Sunny Leone: ನಟಿ ಸನ್ನಿ ಲಿಯೋನ್ ತುಟಿಗೆ ಗಾಯ, ವಿಡಿಯೋ ವೈರಲ್
ತುಟಿಗೆ ಗಾಯವಾಗಿರುವ ವಿಡಿಯೋ ಹಂಚಿಕೊಂಡಿರುವ ನಟಿ ಸನ್ನಿ ಲಿಯೋನ್, ‘ನನ್ನ ತುಟಿಯಿಂದ ರಕ್ತ ಬರುತ್ತಿದೆ. ಆದರೆ ತಮ್ಮ ಪತಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೆಂದು ಕಿಚಾಯಿಸಿದ್ದಾರೆ.
ನವದೆಹಲಿ: ಮಾಜಿ ನೀಲಿ ಚಿತ್ರತಾರೆ, ಪಡ್ಡೆಹೈಕಳ ಕನಸಿನ ಯುವರಾಣಿ ನಟಿ ಸನ್ನಿ ಲಿಯೋನ್ ತುಟಿಗೆ ಗಾಯ ಮಾಡಿಕೊಂಡಿದ್ದಾರೆ. ಬೆಡ್ ಮೇಲೆ ಮಲಗಿ ತಮ್ಮ ತುಟಿಗೆ ಗಾಯವಾಗಿರುವ ವಿಡಿಯೋವನ್ನು ನಟಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತುಟಿಗೆ ಗಾಯವಾಗಿರುವ ವಿಡಿಯೋ ಹಂಚಿಕೊಂಡಿರುವ ನಟಿ ಸನ್ನಿ ಲಿಯೋನ್, ‘ನನ್ನ ತುಟಿಯಿಂದ ರಕ್ತ ಬರುತ್ತಿದೆ. ಆದರೆ ತಮ್ಮ ಪತಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ’(Bleeding and @dirrty99 doesn’t care!!)ವೆಂದು ಕಿಚಾಯಿಸಿದ್ದಾರೆ.
ಇದನ್ನೂ ಓದಿ: Puneeth Rajkumar: ಅಪ್ಪನ ಜನ್ಮ ದಿನಕ್ಕೆ ಕೊಡಗಿನಲ್ಲಿ ಹುಣಸೆ ಗಿಡ ನೆಟ್ಟಿದ್ರು ಪುನೀತ್!
ಕೆನಡಿಯನ್-ಅಮೇರಿಕನ್ ನೀಲಿ ಚಿತ್ರತಾರೆಯಾಗಿ ಖ್ಯಾತಿ ಹೊಂದಿದ್ದ ಸನ್ನಿ ಲಿಯೋಯ್ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಪತಿ ಡೇನಿಯಲ್ ವೆಬರ್ ಮತ್ತು ಮೂವರು ದತ್ತು ಮಕ್ಕಳೊಂದಿಗೆ ಮುಂಬೈನಲ್ಲಿರುವ ಸನ್ನಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಅಂದಹಾಗೆ ನಟಿ ಸನ್ನಿ ಲಿಯೋನ್ ತುಟಿಗೆ ಯಾರೂ ಗಾಯಮಾಡಿಲ್ಲ. ಅವರು ಬಳಸುತ್ತಿದ್ದ ಮೊಬೈಲ್ ಮುಖದ ಮೇಲೆ ಬಿದ್ದ ಪರಿಣಾಮ ನಟಿಯ ತುಟಿಗೆ ಗಾಯವಾಗಿದೆಯಂತೆ. ತುಟಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅದಕ್ಕೆ ಚಿಕಿತ್ಸೆ ತೆಗೆದುಕೊಂಡಿರುವುದಾಗಿ ನಟಿ ತಿಳಿಸಿದ್ದಾಳೆ.
ಇದನ್ನೂ ಓದಿ: Rishab Shetty: ರಶ್ಮಿಕಾಗೆ ‘ಕೃತಜ್ಞತೆ ಇಲ್ಲ’.. ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ರು ರಿಷಬ್ ಶೆಟ್ಟಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.