Minoo Mumtaz: ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಹೆಜ್ಜೆಯ ಗುರುತುಗಳನ್ನು ಅಭಿಮಾನಿಗಳ ಹೃದಯದಲ್ಲಿ ಹಚ್ಚೆ ಹಾಕಿ ಹೋದ ಸಾಕಷ್ಟು ನಟ- ನಟಿಯರಿದ್ದಾರೆ. ಹೀಗೆಯೇ ಚಿತ್ರರಂಗದ ಸುವರ್ಣ ಯುಗದಲ್ಲಿ, ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಲಕ್ಷಾಂತರ ಜನರ ಹೃದಯ ಗೆದ್ದ ನಟಿ ಒಬ್ಬರು ಇದ್ದರು. ನೃತ್ಯಗಾರ್ತಿಯಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ ಈಕೆ ನಂತರ ಸ್ಟಾರ್‌ ಆಗಿ ಸಿನಿಮಾ ಇಂಡಸ್ಟ್ರಿಯನ್ನು ಆಳಿದರು.


COMMERCIAL BREAK
SCROLL TO CONTINUE READING

ನಾಲ್ವರು ಸಹೋದರರು ಮತ್ತು ನಾಲ್ವರು ಸಹೋದರಿಯರ ಕುಟುಂಬದಲ್ಲಿ ಜನಿಸಿದ ಮಿನೂ ಮುಮ್ತಾಜ್, ತಮ್ಮ ಮನೆಗೆ ಏಕೈಕ ಆದಾಯದ ಮೂಲವಾಗಿದ್ದರು, ಮನೆಯಲ್ಲಿ ತೀವ್ರವಾದ ಆರ್ಥಿಕ ಸಂಕಷ್ಟದ ಕಾರಣದಿಂದ ಮನೆಯನ್ನು ನಿಭಾಯಿಸುವ ಜವಾಬ್ದಾರಿ ಅವರ ಹೆಗಲೇರಿತ್ತು. ಮುಮ್ತಾಜ್‌ ಅವರ ತಂದೆ ಒಬ್ಬ ನಟರಾಗಿದ್ದರು, ಮಧ್ಯಪಾನದ ಅಭ್ಯಾಸಕ್ಕೆ ಬಿದ್ದು ಅವರು ತಮ್ಮ ವ್ತ್ತಿ ಜೀವನವನ್ನು ಹಾಳು ಮಾಡಿಕೊಂಡಿದ್ದರು. ಪರಿಣಾಮವಾಗಿ, ಮುಮ್ತಾಜ್‌ ಅವರ ಮನೆಯವರು ಹಸಿವಿನಿಂದ ತಿನ್ನಲು ತುತ್ತು ಊಟವಿಲ್ಲದೆ ದಿನ ರಾತ್ರಿ ಕಳೆಯುವ ಪರಿಸ್ಥಿತಿ ತಲುಪಿತ್ತು. ಇದೇ ಕಾರಣದಿಂದಾಗಿ ಮನೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮಿನೂ ಮುಮ್ತಾಜ್‌ ತೆಗೆದುಕೊಂಡಿದ್ದರು. ಕುಟುಂಬವನ್ನು ನಿಭಾಯಿಸಲು ನಟಿ ವೇದಿಕೆ ಏರಿ ನೃತ್ಯ ಮಾಡಿ ಒಂದೊ ಎರಡೋ ಪೈಸೆ ಸಂಪಾದಿಸಿ ಮನೆಯನ್ನು ನಡೆಸುತ್ತಿದ್ದರು.


1955 ರಲ್ಲಿ, ಬಾಂಬೆ ಟಾಕೀಸ್‌ಗೆ ನೃತ್ಯಗಾರ್ತಿಯಾಗಿ ಸೇರಿಕೊಂಡ ಮುಮ್ತಾಜ್‌, ಘರ್ ಘರ್ ಮೇ ದೀಪಾವಳಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 1956 ರಲ್ಲಿ ತೆರೆ ಕಂಡ CID ಸಿನಿಮಾದಲ್ಲಿ " ದೇಖ್ ಮೇರಾ ಕ್ಯಾ ನಾಮ್ ರೇ... " ಗೆ ನೃತ್ಯ ಮಾಡಿ ಎಲ್ಲರ ಮನ ಸೆಳೆದಿದ್ದರು. ಇದಾದ ನಂತರ ನಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಸಿಗಲು ಆರಂಭವಾಯಿತು. ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಸಕ್ಸಸ್‌ ನೇಮ್‌ ಫೇಮ್‌ ಎಲ್ಲವೂ ಸಿಕ್ಕ ನಂತರವೂ ಕೂಡ ನಟಿ ಹಲವಾರು ಸಮಸ್ಯೆಗಳನ್ನು ಎದುರಿಸ ಬೇಕಾಯಿತು. 


1958 ರಲ್ಲಿ ʻಹೌರಾ ಬ್ರಿಡ್ಜ್‌ʼ ಎಂಬ ಸಿನಿಮಾದಲ್ಲಿ ನಟಿಗೆ ತಮ್ಮ ಸ್ವಂತ ಅಹೋದರನ ಜೊೆಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿ ಮುಮ್ತಾಜ್‌ ತನ್ನ ಸ್ವಂತ ಸಹೋದರನ ಜೊತೆಗೆ ರೊಮ್ಯಾನ್ಸ್‌ ಸೀನ್‌ ಮಾಡಿದ್ದಳು, ಆತನಿಗೆ ಪ್ರೇಯಸಿಯಾಗಿ ನಟಿಸಿದ್ದಳು. ಒಂದು ಸಿನಿಮಾಗಾಗಿ ತನ್ನ ಸ್ವಂತ ಅಣ್ಣನೊಂದಿಗೆ ರೊಮ್ಯಾನ್ಸ್‌ ಮಾಡಿದ್ದು, ಆಗಿನ ಕಾಲದಲ್ಲಿ ವಿವಾದವನ್ನು ಸೃಷ್ಟಿಸಿತ್ತು, ನಂತರ ಸಾರ್ವಜನಿಕರು ಆಕೆಯ ಮೇಲೆ ಆಕ್ರೋಶವನ್ನು ವ್ಯಕ್ತ ಪಡಿಸಿದರು. 


ಮಿನೂ ಮುಮ್ತಾಜ್ ಅವರ ನಿಜವಾದ ಹೆಸರು ಮಲಿಕುನಿಸ್ಸಾ ಅಲಿ, ಸಿನಿಮಾಗಾಗಿ ಆಕೆ ಮೀನೂ ಮುಮ್ತಾಜ್‌ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು. ಇನ್ನೂ, ನಟಿ ಮೀನೂ 1963ರಲ್ಲಿ ಸಿನಿಮಾ ನಿರ್ದೇಶಕ  ಎಸ್. ಅಲಿ ಅಕ್ಬರ್ ಅವರನ್ನು ವಿವಾಹವಾದರು, ಈ ದಂಪತಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.