ಅಂಬಾನಿ ಮದುವೆಗೆ 160 ವರ್ಷಗಳ ಹಿಂದಿನ ಸೀರೆ ಉಟ್ಟು ಬಂದ ಆಲಿಯಾ..! ಈ ಸೀರೆಯ ವಿಶೇಷತೆ ಏನ್ ಗೊತ್ತೆ..?
Alia Bhatt saree : ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ 160 ವರ್ಷ ಹಳೆಯದಾದ ಆಶಾವಲಿ ಸೀರೆಯನ್ನು ಧರಿಸಿದ್ದ ಆಲಿಯಾ ಭಟ್ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದರು. ಈ ಸೀರೆಯ ಬಗ್ಗೆ ತಿಳಿದ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.. ಅಷ್ಟಕ್ಕೂ ಈ ಸೀರೆಯ ವಿಶೇಷತೆ ಏನು..? ಅಂತ ನೋಡೋಣ..
Alia Bhatt in Ambani son marriage : ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.. ವಿಶೇಷವಾಗಿ ದೇಶ-ವಿದೇಶಗಳ ಪ್ರಮುಖರು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಅನೇಕ ಸಿನಿ ಗಣ್ಯರು ಸಹ ಈ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಬಾಲಿವುಡ್‌ನ ಅನೇಕ ಜೋಡಿಗಳು ಈ ಸಂಭ್ರಮಾಚರಣೆಯಲ್ಲಿ ಸದ್ದು ಮಾಡಿದರೆ, ದಕ್ಷಿಣದ ಅನೇಕ ಸ್ಟಾರ್‌ಗಳು ತಮ್ಮ ಕುಟುಂಬದೊಂದಿಗೆ ಈ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಪತಿ ವಿಘ್ನೇಶ್ ಶಿವನ್ ಜೊತೆ ನಯನತಾರಾ, ಪತ್ನಿ ಉಪಾಸನಾ ಜೊತೆ ರಾಮ್ ಚರಣ್, ಪತ್ನಿ ನಮ್ರತಾ ಜೊತೆ ಮಹೇಶ್ ಬಾಬು, ಮಗಳು ಸಿತಾರಾ ಕೂಡ ಸೌತ್ ನಿಂದ ಬಂದು ಸದ್ದು ಮಾಡುತ್ತಿದ್ದರು. ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಸ್ಟೆಪ್ಸ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಇದನ್ನೂ ಓದಿ:43ರ ವಯಸ್ಸಲ್ಲೂ ಸ್ವೀಟ್ 16 ಸೌಂದರ್ಯ..! ಅದೇಷ್ಟು ಹುಡ್ಗಿರು ಈಕೆಯನ್ನ ನೋಡಿ ಹೊಟ್ಟೆ ಉರ್ಕೋತಾರೊ..
ಈ ಪ್ರತಿಯೊಂದು ಆಚರಣೆಗಳು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಆದರೆ ಇದೀಗ ಬಾಲಿವುಡ್ ಸುಂದರಿ ಆಲಿಯಾ ಭಟ್ ಅವರ ಬಗ್ಗೆ ಎಲ್ಲರೂ ಮಾತನಾಡುವಂತೆ ಮಾಡಿದ್ದಾರೆ. ಆಲಿಯಾ ಯಾವಾಗಲೂ ಸ್ವಲ್ಪ ವಿಭಿನ್ನವಾಗಿ ಕಾಣುತ್ತಾಳೆ. ಆದರೆ ಈ ಬಾರಿ 160 ವರ್ಷಗಳ ಹಿಂದಿನ ಆಶಾಾವಳಿ ಸೀರೆ ಉಟ್ಟು ಎಲ್ಲರ ಗಮನ ಸೆಳೆದಿದ್ದಲ್ಲದೆ, ತಾನು ಉಟ್ಟಿದ್ದ ಸೀರೆಯ ಬಗ್ಗೆ ಎಲ್ಲರೂ ಮಾತನಾಡುವಂತೆ ಮಾಡಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಆಲಿಯಾ ಭಟ್.. 160 ವರ್ಷಗಳ ಹಿಂದೆ ಗುಜರಾತ್ ನಲ್ಲಿ ನೇಯ್ದ ಆಶಾವಲಿ ಸೀರೆ.. ಶೇ.99 ಶುದ್ಧ ಬೆಳ್ಳಿ, 6 ಗ್ರಾಂ ಚಿನ್ನ, ಶುದ್ಧ ರೇಷ್ಮೆಯಿಂದ ನೇಯ್ದ ನೈಜ ಲೇಸ್ ಬಾರ್ಡರ್ ಇದರ ವಿಶೇಷತೆಗಳು. ಡಿಸೈನರ್ ಮನೀಶ್ ಮಲ್ಹೋತ್ರಾ ಸಂಗ್ರಹದ ಈ ಸೀರೆ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ.
ಇದನ್ನೂ ಓದಿ: ಇಶಾ ಅಂಬಾನಿ ಲೆಹಂಗದ ಮೇಲೆ ಸಂಸ್ಕೃತ ಶ್ಲೋಕ..ಇದರ ಅರ್ಥವೇನು ಗೊತ್ತಾ..?
ಸದ್ಯ ಈ ಸೀರೆ ಆಲಿಯಾ ಮೈಮೇಲೆ ರಾರಾಜಿಸುತ್ತಿದ್ದು, ಎಲ್ಲೆಡೆ ಸುದ್ದಿಯಾಗಿದೆ. ಈ ಹಳೆಯ ಸೀರೆಗೆ ಆಧುನಿಕ ಸ್ಪರ್ಶವನ್ನು ನೀಡುವ ಸ್ಟ್ರಾಪ್‌ಲೆಸ್ ಬಸ್ಟಿಯರ್ ಕುಪ್ಪಸವನ್ನು ಧರಿಸಿದ್ದ ಆಲಿಯಾ, ಸಮಾರಂಭದ ಸೆಂಟರ್ ಅಟ್ರ್ಯಾಕ್ಷನ್ ಆಗಿದ್ದರು.. ಈ ಸೀರೆಯ ಬೆಲೆ ಅಕ್ಷರಶಃ 3 ಕೋಟಿ ರೂ. ಎನ್ನಲಾಗಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.