Mududida elegalu movie: ʻಮುದುಡಿದ ಎಲೆಗಳುʼ ಚಿತ್ರದಲ್ಲಿ ಬಾಲಿವುಡ್ ಹಾಗೂ ಟಾಲಿವುಡ್ ನಟಿ ಅಪ್ಸರ ರಾಣಿ. ‌ಹಿಂದಿ ಹಾಗೂ ತೆಲುಗು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಹಾಗೂ ರಾಮ್ ಗೋಪಾಲ್ ವರ್ಮ ಅವರ ʻಡೇಂಜರಸ್ʼ ಚಿತ್ರದ ಮೂಲಕ ಜನಪ್ರಿಯರಾಗಿರುವ ನಟಿ ಅಪ್ಸರ ರಾಣಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಎಂ.ಶಂಕರ್ ನಿರ್ದೇಶನ ಹಾಗೂ ನಿರ್ಮಾಣದ ʻಮುದುಡಿದ ಎಲೆಗಳುʼ ಚಿತ್ರದ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಸರ ರಾಣಿ ಅವರು ಅಭಿನಯಿಸಿದ ಹಾಡಿನ ಚಿತ್ರೀಕರಣ ಇತ್ತೀಚಿಗೆ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು. 


COMMERCIAL BREAK
SCROLL TO CONTINUE READING

ದುಬಾರಿ ಕಾರೊಂದರಲ್ಲಿ ಕಾಲೇಜ್ ಗೆ ಕಾಲಿಟ್ಟ ಹುಡುಗಿಯ ಸೌಂದರ್ಯ  ಹಾಗೂ ಸ್ಟೈಲ್ ಗೆ  ಕಾಲೇಜು ಹುಡುಗರು ಮಾರು ಹೋಗುತ್ತಾರೆ. ಹೊಸದಾಗಿ ಕಾಲೇಜು ಸೇರಿರುವ ಹುಡುಗಿ ಇರಬಹುದು ಎಂದು ಹುಡುಗರು ಆಲೋಚಿಸುತ್ತಿದ್ದಾಗ, ಅವರು ಕಾಲೇಜು ಸೇರಲು ಬಂದಿರುವ ಹುಡುಗಿಯಲ್ಲ‌. ಕೆಮಿಸ್ಟ್ರಿ ಟೀಚರ್ ಅಂತ ಗೊತ್ತಾಗುತ್ತದೆ. ಇದನ್ನು ನಿರ್ದೇಶಕರು ಹಾಡಿನ ಮೂಲಕ ತೋರಿಸಿದ್ದಾರೆ. ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ ಈ ಹಾಡಿನಲ್ಲಿ ಅಪ್ಸರ ರಾಣಿ, ರಂಜಿತ್ ಕುಮಾರ್ ಹಾಗೂ ಪಂಕಜ್ ನಾರಾಯಣ್ ಅಭಿನಯಿಸಿದ್ದರು.


ಇದನ್ನೂ ಓದಿ: ದೇವಲೋಕದ ಅಪ್ಸರೆ ಅಮಿತಾಬ್‌ ಬಚ್ಚನ್‌ ಮೊಮ್ಮಗಳು.. ಆರಾಧ್ಯ ಅಲ್ಲ, ಐಶ್ವರ್ಯಾ ರೈ ಮೀರಿಸುವ ಈ ಅಂದಗಾತಿ ಯಾರು ಗೊತ್ತಾ?


ಮುದುಡಿದ ಎಲೆಗಳು ಚಿತ್ರಕ್ಕೆ  ಈಗಾಗಲೇ ಎಂಭತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ಭಾಗಗಳ ಚಿತ್ರೀಕರಣ ಮಾತ್ರ ಬಾಕಿಯದೆ. ಒಂದು ಹಾಡಿನ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಮತ್ತೊಂದು ಹಾಡು ತಜಿಕಿಸ್ತಾನದಲ್ಲಿ ಚಿತ್ರೀಕರಣಗೊಳ್ಳಲಿದೆ.


ರಿಯೋ ಪ್ರೊಡಕ್ಷನ್ ಫಿಲಂ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವ ಎಂ ಶಂಕರ್ ಅವರೆ ಮುದುಡಿದ ಎಲೆಗಳು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರಂಜನಿ ಈ ಚಿತ್ರದ ಸಹ ನಿರ್ಮಾಪಕಿ.  ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣವಿದೆ.


ರಂಜಿತ್ ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಪಂಕಜ್ ನಾರಾಯಣ್, ಪಾವನ ಗೌಡ, ನಿಕಿತಾ ಸ್ವಾಮಿ, ಸೂರ್ಯದರ್ಶನ್, ಪ್ರೀತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಪ್ಸರ ರಾಣಿ, ಹರ್ಷಿಕಾ ಪೂಣಚ್ಛ, ರಮೇಶ್ ಭಟ್, ಭವ್ಯ, ಶೋಭ್ ರಾಜ್, ಶಂಕರ್ ಅಶ್ವತ್ಥ್, ಪೂನಂ ಪಾಂಡೆ, ಪದ್ಮಾ ವಾಸಂತಿ, ಜೋಸೈಮನ್ ಮುಂತಾದವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: ‘ಜೀವನದಲ್ಲಿ ನಾನು ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’ : ಸುದೀಪ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.