Lara Dutta: ಸುಶ್ಮಿತಾ ಸೇನ್, ಲಾರಾ ದತ್ತಾ ಮತ್ತು ಹರ್ನಾಜ್ ಸಂಧು ಮಾತ್ರ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿರುವ ಮೂವರು ಭಾರತೀಯ ನಟಿಯರಾಗಿದ್ದಾರೆ. ಇದರಲ್ಲಿ ನಟಿ ಲಾರಾ ದತ್ತ ಬಗ್ಗೆ ಇಂದು ನಾವು ತಿಳಿಯಲಿದ್ದೇವೆ... ಅತ್ಯುತ್ತಮ ಮಹಿಳಾ ಚೊಚ್ಚಲ ನಟಿಯಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದ ನಟಿ  2003 ರಲ್ಲಿ 'ಅಂದಾಜ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.


COMMERCIAL BREAK
SCROLL TO CONTINUE READING

'ಅಂದಾಜ್' ನಂತರ, ಲಾರಾ 'ಮಸ್ತಿ', 'ನೋ ಎಂಟ್ರಿ', ಪಾರ್ಟ್‌ನರ್, 'ಹೌಸ್‌ಫುಲ್' ನಂತಹ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದರು. ನಟಿಸುವ ಮೊದಲು, ಲಾರಾ 2000 ರಲ್ಲಿ ಮಿಸ್ ಇಂಡಿಯಾ ಮತ್ತು ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದಿದ್ದರು.  


ಇದನ್ನೂ ಓದಿ-Rashmika Mandanna: ಹುಟ್ಟು ಹಬ್ಬದಂದು ಒಂದೇ ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ.. ಫೋಟೋಸ್ ಲೀಕ್..!


ಲಾರಾ ದತ್ತಾ ಅವರ ತಂದೆ ಪಂಜಾಬಿ ಹಿಂದೂ ಮತ್ತು ಅವರ ತಾಯಿ ಆಂಗ್ಲೋ ಇಂಡಿಯನ್. ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ನಟಿಯಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡ, ಪಂಜಾಬಿ ಭಾಷೆಗಳನ್ನು ಮಾತನಾಡಬಲ್ಲವಳು.


ಮಾಧ್ಯಮ ವರದಿಗಳ ಪ್ರಕಾರ, ನಟಿ ಈ ಹಿಂದೆ ನಟ ಕೆಲ್ಲಿ ದೋರ್ಜಿ ಅವರೊಂದಿಗೆ ಸಂಬಂಧದಲ್ಲಿದ್ದರು. ಒಂಬತ್ತು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಬೇರ್ಪಟ್ಟರು. ಇದರ ನಂತರ, ಲಾರಾ 2008-2009 ರ ನಡುವೆ ಸ್ವಲ್ಪ ಸಮಯದವರೆಗೆ ಡಿನೋ ಮೊರಿಯಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಇದಲ್ಲದೆ, ಅವರು ಅಮೇರಿಕನ್ ವೃತ್ತಿಪರ ಬೇಸ್‌ಬಾಲ್ ಆಟಗಾರ ಡೆರೆಕ್ ಜೆಟರ್‌ನೊಂದಿಗೆ ಡೇಟಿಂಗ್ ಮಾಡಿದರು.


ಇದನ್ನೂ ಓದಿ-RCB ಸೋಲಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಾರಣ..! DBoss ಪ್ಯಾನ್ಸ್‌ ಪೋಸ್ಟ್‌ ವೈರಲ್‌


ಕೊನೆಗೆ ಎಲ್ಲಾ ಡೇಟಿಂಗ್‌ ಸಂಬಂಧಗಳಿಗೆ ಪೂರ್ಣವಿರಾಮ ಹಾಕಿದ ಲಾರಾ ದತ್ತಾ ಸೆಪ್ಟೆಂಬರ್ 2010 ರಲ್ಲಿ ಭಾರತೀಯ ಟೆನಿಸ್ ಆಟಗಾರ ಮಹೇಶ್ ಭೂಪತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದರ ನಂತರ 16 ಫೆಬ್ರವರಿ 2011 ರಂದು ವಿವಾಹವಾದರು. ಸದ್ಯ ನಟಿ ಒಂದು ಮಗುವಿನ ತಾಯಿಯಾಗಿದ್ದಾರೆ.. 


ಲಾರಾ ದತ್ತಾ ಅಕ್ಷಯ್ ಕುಮಾರ್ ಅಭಿನಯದ ಹಾಸ್ಯ ಚಿತ್ರ 'ವೆಲ್‌ಕಮ್ ಟು ದಿ ಜಂಗಲ್' ಚಿತ್ರಲ್ಲಿಯೂ ನಟಿಸುತ್ತಿದ್ದಾರೆ.. ಇದಲ್ಲದೇ, ನಿತೇಶ್ ತಿವಾರಿಯವರ ಬಹು ನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ'ದಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದು.. ಚಿತ್ರದಲ್ಲಿ ಲಾರಾ ಕೈಕೇಯಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ