Puneeth Rajkumar: ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ ಫ್ಯಾಮಿಲಿ ಜೊತೆಗೆ ಕೊಡಗಿಗೆ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅಪ್ಪು ಅಭಿಮಾಣಿಗಲ ಸಂತಸಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಶ್ರೀನಿ ಇದ್ದ ರೂಮ್ ಪಕದಲ್ಲಿಯೇ ಒಂದು ಮರವಿತ್ತು. ಅದು ಬಕು ವಿಶೇಷ ಮರ. ಪುನೀತ್ ರಾಜ್ಕುಮಾರ್ ಎಲ್ಲರ ಮನದಲ್ಲಿ ಸದಾ ನೆಲೆಸಿರುತ್ತಾರೆ. ಅವರ ನೆನಪು ಇಂದಿಗೂ ಎಲ್ಲರನ್ನ ಕಾಡುತ್ತಿದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವವೇ ಅವರ ಮೇಲಿನ ಈ ಅಭಿಮಾನಕ್ಕೆ ಕಾರಣ.
ಇದನ್ನೂ ಓದಿ : Rashmika Mandanna: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ಟ್ರೋಲ್ ಆದ ರಶ್ಮಿಕಾ ಮಂದಣ್ಣ.!
ಡೈರೆಕ್ಟರ್ ಶ್ರೀನಿ ಉಳಿದುಕೊಂಡ ರೂಮ್ ಪಕ್ಕದಲ್ಲಿ ಪುನೀತ್ ನೆಟ್ಟ ಮರವಿತ್ತು. ಅಪ್ಪು ಅವರ ತಂದೆ ಡಾ.ರಾಜ್ ಕುಮಾರ್ ಅವರ 92 ನೇ ಜನ್ಮ ದಿನದ ನೆನಪಿಗೆ ಇಲ್ಲಿ ಮರ ನೆಟ್ಟಿದ್ದರಂತೆ. ಕೊಡಗಿಗೆ ಹೋದಾಗ ಇಲ್ಲಿಯ ರೆಸಾರ್ಟ್ ಒಂದರಲ್ಲಿ ಮಲಬಾರ್ ಹುಣಸೆ ಗಿಡವನ್ನ ಪುನೀತ್ ರಾಜ್ ಕುಮಾರ್ ನೆಟ್ಟಿದ್ದಾರೆ. ಅಲ್ಲದೇ, ಅದರ ಪಕ್ಕದಲ್ಲಿಯೇ ಒಂದು ಫಲಕವಿದ್ದು ಎಲ್ಲ ಮಾಹಿತಿ ಅದರ ಮೇಲಿದೆ. ಈ ಮರದ ಫೋಟೋ ತೆಗೆದಿರೋ ಶ್ರೀನಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. You are rooted in our memories ಎಂದು ಶೀರ್ಷಿಕೆ ನೀಡಿದ್ದಾರೆ.
You are rooted in our memories 🙏😔#AppuBoss pic.twitter.com/cUv7lU2C48
— SRINI (@lordmgsrinivas) January 11, 2023
ಸದ್ಯ ಘೋಸ್ಟ್ ಸಿನಿಮಾದ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಘೋಸ್ಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಸಹಜವಾಗಿಯೇ ಎಲ್ಲರ ನಿರೀಕ್ಷೆ ದುಪ್ಪಟ್ಟಾಗಿದೆ. ಬಿಡುವಿನ ವೇಳೆಯಲ್ಲಿ ಡೈರೆಕ್ಟರ್ ಶ್ರೀನಿ ತೆಗೆದು, ಶೇರ್ ಮಾಡಿದ ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ : Ramya: ʻಕೈʼ ಬಿಟ್ಟು ʻಕಮಲʼ ಮುಡಿಯುವ ಸುಳಿವು ಕೊಟ್ರಾ ಮೋಹಕತಾರೆ ರಮ್ಯಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.