Kajol viral video : ದೇಶದೆಲ್ಲೆಡೆ ದುರ್ಗಾ ಪೂಜೆಯನ್ನು ಬಹಳ ವೈಭವಯುತವಾಗಿ ಆಚರಿಸಲಾಗುತ್ತಿದೆ. ಒಂಬತ್ತು ದಿನಗಳ ಕಾಲ ಒಂಬತ್ತು ಅವತಾರಗಳಲ್ಲಿ ದೇವಿ ಆರಾಧನೆ ನಡೆಯುತ್ತಿದೆ.. ಈ ಪೈಕಿ ಬಾಲಿವುಡ್‌ನ ಕೆಲವು ನಟಿಯರು ಸಹ ದುರ್ಗಾಪೂಜೆ ಮಾಡುತ್ತಿದ್ದಾರೆ.. ಮುಂಬೈನ ಸಾಂತಾಕ್ರೂಜ್ ಪ್ರದೇಶದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ನಟಿ ಕಾಜೋಲ್ ಭಾಗವಹಿಸಿದ್ದರು. 


COMMERCIAL BREAK
SCROLL TO CONTINUE READING

ಮುಂಬೈನ ಸಾಂತಾಕ್ರೂಜ್‌ನಲ್ಲಿ ನಡೆದ ಉತ್ತರ ಬಾಂಬೆ ಸರ್ಬೋಜನಿನ್ ದುರ್ಗಾ ಪೂಜೆಯಲ್ಲಿ ನಟಿ ಕಾಜೋಲ್, ತಮ್ಮ ಸಹೋದರಿ ತನಿಶಾ ಮುಖರ್ಜಿ ಮತ್ತು ನಟಿ ಆಲಿಯಾ ಭಟ್ ಜೊತೆ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಇದ್ದಕ್ಕಿದ್ದಂತೆ ಕೋಪಗೊಂಡ ಕಾಜೋಲ್ ನೆರದಿದ್ದ ಜನರ ಮೇಲೆ ಕೋಪಗೊಂಡರು.. ಅಮ್ಮನ ಮೂರ್ತಿ ಪ್ರತಿಷ್ಠಾಪಿಸಿರುವ ಮಂಟಪಕ್ಕೆ ಕೆಲವರು ಪಾದರಕ್ಷೆ, ಚಪ್ಪಲಿ ಹಾಕಿಕೊಂಡು ಬರುತ್ತಿರುವುದನ್ನು ಕಂಡು ಕಾಜೋಲ್ ಬುದ್ದಿವಾದ ಹೇಳಿದ್ದಾರೆ..


ಇದನ್ನೂ ಓದಿ:ಹೆಚ್ಚಿನ ಮಹಿಳೆಯರಿಗೆ ಲೈಂಗಿಕ ಸುಖ ಹೊಂದಲು ಗಂಡಿನ ಅವಶ್ಯಕತೆ ಇಲ್ಲ.! ಬಹಿರಂಗವಾಯ್ತು 2025ರ ಭವಿಷ್ಯ


ಮೈಕ್ ಹಿಡಿದು ನಿಂತ ಕಾಜೋಲ್‌, ದಯಮಾಡಿ ಶೂ, ಚಪ್ಪಲಿ ಹಾಕಿಕೊಂಡು ಬರಬೇಡಿ ಎಂದು ಮನವಿ ಮಾಡಿದರು. ಇದಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ.. 


ಬಾಲಿವುಡ್‌ ನಟಿ ಕಾಜೋಲ್‌ ಕುಟುಂಬ ಸಮೇತ ಪ್ರತಿ ವರ್ಷ ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷವೂ ಕುಟುಂಬ ಸಮೇತ ದುರ್ಗಾ ಮಾತೆಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆಗ ಈ ಆಘಾತಕಾರಿ ಘಟನೆ ನಡೆದಿದೆ.. ನಟಿಯ ಕಾಳಜಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.