Ranbir Kapoor father : ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಭಾಗವಹಿಸಿದ್ದ ನಟ ರಣಬೀರ್ ಕಪೂರ್ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳ ಕುರಿತು ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಅದರಲ್ಲೂ ತಮಗೆ ಮೋಸಗಾರ ಎಂದು ಬಂದ ಹಣೆಪಟ್ಟಿಯ ಬಗ್ಗೆ ಮಾತನಾದ್ದು, ಎಲ್ಲರ ಅಚ್ಚರಿಗೆ ಕಾರಣವಾಯಿತು..


COMMERCIAL BREAK
SCROLL TO CONTINUE READING

ನಾನು ಈ ಹಿಂದೆ ಇಬ್ಬರು ಸ್ಟಾರ್ ಹೀರೋಯಿನ್‌ಗಳೊಂದಿಗೆ ಡೇಟ್ ಮಾಡಿದ್ದೆ, ಆದರೆ ಅಂತಿಮವಾಗಿ ನನಗೆ ಮೊಸಗಾರ ಎಂಬ ಪಟ್ಟ ಬಂತು.. ನಿಜ ಹೇಳಬೇಕೆಂದರೆ ಈಗಲೂ ಕೆಲವರು ಅದೇ ಟ್ಯಾಗ್‌ಗಳು ಮುಂದುವರೆದಿವೆ.. ಎಂದು ಹೇಳಿಕೊಂಡ ರಣಬೀರ್ ಕಪೂರ್ ಭಾವುಕರಾದರು. 


ಇದನ್ನೂ ಓದಿ:ನಟನೆ ಏನ್‌ ಬೇಡ ಜಸ್ಟ್‌ ತಮನ್ನಾ ಹಾಗೆ ಮಾಡಿದ್ರೆ ಸಾಕು ಸಿನಿಮಾ ಸೂಪರ್ ಹಿಟ್..! ನಿರ್ದೇಶಕನ ಶಾಕಿಂಗ್ ಹೇಳಿಕೆ


ಈ ಹಿಂದೆ ರಣಬೀರ್ ಸ್ಟಾರ್ ಹೀರೋಯಿನ್‌ಗಳ ಜೊತೆ ಲವ್ ಅಫೇರ್ ಹೊಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಸ್ಟಾರ್ ಹೀರೋಯಿನ್‌ಗಳ ವಿಚಾರದಲ್ಲಿ ಈಗಲೂ ಮೋಸಗಾರ ಎಂಬ ಬಿರುದು ಅಂಟಿಕೊಂಡಿದೆ ಎಂದು ನಟ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ರಣಬೀರ್ ತಮ್ಮ ಮಗಳು ರಾಹಾ ಮತ್ತು ತಮ್ಮ ತಂದೆ ರಿಷಿ ಕಪೂರ್ ಬಗ್ಗೆಯೂ ಮಾತನಾಡಿದ್ದಾರೆ.


ಬಾಲ್ಯದಲ್ಲಿ ನಾನು ಅಪ್ಪನೊಂದಿಗೆ ಮಾತನಾಡಲು ತುಂಬಾ ಹೆದರುತ್ತಿದ್ದೆ. ಅದರಲ್ಲೂ ನಾನು ಅವರ ಕಣ್ಣುಗಳನ್ನು ನೋಡುತ್ತಿರಲಿಲ್ಲ. ಅವರೆದುರು ನಿಂತಿದ್ದರೆ ತಲೆ ಬಾಗಿಸುತ್ತಿದ್ದೆ. ನಾನು ನಮ್ಮ ತಂದೆಗೆ ತುಂಬಾ ಹೆದರುತ್ತೇನೆ. ಆದರೆ ಅವರ ಸಾವಿನ ನಂತರ ಆ ನೋವನ್ನು ಅರಗಿಸಿಕೊಳ್ಳಲಾಗಲಿಲ್ಲ ಎಂದು ನಟ ಹೇಳಿಕೊಂಡರು..


ಇದನ್ನೂ ಓದಿ:ಬಿಗ್ ಬಾಸ್ ಹೊಸ ಲೋಗೋ ಮತ್ತು ಪ್ರೋಮೋ ಬಿಡುಗಡೆ..! ಅಸಲಿ ಆಟ ಈಗ ಶುರು.. 


ಮಗಳು ರಾಹಾ ಕುರಿತು ಮಾತನಾಡುತ್ತಾ.. 'ರಾಹಾ ಆಗಮನ ನಮ್ಮ ಜೀವನದಲ್ಲಿ ಸಂತೋಷ ತಂದಿತು. ಈಗ ಅವಳೇ ನಮ್ಮ ಪ್ರಪಂಚ.. ಶೂಟಿಂಗ್‌ಗೆ ಹೋಗಿ ತುಂಬಾ ಬ್ಯುಸಿಯಾಗಿದ್ದರೂ ರಾಹಾ ಜೊತೆ ಸ್ವಲ್ಪ ಸಮಯ ಕಳೆದರೆ ಆ ಕಷ್ಟವೆಲ್ಲ ಮಾಯವಾಗುತ್ತದೆ ಎಂದು ಮಗಳ ಮೇಲಿನ ಪ್ರೀತಿಯನ್ನು ರಣಬೀರ್ ಕಪೂರ್ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.