Sridevi Death Anniversary : ಬಾಲಿವುಡ್ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ಒಬ್ಬರು ಶ್ರೀದೇವಿ. ಸೌಂದರ್ಯದಿಂದಲೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದ ಶ್ರೀದೇವಿ ಈಗ ನಮ್ಮ ಜೊತೆಗಿಲ್ಲ. ಆದರೆ ಅವರ ನೆನಪುಗಳು ಅಭಿಮಾನಿಗಳ ಹೃದಯದಲ್ಲಿ ಅಜರಾಮರ. ಶ್ರೀದೇವಿ 2018 ರಲ್ಲಿ ತಮ್ಮ 54 ನೇ ವಯಸ್ಸಿನಲ್ಲಿ ದುಬೈನಲ್ಲಿ ನಿಧನರಾದರು. ಇಂದು ಅವರ ನಿಧನದ 6ನೇ ಪುಣ್ಯತಿಥಿ. 


COMMERCIAL BREAK
SCROLL TO CONTINUE READING

ಶ್ರೀದೇವಿ ನಿಧನದ ಸುದ್ದಿ ಚಿತ್ರರಂಗ ಸೇರಿದಂತೆ ಅಪಾರ ಅಭಮಾನಿಗಳಿಗೂ ಆಘಾತ ನೀಡಿತ್ತು. ಶ್ರೀದೇವಿ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದೇ ಹಲವರಿಗೆ ಕಷ್ಟವಾಗಿತ್ತು. 


ಇದನ್ನೂ ಓದಿ:Darshan: ನಟ ದರ್ಶನ್‌ಗೆ ಮತ್ತೆ ಸಂಕಷ್ಟ..! ಡಿಬಾಸ್‌ ವಿರುದ್ಧ ಸಾಲು ಸಾಲು ದೂರು ದಾಖಲು 


ಶ್ರೀದೇವಿ ಅವರು ತಮಿಳುನಾಡಿನ ಶಿವಕಾಶಿಯಲ್ಲಿ 13 ಆಗಸ್ಟ್ 1965 ರಂದು ಜನಿಸಿದರು. ಅವರು ಬಾಲ ಕಲಾವಿದರಾಗಿ ಸಿನಿರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಶ್ರೀದೇವಿ ಕೇವಲ 4 ನೇ ವಯಸ್ಸಿನಲ್ಲಿ 1967 ರ ತಮಿಳು ಚಿತ್ರ 'ಮುರುಗ' ಮೂಲಕ ಪದಾರ್ಪಣೆ ಮಾಡಿದರು. ಶ್ರೀದೇವಿ ಅವರು ತಮ್ಮ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಸರಿಸುಮಾರು 300 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.


ಕೋಟಿಗಟ್ಟಲೆ ಶುಲ್ಕ ಪಡೆದ ಮೊದಲ ನಟಿ ಶ್ರೀದೇವಿ


ಶ್ರೀದೇವಿ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಕೋಟಿಗಟ್ಟಲೆ ಶುಲ್ಕ ಪಡೆದ ಹಿಂದಿ ಚಿತ್ರರಂಗದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 'ಲೇಡಿ ಸೂಪರ್ ಸ್ಟಾರ್' ಎಂಬ ಬಿರುದು ಪಡೆದಿದ್ದರು. ಇಂದಿಗೂ ಈ ಬಿರುದಿನಿಂದಲೇ ಎಲ್ಲರಿಗೂ ಪರಿಚಿತರು. 80 ಮತ್ತು 90 ರ ದಶಕದಲ್ಲಿ ಪ್ರತಿಯೊಬ್ಬ ನಿರ್ದೇಶಕರು ತಮ್ಮ ಚಿತ್ರದಲ್ಲಿ ಶ್ರೀದೇವಿ ನಟಿಸಬೇಕೆಂದು ಬಯಸಿದ್ದರು ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ:ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್‌ ಶೋಗೆ ಸಮಂತಾ ವಿಶೇಷ ಅತಿಥಿ, ನ್ಯಾಚುರಲ್‌ ಬ್ಯೂಟಿ ಹಳೆಯ ವಿಡಿಯೋ ವೈರಲ್!


ಆಗ ಶ್ರೀದೇವಿ ಚಿತ್ರವೊಂದಕ್ಕೆ 1 ರಿಂದ 2 ಕೋಟಿ ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಅವರ ಸ್ಟಾರ್‌ಡಮ್‌ ಎಷ್ಟಿತ್ತೆಂದರೆ ಆ ಕಾಲದಲ್ಲಿ ದೊಡ್ಡ ದೊಡ್ಡ ತಾರೆಯರು, ನಟಿಯರಿಗೆ ಅಭದ್ರತೆ ಕಾಡುತ್ತಿತ್ತು ಎಂದೂ ಹೇಳಲಾಗುತ್ತದೆ. ಶ್ರೀದೇವಿಯೊಂದಿಗೆ 'ಚಂದ್ರಮುಖಿ' ಮತ್ತು 'ಚಂದ್ ಕಾ ತುಕ್ಡಾ' ಚಿತ್ರಗಳಲ್ಲಿ ಕೆಲಸ ಮಾಡಿದ್ದ ಸಲ್ಮಾನ್ ಖಾನ್, ಶ್ರೀದೇವಿಯೊಂದಿಗೆ ಕೆಲಸ ಮಾಡಲು ಹೆದರುತ್ತಿದ್ದರು ಎಂದು ತಮ್ಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.