Bollywood News: ಸಿನಿಮಾದಲ್ಲಿ ಕಾಣಿಸಿಕೊಂಡು ಬೆಳಕು ಚೆಲ್ಲುವ ಕನಸು ಅನೇಕರಿಗೆ ಇರುತ್ತದೆ. ಅದಕ್ಕಾಗಿಯೇ ಅನೇಕ ಸಣ್ಣ ಹಳ್ಳಿಗಳು ಮತ್ತು ಪಟ್ಟಣಗಳ ಜನರು ಯಾವಾಗಲೂ ಮುಂಬೈಗೆ ಹೋಗುತ್ತಾರೆ. ಕೆಲವರ ಕನಸುಗಳು ನನಸಾದರೆ ಇನ್ನು ಕೆಲವರು ಕತ್ತಲೆಯಲ್ಲಿ ಮಿಂದೆದ್ದಿದ್ದಾರೆ. ಅವರಲ್ಲಿ ಅಮೃತಾ ಅರೋರಾ ಕೂಡ ಒಬ್ಬರು.  


COMMERCIAL BREAK
SCROLL TO CONTINUE READING

ಅಮೃತಾ ಅರೋರಾ ಬಾಲಿವುಡ್ ಬೆಡಗಿ ಮಲೈಕಾ ಅರೋರಾ ಅವರ ಸಹೋದರಿ.. ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಇವರು ಮುಂದೆ ತನ್ನ ಸ್ನೇಹಿತೆಯ ಪತಿಯೊಂದಿಗೆ ಹತ್ತಿರವಾಗಿ ಗರ್ಭಿಣಿಯಾದಳು.. ಹೀಗೆ ಏಳು ಬಾರಿ ಗರ್ಭಪಾತ ಮಾಡಿಕೊಂಡಿರುವ ಈ ನಟಿ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. 


ಇದನ್ನೂ ಓದಿ-Bigg Boss: ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲು.. ಖ್ಯಾತ ಸ್ಪರ್ಧಿಗೆ ಸಾರ್ವಜನಿಕವಾಗಿ ಕಹಿ ಅನುಭವ...! ವಿಡಿಯೋ ವೈರಲ್‌


1981 ರಲ್ಲಿ ಜನಿಸಿದ ಅಮೃತಾ ಅರೋರಾ ಅವರು ತಮ್ಮ ಸಹೋದರಿ ಮಲೈಕಾ ಅವರಂತೆ ವೀಡಿಯೊ ಜಾಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2002 ರಲ್ಲಿ ಬಿಡುಗಡೆಯಾದ 'ಕಿತ್ನೆ ಡೋರ್ ಕಿತ್ನೆ ಪಾಸ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಲಿಲ್ಲ. 


ಇದಾದ ನಂತರ ಅಮೃತಾ ಅರೋರಾ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಿದ್ದರು. 2004 ರಲ್ಲಿ ಅಮೃತಾ ಪಾಕಿಸ್ತಾನಿ ಮೂಲದ ಇಂಗ್ಲಿಷ್ ಕ್ರಿಕೆಟಿಗ ಉಸ್ಮಾನ್ ಅಫ್ಜಲ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. 


ಇದನ್ನೂ ಓದಿ-ʼಕರಾವಳಿ' ಸೇರಿದ ಪ್ರಜ್ವಲ್ ದೇವರಾಜ್..! ರೋಚಕವಾಗಿದೆ ಡೈನಾಮಿಕ್ ಪ್ರಿನ್ಸ್ 40ನೇ ಸಿನಿಮಾದ ಟೀಸರ್


ಅಲ್ಲದೇ ತಾನು ಉಸ್ಮಾನ್‌ನನ್ನು ಪ್ರೀತಿಸುತ್ತೇನೆ ಎಂದು ಹಲವು ಸಂದರ್ಶನಗಳಲ್ಲಿ ನಟಿ ಅಮೃತಾ ಅರೋರಾ ಹೇಳಿಕೊಂಡಿದ್ದರು... ಉಸ್ಮಾನ್ ಭಾರತದಲ್ಲಿ ಅನೇಕ ಹೈ ಪ್ರೊಫೈಲ್ ಪಾರ್ಟಿಗಳಿಗೆ ಹಾಜರಾಗುತ್ತಿದ್ದರು... ಅವರೊಂದಿಗೆ ಅಮೃತಾ ಕೂಡ ಹೋಗುತ್ತಿದ್ದರು. ಇದಲ್ಲದೆ, ಉಸ್ಮಾನ್ ಸಹೋದರ ಬಾಲಿವುಡ್‌ನಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದಾಗ ಅವರಿಗೆ ಅಮೃತಾ ಸಹಾಯ ಮಾಡಿದ್ದರು.. 


ಮತ್ತೊಂದೆಡೆ ಅಮೃತಾಳನ್ನು ತನ್ನ ಸ್ನೇಹಿತೆ ನಿಶಾಳ ಪತಿ ಶಕೀಲ್ ಲಡಾಕ್ ಪ್ರೀತಿಸುತ್ತಿದ್ರು.. ಹೀಗಾಗಿ ನಿಶಾ ಮತ್ತು ಶಕೀಲ್ ಲಡಾಕ್ ನಡುವೆ ಜಗಳ ಪ್ರಾರಂಭವಾಗಿ.. 2008 ರಲ್ಲಿ, ವಿಚ್ಛೇದನವಾಯಿತು... ನಂತರ ಅಮೃತಾ ಅವರನ್ನು ವಿವಾಹವಾದರು. ಎಷ್ಟೇ ಟೀಕೆಗಳಿದ್ದರೂ.. ಶಕೀಲ್ ಮತ್ತು ಅಮೃತಾ ಮದುವೆ ತುಂಬಾ ಅದ್ಧೂರಿಯಾಗಿ ನಡೆಯಿತು...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ