ಬಿಗ್ ಬಾಸ್ ಹೊಸ ಲೋಗೋ ಮತ್ತು ಪ್ರೋಮೋ ಬಿಡುಗಡೆ..! ಅಸಲಿ ಆಟ ಈಗ ಶುರು.. 

Bigg Boss 8 new logo : ಪ್ರೇಕ್ಷಕರು ಬಿಗ್‌ ಬಾಸ್‌ ಮುಂದಿನ ಸೀಸನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಶೋ ಯಾವಾಗ ಆರಂಭವಾಗುತ್ತೆ..? ಸ್ಪರ್ಧಿಗಳ ಯಾರ್ಯಾರು..? ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೇ..  ಇದರ ಬೆನ್ನಲ್ಲೆ, ಇದೀಗ ಬಿಗ್‌ಬಾಸ್ ಸೀಸನ್ 8 ರ ಬಗ್ಗೆ ಬಿಟ್‌ ಅಪ್ಡೇಟ್ ಹೊರ ಬಿದ್ದಿದೆ..

Written by - Krishna N K | Last Updated : Jul 21, 2024, 03:55 PM IST
    • ಬಿಗ್‌ ಬಾಸ್‌ ಮುಂದಿನ ಸೀಸನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
    • ಬಿಗ್ ಬಾಸ್ ಸೀಸನ್ 8 ರ ಬಗ್ಗೆ ಅಪ್ಡೇಟ್ ಹೊರ ಬಿದ್ದಿದೆ.
    • ನ್ಯೂ ಲೋಗೋ ರಿವೀಲ್‌ ಮತ್ತು ಪ್ರೋಮೋ ಬಿಡುಗಡೆಯಾಗಿದೆ..
ಬಿಗ್ ಬಾಸ್ ಹೊಸ ಲೋಗೋ ಮತ್ತು ಪ್ರೋಮೋ ಬಿಡುಗಡೆ..! ಅಸಲಿ ಆಟ ಈಗ ಶುರು..  title=
Bigg Boss season 8 telugu

Bigg Boss 8 : ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಜನಪ್ರಿಯತೆ ಹೇಳತೀರದು. ಒಂದೆಡೆ ಈ ಕಾರ್ಯಕ್ರಮಕ್ಕೆ ಸಾಕಷ್ಟು ಟೀಕೆಗಳು ಬರುತ್ತಿದ್ದರೂ ಪ್ರೇಕ್ಷಕರು ಮಾತ್ರ ಕಡಿಮೆಯಾಗುತ್ತಿಲ್ಲ. ಕನ್ನಡ ಅಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ತೆಲಗು ಬಿಗ್‌ ಬಾಸ್‌ ಸೀಸನ್ 7 ಸೂಪರ್ ಹಿಟ್ ಆಗಿದ್ದರಿಂದ ಪ್ರೇಕ್ಷಕರು ಸೀಸನ್ 8 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ನಟ, ನಿರೂಪಕ ನಾಗಾರ್ಜುನ ಬಿಗ್ ಬಾಸ್ ಸೀಸನ್ 8 ರ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಅಲ್ಲದೆ, ಬಿಗ್ ಬಾಸ್ ಸೀಸನ್ 8 ರ ಹೊಸ ಲೋಗೋವನ್ನು ರಿವೀಲ್‌ ಮತ್ತು ಪ್ರೋಮೋ ಬಿಡುಗಡೆ ಮಾಡಿದ್ದಾರೆ..

ಇದನ್ನೂ ಓದಿ:ನನ್ನಪ್ಪ ನಮ್ಮನ್ನು ಬಿಟ್ಟು ಹೋಗಿದ್ದು ಈ ಕಾರಣಕ್ಕೆ...! ಬಿಟ್ಹೋದ ತಂದೆಯ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ ಅನುಶ್ರೀ

ಆದರೆ ಈ ಶೋ ಯಾವಾಗ ಆರಂಭವಾಗಲಿದೆ ಎಂಬುದನ್ನು ಅವರು ಹೇಳಿಲ್ಲ. ಹೊಸದಾಗಿ ಬಿಡುಗಡೆಯಾದ ಹೊಸ ಲೋಗೋ ವರ್ಣರಂಜಿತ ಮತ್ತು ಆಕರ್ಷಕವಾಗಿದೆ. ಹೀಗಿರುವಾಗ.. ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ.

ಈ ಬಾರಿ ದೊಡ್ಮನೆಗೆ ಹೆಚ್ಚು ಧಾರಾವಾಹಿ ನಟರು ಮತ್ತು ಆ್ಯಂಕರ್‌ಗಳು ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಸೋಷಿಯಲ್‌ ಮಿಡಿಯಾ ಸ್ಟಾರ್ಸ್‌ ಮತ್ತು ಯೂಟ್ಯೂಬರ್‌ಗಳನ್ನು ಈ ಶೋಗೆ ಕರೆತರಲು ನಿರ್ಮಾಪಕರು ತಯಾರಿ ಆರಂಭಿಸಿದ್ದರು ಎನ್ನಲಾಗಿತ್ತು.. ಈ ಕ್ರಮದಲ್ಲಿ ಸ್ಪರ್ಧಿಗಳು ಆಯ್ಕೆಯಾದರೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶೋ ಆರಂಭವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News