ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?

Abhishek Bachchan on divorce rumours: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ಅವರ ವೀಡಿಯೊ ವೈರಲ್ ಆಗಿದೆ.

Written by - Chetana Devarmani | Last Updated : Oct 27, 2024, 01:30 PM IST
    • ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ವಿಚ್ಛೇದನ ವದಂತಿ
    • ವಿಚ್ಛೇದನ ವದಂತಿ ಬಗ್ಗೆ ಅಭಿಷೇಕ್ ಬಚ್ಚನ್ ಹೇಳಿಕೆ
    • ನಟ ಅಭಿಷೇಕ್ ಬಚ್ಚನ್ ಹೇಳಿದ್ದೇನು?
ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?  title=

Abhishek Bachchan Statement on Divorce Rumour: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳು ಮತ್ತೆ ಹುಟ್ಟಿಕೊಂಡಿವೆ. ಇದೀಗ, ವಿಚ್ಛೇದನದ ವದಂತಿಗಳ ಬಗ್ಗೆ ನಟ ಅಭಿಷೇಕ್ ಬಚ್ಚನ್ ಮಾತನಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಅಭಿಷೇಕ್ ಬಚ್ಚನ್ ಅವರ ಮತ್ತು ಐಶ್ವರ್ಯಾ ಅವರ ಸಂಬಂಧದಲ್ಲಿ ಬಿರುಕು ಮತ್ತು ವಿಚ್ಛೇದನದ ಬಗ್ಗೆ ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಮಾತನಾಡಿದ್ದರು. “ವದಂತಿಗಳ ಬಗ್ಗೆ ಹೇಳಲಿಕ್ಕೆ ಏನೂ ಇಲ್ಲ. ದುರದೃಷ್ಟವಶಾತ್ ನೀವೆಲ್ಲರೂ ಬೇರೆ ರೀತಿಯಲ್ಲೇ  ಮಾತನಾಡುತ್ತಿದ್ದೀರಿ. ಯಾಕೆ ಎಲ್ಲರೂ ಹೀಗೆ ಮಾತನಾಡುತ್ತಿರುವಿರಿ ನನಗೆ ಗೊತ್ತಿಲ್ಲ. ನಾವು ಸೆಲೆಬ್ರಿಟಿಗಳು.. ಕ್ಷಮಿಸಿ... ಆದರೆ ನಾನಿನ್ನೂ ವಿವಾಹಿತನಾಗೇ ಇರುವೆ.” ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. 

 

 

ಇದು ಈಗಿನ ವಿಡಿಯೋ ಅಲ್ಲ. 2016ರಲ್ಲಿ ಸಿನಿಮಾ ಸುದ್ದಿಗೋಷ್ಠಿಯೊಂದರಲ್ಲಿ ಅಭಿಷೇಕ್‌ ಬಚ್ಚನ್‌ ಡಿವೋರ್ಸ್ ವದಂತಿ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದರು.

ಇದನ್ನೂ ಓದಿ: ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?

ಅಭಿಷೇಕ್ ಐಶ್ವರ್ಯಾ ವಿಚ್ಛೇದನದ ವರದಿಗಳ ಬಗ್ಗೆ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಅಥವಾ ಬಚ್ಚನ್ ಕುಟುಂಬದ ಯಾವುದೇ ಸದಸ್ಯರು ಇನ್ನೂ ಪ್ರತಿಕ್ರಿಯಿಸಿಲ್ಲ. ಅಭಿಷೇಕ್ ಬಚ್ಚನ್ ಮುಂದಿನ ಸಿನಿಮಾ ಕಿಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್, ಸುಹಾನಾ ಖಾನ್ ಮತ್ತು ಅಭಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಕಳೆದ ಮೂರು ನಾಲ್ಕು ವರ್ಷಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ದಾಂಪಂತ್ಯದ ವಿಚಾರ ಚರ್ಚೆಯಲ್ಲಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.  ಐಶ್ವರ್ಯಾ ಅವರ ಮಗಳು ಆರಾಧ್ಯ ಜೊತೆ ಬೇರೆ ಮನೆಯಲ್ಲಿ ವಾಸವಿದ್ದಾರೆ ಎನ್ನಲಾಗುತ್ತಿದೆ. ಐಶ್ವರ್ಯಾ ಮತ್ತು ಅಭಿಷೇಕ್‌ ಇತ್ತೀಚೆಗೆ ಒಟ್ಟುಗೆ ಕಾಣಿಸಿಕೊಳ್ಳದಿರುವುದು ಈ ವದಂತಿಗಳಿಗೆ ಪುಷ್ಠಿ ನೀಡುತ್ತಿದೆ.  

ಇದನ್ನೂ ಓದಿ: ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News