ಬೆಂಗಳೂರು:  ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿಕೆ ನೀಡಿದ್ದ ಸುದೀಪ್ ಗೆ ಭಾರತೀಯ ಚಿತ್ರರಂಗದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಸರಣಿ ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.'ಅಜೇಯ ದೇವಗನ್ ಹಿಂದಿಯ ಟ್ವೀಟ್‌ಗೆ ನೀವು ಕನ್ನಡದಲ್ಲಿ ಉತ್ತರಿಸಿದರೆ ಪರಿಸ್ಥಿತಿ ಹೇಗಿರ್ತಿತ್ತು ? ಎಂಬ ನಿಮ್ಮ ಪ್ರಶ್ನೆಗಿಂತ ಉತ್ತಮವಾದ ಸಂಗತಿ ಇನ್ನೊಂದಿಲ್ಲ..ನಿಮಗೆ ವಂದನೆಗಳು ಮತ್ತು ಉತ್ತರ ಮತ್ತು ದಕ್ಷಿಣ ಎನ್ನುವುದಿಲ್ಲ ಭಾರತವು ಒಂದೇ ಎಂದು ಎಲ್ಲರೂ ಅರಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನೊಂದು ಟ್ವೀಟ್ ನಲ್ಲಿ ಅವರು 'ನೀವು ಈ ಹೇಳಿಕೆಯನ್ನು ನೀಡಲು ಉದ್ದೇಶಿಸಿದ್ದಿರೋ ಅಥವಾ ಇಲ್ಲವೋ,ಆದರೆ ನೀವು ಈ ಹೇಳಿಕೆ ನೀಡಿದ್ದು ನನಗೆ ತುಂಬಾ ಸಂತಸವನ್ನುಂಟು ಮಾಡಿದೆ.ಬಲವಾದ ಕೋಲಾಹಲ ಉಂಟಾಗದ ಹೊರತು, ವಿಶೇಷವಾಗಿ ಬಾಲಿವುಡ್ (ಉತ್ತರ ಭಾರತ) ಮತ್ತು ಸ್ಯಾಂಡಲ್ ವುಡ್  (ದಕ್ಷಿಣ ಭಾರತ ) ನಡುವೆ ಯುದ್ಧದಂತಹ ಪರಿಸ್ಥಿತಿ ಕಂಡುಬರುವ ಸಮಯದಲ್ಲಿ ಶಾಂತವಾಗಿರಲು ಸಾಧ್ಯವಿಲ್ಲ, ಎಂದು ವರ್ಮಾ ಹೇಳಿದ್ದಾರೆ.


ಇದನ್ನೂ ಓದಿ: 'ನಿಮಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದರೆ ಹೇಗಿರ್ತಿತ್ತು....! ಅಜಯ್ ದೇವಗನ್ ಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್


ಕೆಜಿಎಫ್ ೨ ನಂತಹ ಡಬ್ಬಿಂಗ್ ಸಿನಿಮಾ ಹಿಂದಿಯಲ್ಲಿ ಮೊದಲನೇ ದಿನವೇ 50 ಕೋಟಿ ಗಳಿಸಿರುವುದು ಹಿಂದಿ ನಟರಿಗೆ ಹೊಟ್ಟೆ ಉರಿಯುವಂತೆ ಮಾಡಿದೆ ಎಂದು ವರ್ಮಾ ಹೇಳಿದ್ದಾರೆ. "ಕಿಚ್ಚ ಸುದೀಪ್ ಸರ್ ವಾಸ್ತವ ಸತ್ಯ ಸಂಗತಿ ಏನೆಂದರೆ, ಉತ್ತರದ ತಾರೆಯರು ಅಸುರಕ್ಷಿತರಾಗಿದ್ದಾರೆ ಮತ್ತು ದಕ್ಷಿಣದ ತಾರೆಯರ ಬಗ್ಗೆ ಅಸೂಯೆ ಹೊಂದಿದ್ದಾರೆ ಏಕೆಂದರೆ ಕನ್ನಡದ ಡಬ್ಬಿಂಗ್ ಚಿತ್ರ ಕೆಜಿಎಫ್ 2  ಆರಂಭಿಕ ದಿನದಲ್ಲೇ 50 ಕೋಟಿ ರೂ ಗಳಿಸಿತ್ತು. ನಾವೆಲ್ಲರೂ ಹಿಂದಿ ಚಿತ್ರಗಳ ಮುಂಬರುವ ಆರಂಭಿಕ ದಿನಗಳನ್ನು ನೋಡಲಿದ್ದೇವೆ" ಎಂದು ಅವರು ಹೇಳಿದ್ದಾರೆ.ಇದಕ್ಕೂ ಮೊದಲು ರಾಮ್ ಗೋಪಾಲ್ ವರ್ಮಾ ಕನ್ನಡ ಮತ್ತು ತೆಲುಗು ಸಿನಿಮಾಗಳು ಹಿಂದಿಗೆ ಕೊರೊನಾ ವೈರಸ್ ರೀತಿ ತಗುಲಿವೆ ಎಂದು ಹೇಳಿಕೆ ನೀಡಿದ್ದರು, ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಜರ್ಸಿ ಸಿನಿಮಾ ವಿಫಲವಾಗಿದ್ದಕ್ಕೆ ಕೂಡ ಅವರು ಅದನ್ನು ಟ್ರೋಲ್ ಮಾಡಿದ್ದರು.


ಇದನ್ನೂ ಓದಿ: Kiccha Sudeep : ಅಜಯ್ ದೇವಗನ್ ಗೆ ಬೆವರಿಳಿಸಿದ ಕಿಚ್ಚ ಸುದೀಪ್


ಇನ್ನೊಂದೆಡೆಗೆ ಅಜೇಯ ದೇವಗನ್ ಹೇಳಿಕೆಗೆ ಈಗ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.