ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಾಲಿವುಡ್ ನಟಿ ಆರ್ಯಾ ಬ್ಯಾನರ್ಜೀ
ದಿ ಡರ್ಟಿ ಪಿಕ್ಚರ್ ಸೇರಿದಂತೆ ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ನಟಿ ಆರ್ಯ ಬ್ಯಾನರ್ಜಿ ಅವರು ದಕ್ಷಿಣ ಕೊಲ್ಕತ್ತಾ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಆಕೆಯ ಮೂರನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಗಿಲು ತೆರೆದಾಗ ಮಲಗುವ ಕೋಣೆಯಲ್ಲಿ 33 ವರ್ಷದ ನಟಿಯ ಶವ ಪತ್ತೆಯಾಗಿದೆ.
ನವದೆಹಲಿ: ದಿ ಡರ್ಟಿ ಪಿಕ್ಚರ್ ಸೇರಿದಂತೆ ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ನಟಿ ಆರ್ಯ ಬ್ಯಾನರ್ಜಿ ಅವರು ದಕ್ಷಿಣ ಕೊಲ್ಕತ್ತಾ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಆಕೆಯ ಮೂರನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಗಿಲು ತೆರೆದಾಗ ಮಲಗುವ ಕೋಣೆಯಲ್ಲಿ 33 ವರ್ಷದ ನಟಿಯ ಶವ ಪತ್ತೆಯಾಗಿದೆ.
ಇದನ್ನೂ ಓದಿ: Drugs Case: ಸುಶಾಂತ್ ಸಿಂಗ್ ರಾಜಪುತ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದೆ ರಿಯಾ ಚಕ್ರವರ್ತಿ
ದಿವಂಗತ ಸಿಟಾರ್ ವಾದಕ ನಿಖಿಲ್ ಬಂಡ್ಯೋಪಾಧ್ಯಾಯ ಅವರ ಪುತ್ರಿ ಆರ್ಯ ಬ್ಯಾನರ್ಜಿ ಅವರು 'ಎಲ್.ಎಸ್.ಡಿ: ಲವ್ ಸೆಕ್ಸ್ ಔರ್ ಧೋಕಾ' (2010) ಮತ್ತು 'ದಿ ಡರ್ಟಿ ಪಿಕ್ಚರ್' (2011) ಜೊತೆಗೆ ಇತರ ಚಿತ್ರಗಳಲ್ಲಿ ನಟಿಸಿದ್ದಾರೆ.ಆರ್ಯ ಬ್ಯಾನರ್ಜಿ (ಬಲ) ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ 'ದಿ ಡರ್ಟಿ ಪಿಕ್ಚರ್' ನಲ್ಲಿ ನಟಿಸಿದ್ದಾರೆ.ಅವರು ಮುಂಬಯಿಯಲ್ಲಿ ಕೆಲವು ಮಾಡೆಲಿಂಗ್ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರು.
ಬೆಳಿಗ್ಗೆ ಬಾಗಿಲು ಗಂಟೆ ಮತ್ತು ಫೋನ್ ಕರೆಗಳಿಗೆ ಸ್ಪಂದಿಸದ ಕಾರಣ ಆಕೆಯ ಮನೆಯ ಸಹಾಯಕಿ ಮೆನೆಯ ನೆರೆಯವರಿಗೆ ತಿಳಿಸಿದರು.ತದನಂತರ ಅವರು ಪೋಲಿಸರಿಗೆ ಕರೆ ಮಾಡಿ ದೂರು ನೀಡಿದರು. ನಟಿ ಆರ್ಯಾ ಬ್ಯಾನರ್ಜೀ ಅವರು ಏಕಾಂಗಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.ಈಗ ಅವರ ದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವಿಧಿವಿಜ್ಞಾನ ತಂಡವು ಆಕೆಯ ಕೊಠಡಿಯಿಂದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.