Drugs Case: ಸುಶಾಂತ್ ಸಿಂಗ್ ರಾಜಪುತ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದೆ ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ NCB ಅಧಿಕಾರಿಗಳು ನಟಿ ರಿಯಾ ಚಕ್ರವರ್ತಿಯನ್ನು ಇಂದೂ ಕೂಡ ವಿಚಾರಣೆ ನಡೆಸಿದ್ದಾರೆ.

Last Updated : Sep 7, 2020, 07:38 PM IST
  • ಮಾದಕ ಪದಾರ್ಥ ಪ್ರಕರಣದಲ್ಲಿ ಇಂದೂ ಕೂಡ ಮುಂದುವರೆದ ರಿಯಾ ವಿಚಾರಣೆ.
  • ವಿಚಾರಣೆ ಬಳಿಕ ಬಾಂದ್ರಾ ಪೊಲೀಸ್ ಠಾಣೆ ತಲುಪಿದ ರಿಯಾ ಚಕ್ರವರ್ತಿ.
  • ಸುಶಾಂತ್ ಸಹೋದರಿ ಹಾಗೂ ದೆಹಲಿ ವೈದ್ಯರ ವಿರುದ್ಧ ಪ್ರಕರಣ ದಾಖಲು.
Drugs Case: ಸುಶಾಂತ್ ಸಿಂಗ್ ರಾಜಪುತ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದೆ ರಿಯಾ ಚಕ್ರವರ್ತಿ  title=
Courtesy:ANI

ಮುಂಬೈ: ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಯನ್ನು ಸತತ ಎರಡನೇ ದಿನ ಎನ್‌ಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೂ ಮೊದಲು ರಿಯಾ ಅವರನ್ನು ಭಾನುವಾರ ಪ್ರಶ್ನಿಸಲಾಗಿತ್ತು. ಇಂದು ನಟಿಯನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗಿತ್ತು. ನಾಳೆಯೂ ಕೂಡ ರಿಯಾ ವಿಚಾರಣೆ ನಡೆಯಲಿದೆ.

ಸುಮಾರು 8 ಗಂಟೆಗಳ ವಿಚಾರಣೆಯ ನಂತರ ರಿಯಾ ಎನ್‌ಸಿಬಿ ಕಚೇರಿಯಿಂದ ಹೊರಬಂದರು. ಇದಾದ ಬಳಿಕ  ರಿಯಾ ಚಕ್ರವರ್ತಿ ಬಾಂದ್ರಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಪ್ರಿಯಾಂಕಾ ಸಿಂಗ್ ಮತ್ತು ದೆಹಲಿಯ ವೈದ್ಯರೊಬ್ಬರು ಫ್ರಾಡ್ ಹಾಗೂ ನಕಲಿ ಔಷಧಿಯ ಪ್ರಿಸ್ಕ್ರಿಪ್ಶನ್ ನೀಡಿದ್ದಾರೆ ಎಂದು ಆರೋಪಿಸಿ ರಿಯಾ ಚಕ್ರವರ್ತಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .

ಇಂದಿನ ವಿಚಾರಣೆಗೆ ಮೊದಲು ಎನ್‌ಸಿಬಿ ವಿಚಾರಣೆಗೆ ಹಾಜರಾದಾಗ ರಿಯಾ,  ತನ್ನ ಕಿರಿಯ ಸಹೋದರ ಶೌವಿಕ್ ಚಕ್ರವರ್ತಿ (24), ರಜಪೂತ್ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ (33) ಮತ್ತು ರಜಪೂತ್ ಅವರ ವೈಯಕ್ತಿಕ ಸಿಬ್ಬಂದಿ ಸದಸ್ಯ ದೀಪೇಶ್ ಸಾವಂತ್ ಅವರನ್ನು ಎದುರಿಸಲು ಬಯಸಿದ್ದಾಗಿ ಎನ್‌ಸಿಬಿ ಹೇಳಿದೆ. ಅಷ್ಟೇ ಅಲ್ಲ ಇದರಿಂದ ಈ ಡ್ರಗ್ಸ್ ಪ್ರಕರಣದಲ್ಲಿ ಎಲ್ಲರ ಪಾತ್ರ ಸ್ಪಷ್ಟವಾಗಬಹುದು ಎಂದಿದ್ದಳು ಎಂಬುದು ಇಲ್ಲಿ ಉಲ್ಲೇಖನೀಯ.

Trending News