ಹೆಚ್ಚು ಚರ್ಚೆಯಾಗಿತ್ತು.
ಸಲ್ಮಾನ್ ವಿರುದ್ಧ ಗಂಭೀರ ಆರೋಪ ಮಾಡಿದ ನಂತರ ಐಶ್ವರ್ಯಾ ರೈ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದರು. ಇದಾದ ನಂತರ ಭಾಯಿಜಾನ್ ಜೀವನದಲ್ಲಿ ಅನೇಕ ಹುಡುಗಿಯರು ಬಂದರು, ಆದರೆ ಈ ಸಂಬಂಧವು ಮದುವೆಯ ವರೆಗೂ ಹೋಗಲಿಲ್ಲ.. ಇಂದಿಗೂ, ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಇರುವ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ.. ಆದರೆ ಐಶ್ವರ್ಯಾ ರೈ ಅವರ ಮೊದಲ ಪ್ರೀತಿ ಅಲ್ಲ ಎಂದು ನಿಮಗೆ ತಿಳಿದಿದೆಯೇ? ಸಂಗೀತಾ ಬಿಜಲಾನಿ ಅವರ ಮೊದಲ ಗೆಳತಿ ಎಂದು ನೀವು ನಂಬಿದರೆ, ಇದು ಕೂಡ ತಪ್ಪು ಉತ್ತರವಾಗಿದೆ. ಹಾಗಾದರೆ ಸಲ್ಮಾನ್ ಖಾನ್ ಅವರ ಫಸ್ಟ್ ಲವ್ ಯಾರು ಎಂದು ತಿಳಿಯೋಣ.
ಇದನ್ನೂ ಓದಿ-2 ಬಾರಿ ಪ್ರಧಾನಿಯಾದರೂ ಒಮ್ಮೆಯೂ ಲೋಕಸಭೆ ಚುನಾವಣೆ ಗೆಲ್ಲದ ಡಾ. ಮನಮೋಹನ್ ಸಿಂಗ್!
ಬಾಲಿವುಡ್ ಗೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಲ್ಮಾನ್ ಖಾನ್ ಗೆಳತಿಯರ ಪಟ್ಟಿ ದೊಡ್ಡದಿದೆ. ಇದರಲ್ಲಿ ಸಂಗೀತಾ ಬಿಜಲಾನಿ, ಸೋಮಿ ಅಲಿ, ಐಶ್ವರ್ಯ ರೈ, ಕತ್ರಿನಾ ಕೈಫ್, ಯೂಲಿಯಾ ವಂತೂರ್ ಹೆಸರುಗಳು ಸೇರಿವೆ. ಆದರೆ ಅವುಗಳಲ್ಲಿ ಯಾವುದೂ ಸಲ್ಮಾನ್‌ನ ಮೊದಲ ಪ್ರೀತಿ ಅಲ್ಲ.. ಅವರ ಮೊದಲ ಗೆಳತಿಯ ಹೆಸರು ಶಾಹೀನ್ ಜಾಫ್ರಿ. ಇವರು ಹಿರಿಯ ನಟ ಅಶೋಕ್ ಕುಮಾರ್ ಅವರ ಮೊಮ್ಮಗಳು ಎಂದು ಹೇಳಲಾಗುತ್ತದೆ. ಅಲ್ಲದೇ ಶಾಹೀನ್ ಕಿಯಾರಾ ಅಡ್ವಾಣಿ ಅವರ ತಾಯಿಯ ಮಲತಂಗಿ ಎನ್ನಲಾಗಿದೆ..
ಸಲ್ಮಾನ್ ಖಾನ್ ಮತ್ತು ಶಾಹೀನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಭೇಟಿಯಾಗಿದ್ದರು. ಇಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಈ ಮಧ್ಯೆ ಇಬ್ಬರೂ ಸ್ನೇಹಿತರಾಗಿ ಪರಸ್ಪರ ಹತ್ತಿರವಾದರು. ಸಲ್ಮಾನ್ ಕೂಡ ಕಾಲೇಜಿನ ಹೊರಗೆ ಶಾಹೀನ್‌ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದರಂತೆ.. ಹೀಗೆ ಎಲ್ಲವೂ ಚೆನ್ನಾಗಿರುವಾಗಲೇ ಕೆಲವು ಭಿನ್ನಾಬಿಪ್ರಯಾಗಳು ತಲೆದೂರಿ ಸುಮಾರು ಮೂರು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು. ಸಲ್ಮಾನ್ ಜೀವನಕ್ಕೆ ಮತ್ತೊಬ್ಬ ಸುಂದರಿ ಸಂಗೀತಾ ಬಿಜಲಾನಿ ಎಂಟ್ರಿಕೊಟ್ಟ ನಂತರ ಅವರು ಬೇರ್ಪಟ್ಟರು ಎಂದು ವರದಿಯಾಗಿದೆ..
ಇದನ್ನೂ ಓದಿ-ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 5 ದೊಡ್ಡ ನಿರ್ಧಾರಗಳನ್ನು ದೇಶವು ಎಂದಿಗೂ ಮರೆಯುವುದಿಲ್ಲ!
ಸಂಗೀತಾ ಬಿಜಲಾನಿ ಶಾಹೀನ್ ಮತ್ತು ಸಲ್ಮಾನ್ ಸಂಬಂಧದಲ್ಲಿ ಬಿರುಕು ಮೂಡಿಸಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಈ ಘಟನೆ ನಡೆದಿದ್ದು, 1988 ರ ಸುಮಾರಿಗೆ ಅವರು ಸಂಗೀತಾ ಬಿಜಲಾನಿ ಅವರನ್ನು ಭೇಟಿಯಾದರು. ಆ ಸಮಯದಲ್ಲಿ, ಇಬ್ಬರೂ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.. ಆಗ ಬೆಳೆದ ಸ್ನೇಹ ಪದೇ ಪದೇ ಮೀಟ್ ಮಾಡುವ ಹಂತಕ್ಕೆ ಬಂದು ಸಲ್ಮಾನ್ ಮತ್ತು ಸಂಗೀತಾ ಅವರ ಸಂಬಂಧದ ಬಗ್ಗೆ ಶಾಹಿನ್‌ಗೆ ತಿಳಿದು ಅವರೇ ದೂರವಾಗಿದ್ದರಂತೆ...
ಶಾಹೀನ್ ಸಲ್ಮಾನ್‌ನನ್ನು ತುಂಬಾ ಪ್ರೀತಿಸುತ್ತಿದ್ದರಂತೆ.. ಸಂಗೀತ ಬಜಲಾನಿ ಅವರನ್ನು ಬಿಟ್ಟರೇ ಸಲ್ಮಾನ್ ಖಾನ್ ಅವರನ್ನು ಕ್ಷಮಿಸಿ ಮತ್ತೆ ಒಪ್ಪಿಕೊಳ್ಳುತ್ತೇನೆ ಎಂದಿದ್ದರಂತೆ.. ಆದರೆ, ಸಲ್ಮಾನ್ ಹಾಗೆ ಮಾಡದೆ ಸಂಗೀತಾ ಜೊತೆಗಿನ ಸಂಬಂಧವನ್ನು ಮುಂದುವರೆಸಿದರು.. ಸಲ್ಮಾನ್ ಹಾಗೂ ಸಂಗೀತಾ ಬಿಜಲಾನಿ ಸಂಬಂಧ ಮದುವೆಗೂ ತಲುಪಿತ್ತು. ಅವರ ಮದುವೆ ಕಾರ್ಡ್‌ಗಳನ್ನೂ ಸಿದ್ಧಪಡಿಸಲಾಗಿತ್ತು. ಆದರೆ ಮದುವೆಯ ದಿನಾಂಕ ಬರುವ ಹೊತ್ತಿಗೆ ಕೆಲವು ಭಿನ್ನಾಬಿಪ್ರಾಯಗಳಿಂದ ಇಬ್ಬರ ಸಂಬಂಧ ಮುರಿದುಬಿತ್ತು. ವರದಿಗಳ ಪ್ರಕಾರ, ಸಲ್ಮಾನ್ ಸಂಗೀತಾ ಅವರನ್ನು ಮದುವೆಯಾಗುವ ಸಂದರ್ಭದಲ್ಲಿ ಪಾಕಿಸ್ತಾನಿ ನಟಿ ಸೋಮಿ ಅಲಿಯೊಂದಿಗೆ ಸಂಬಂಧ ಹೊಂದಿದ್ದರು. ಸಲ್ಮಾನ್ ಸಂಗೀತಾ ಅವರಿಗೂ ಮೋಸ ಮಾಡಿದ್ದು, ಹೀಗಾಗಿ ಅವರ ಸಂಬಂಧ ಕೊನೆಗೊಂಡಿತು ಎನ್ನಲಾಗಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.