Kangana Ranaut Real Life Story: ಸಿನಿರಂಗದಲ್ಲಿ ನಟಿಸಲು ಇಷ್ಟವಿಲ್ಲದೇ ಓಡಿ ಹೋದವರನ್ನು ನೋಡಿರಬಹುದು ಆದರೆ ಸಿನಿಮಾದಲ್ಲೇ ನಟಿಸಬೇಕು ಎನ್ನುವ ಆಸೆ ಹೊತ್ತು ಮನೆಯನ್ನೇ ತೊರೆದವರ ಕಥೆ ಕೇಳಿದ್ದಿರಾ. ಇಂದು ನಾವು ನಿಮಗೆ ಹೇಳಲು ಹೊರಟಿರುವ ನಟಿ ಓದನ್ನು ಅರ್ಧಕ್ಕೆ ಬಿಟ್ಟು 15ನೇ ವಯಸ್ಸಿಗೆ ಮನೆ ಬಿಟ್ಟು ಓಡಿಹೋಗಿ ನೆಲೆಯೂರಲು ಜಾಗವಿಲ್ಲದೆ ಪ್ಲಾಟ್‌ಫಾರ್ಮ್‌ನಲ್ಲಿ ಬದುಕಿದ ಹುಡುಗಿ ಈಗ ಲೇಡಿ ಸೂಪರ್‌ಸ್ಟಾರ್.


COMMERCIAL BREAK
SCROLL TO CONTINUE READING

ಆಕೆ ಬೇರೆ ಯಾರೂ ಅಲ್ಲ ನಟಿ ಕಂಗನಾ ರಣಾವತ್. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಾಂಬಿಯಾ ಎಂಬ ಪಟ್ಟಣದಲ್ಲಿ ಜನಿಸಿದ ಕಂಗನಾ ರಜಪೂತ ಕುಟುಂಬಕ್ಕೆ ಸೇರಿದವರು. ತಾಯಿ ಆಶಾ ಶಾಲಾ ಶಿಕ್ಷಕಿ ಮತ್ತು ತಂದೆ ಅಮರದೀಪ್ ಉದ್ಯಮಿ. ಕಂಗನಾಗೆ ಒಬ್ಬ ಅಕ್ಕ ಮತ್ತು ಕಿರಿಯ ಸಹೋದರ ಕೂಡ ಇದ್ದಾರೆ. ಕಂಗನಾಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ನಟಿಸುವ ಆಸೆ. ಆದರೆ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ-ಅಕ್ಷಯ್‌ ಕುಮಾರ್‌ ಅಲ್ಲ.. ಈ ನಟನಿಗಾಗಿ ಪ್ರಾಣ ಕೊಡಲೂ ಸಿದ್ಧಳಂತೆ ಸ್ಟಾರ್‌ ಬ್ಯೂಟಿ ರವೀನಾ ಟಂಡನ್!


ಇದರಿಂದ ಕಂಗನಾ ಮನೆ ಬಿಟ್ಟು ತನ್ನ 15ನೇ ವಯಸ್ಸಿನಲ್ಲಿ ಮುಂಬೈಗೆ ಓಡಿ ಹೋಗಿದ್ದರಂತೆ... ಅಲ್ಲಿ ತಂಗಲು ಜಾಗ ಸಿಗದೆ ಫ್ಲಾಟ್ ಫಾರಂನಲ್ಲಿ ಮಲಗಿ ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ನಂತರ 19ನೇ ವಯಸ್ಸಿನಲ್ಲಿ ಕಂಗನಾಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅನುರಾಜ್ ಬಸು ನಿರ್ದೇಶನದ ಗ್ಯಾಂಗ್‌ಸ್ಟರ್ ಚಿತ್ರದ ಮೂಲಕ ಕಂಗನಾ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿನ ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು.


ಅದರ ನಂತರ, ಪ್ಯಾಶನ್ ಚಿತ್ರವು ಬಾಲಿವುಡ್‌ನಲ್ಲಿ ಕಂಗನಾಗೆ ದೊಡ್ಡ ಬ್ರೇಕ್‌ ನೀಡಿತು.. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದರು. ನಂತರ, ಕಂಗನಾ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿ, ಕ್ವೀನ್, ಮಣಿಕರ್ಣಿಕಾ ಮತ್ತು ತನು ವೆಟ್ಸ್ ಮನು ಮುಂತಾದ ಚಿತ್ರಗಳು ಆಕೆಗೆ ಸ್ಟಾರ್ ಸ್ಥಾನಮಾನವನ್ನು ತಂದುಕೊಟ್ಟವು.. 


ಇದನ್ನೂ ಓದಿ-ವಸಿಷ್ಠ ಸಿಂಹ ಅಭಿನಯದ "Love ಲಿ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ : ಜೂನ್ 14 ರಂದು ಚಿತ್ರ ತೆರೆಗೆ


ಅದೂ ಅಲ್ಲದೆ ಕಂಗನಾ ಅಭಿನಯದ ತನು ವೆಡ್ಸ್ ಮನು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 100 ಕೋಟಿ ಗಳಿಸಿದ ಮೊದಲ ನಾಯಕಿ ಪ್ರಧಾನ ಚಿತ್ರವಾಗಿತ್ತು. ಚಿತ್ರದ ಮೂಲಕ ಬಾಲಿವುಡ್‌ನ ಲೇಡಿ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು.  


ನಟಿಯಾಗಿ ಮಾತ್ರವಲ್ಲದೆ ನಿರ್ದೇಶಕಿಯಾಗಿಯೂ ಮಿಂಚಿದ್ದ ಕಂಗನಾ ಮಾಸ್ ಹಿಟ್ ಚಿತ್ರ ಮಣಿಕರ್ಣಿಕಾ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಿದರು. ಸದ್ಯ ಅವರ ನಿರ್ದೇಶನದಲ್ಲಿ ಎಮರ್ಜೆನ್ಸಿ ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ಕಂಗನಾ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಕೀಯ ಹಾಗೂ ಸಿನಿಮಾ ರಂಗದಲ್ಲೂ ಕ್ಷೇತ್ರ ಕಂಡುಕೊಂಡಿರುವ ಕಂಗನಾ ಇತ್ತೀಚೆಗಷ್ಟೇ ಮುಗಿದ ಸಂಸತ್ ಚುನಾವಣೆಯಲ್ಲಿ ತಮ್ಮ ತವರು ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದು ಗಮನಾರ್ಹ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ