Shraddha Kapoor: ಬ್ಲಾಕ್‌ಬಸ್ಟರ್ 'ಸ್ತ್ರೀ 2' ನಲ್ಲಿ ಕೊನೆಯ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ಕಪೂರ್ 'ಪುಷ್ಪಾ 2' ನಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಂದಿತ್ತು. 'ಪುಷ್ಪ' ಮೊದಲ ಭಾಗದಲ್ಲಿ ಸಮಂತಾ ರೂತ್ ಪ್ರಭು ಮಾಡಿದ್ದ ಐಟಂ ಸಾಂಗ್‌ನ್ನು ಎರಡನೇ ಭಾಗದಲ್ಲಿ ಶ್ರದ್ಧಾ ಕಪೂರ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಶ್ರದ್ಧಾ ಕಪೂರ್ ಅವರ ಸಂಭಾವನೆಯ ಮಾಹಿತಿಯೂ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ವರದಿಗಳನ್ನು ನಂಬುವುದಾದರೆ, 'ಪುಷ್ಪಾ 2' ಚಿತ್ರದಲ್ಲಿನ ಐಟಂ ಸಾಂಗ್‌ಗೆ ಶ್ರದ್ಧಾ ಕಪೂರ್ ಅವರ ಸಂಭಾವನೆ 5 ಕೋಟಿ ರೂ. 'ಪುಷ್ಪ' ಮೊದಲ ಭಾಗದಲ್ಲಿ ಸಮಂತಾ ರೂತ್ ಪ್ರಭು ಅವರ ಐಟಂ ನಂಬರ್ 'ಊ ಅಂತಾವಾ' ನೋಡಿದ್ರೆ, ಈ ಹಾಡಿನ ಅವಧಿ 3.49 ನಿಮಿಷ ಆಗಿತ್ತು.. ಅದರಂತೆ 'ಪುಷ್ಪಾ 2' ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರ ಐಟಂ ಸಾಂಗ್ ಕೂಡ ಅದೇ ಅವಧಿಯದ್ದಾಗಿದೆ ಎಂದು ನಂಬಲಾಗಿದೆ. ಇದೇ ವೇಳೆ ಶ್ರದ್ಧಾ ಅವರ ಸಂಭಾವನೆ ಸುದ್ದಿ ನಿಜವೇ ಆಗಿದ್ದರೆ ಅವರು 'ಪುಷ್ಪಾ 2' ಚಿತ್ರಕ್ಕೆ ಪ್ರತಿ ನಿಮಿಷಕ್ಕೆ ಒಂದೂವರೆ ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ ಎಂದರೂ ತಪ್ಪಾಗದು.


ಇದನ್ನೂ ಓದಿ-ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?


ಇಬ್ಬರು ನಾಯಕಿಯರನ್ನು ಸೋಲಿಸಿ ಗೆದ್ದ ಶ್ರದ್ಧಾ ಕಪೂರ್!
ವರದಿಗಳ ಪ್ರಕಾರ, ಮೊದಲು ದಿಶಾ ಪಟಾನಿ ಅಥವಾ ತೃಪ್ತಿ ದಿಮ್ರಿ ಹೆಸರನ್ನು 'ಪುಷ್ಪಾ 2: ದಿ ರೂಲ್' ಐಟಂ ಸಾಂಗ್‌ಗೆ ಆಯ್ಕೆ ಮಾಡಲಾಗಿದೆ ಎನ್ನಲಾಗಿತ್ತು.. ಆದರೆ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆ ಎಂದು ವರದಿಪಯಾಗಿದೆ... ಶ್ರದ್ಧಾ ಅವರ ಬಲವಾದ ಅಭಿಮಾನಿ ಬಳಗ ಮತ್ತು ಅವರ ಇತ್ತೀಚಿನ ಚಿತ್ರ 'ಸ್ತ್ರೀ 2' ಯಶಸ್ಸಿನಿಂದಾಗಿ ತಯಾರಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


'ಪುಷ್ಪ 2: ದಿ ರೂಲ್' ಬಿಡುಗಡೆ ದಿನಾಂಕ:
ಸುಕುಮಾರ್ ನಿರ್ದೇಶನದ 'ಪುಷ್ಪ 2: ದಿ ರೂಲ್' ಡಿಸೆಂಬರ್ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಹೊರತಾಗಿ ರಶ್ಮಿಕಾ ಮಂದಣ್ಣ, ಫಹದ್ ಫಾಜಿಲ್, ಪ್ರಕಾಶ್ ರಾಜ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವರದಿಗಳನ್ನು ನಂಬುವುದಾದರೆ, ಈ ಚಿತ್ರವನ್ನು 500 ಕೋಟಿ ರೂ.ಗೆ ನಿರ್ಮಿಸಲಾಗಿದೆ ಮತ್ತು ಬಿಡುಗಡೆಗೆ ಮುನ್ನವೇ ಥಿಯೇಟ್ರಿಕಲ್ ಮತ್ತು ನಾನ್-ಥಿಯೇಟ್ರಿಕಲ್ ರೈಟ್ಸ್‌ನಿಂದ 1085 ಕೋಟಿ ರೂ.ಗಳನ್ನು ಗಳಿಸಿದೆ.


ಇದನ್ನೂ ಓದಿ-Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.