Kiccha Sudeep : ಅಜಯ್ ದೇವಗನ್ ಗೆ ಬೆವರಿಳಿಸಿದ ಕಿಚ್ಚ ಸುದೀಪ್

ಪ್ರತಿಕ್ರಿಯೆ ನೀಡಿದ ದೇವಗನ್, ನೀವು ನನ್ನ ಫ್ರೆಂಡ್​, ತಪ್ಪು ತಿಳಿವಳಿಕೆಗೆ ಸ್ಪಷ್ಟನೆ ನೀಡಿದ್ದಕ್ಕೆ ಥ್ಯಾಂಕ್ಸ್.

Written by - Channabasava A Kashinakunti | Last Updated : Apr 27, 2022, 09:04 PM IST
  • ಕಿಚ್ಚ ಸುದೀಪ್ ಹೇಳಿದ್ದೇನು?
  • ಅಜಯ್ ದೇವಗನ್ ಪ್ರತಿಕ್ರಿಯೆ ಇಲ್ಲಿದೆ
  • ಅಜಯ್ ದೇವಗನ್​ಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್
Kiccha Sudeep : ಅಜಯ್ ದೇವಗನ್ ಗೆ ಬೆವರಿಳಿಸಿದ ಕಿಚ್ಚ ಸುದೀಪ್  title=

ದಕ್ಷಿಣ ಭಾರತದ ಸಿನಿಮಾಗಳ ಗಳಿಕೆಯ ಮುಂದೆ ಬಾಲಿವುಡ್ ಸಿನಿಮಾಗಳ ಗಳಿಕೆಯ ಗ್ರಾಫ್ ಚಿಕ್ಕದಾಗುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ಹಲವು ಸೌತ್ ಚಿತ್ರಗಳ ಕಲೆಕ್ಷನ್ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಇತ್ತೀಚೆಗೆ, ನಟ ಕಿಚ್ಚ ಸುದೀಪ್ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಬಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದಕ್ಕೆ, ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಕೆಂಡಾಮಂಡಲವಾಗಿದ್ದಾರೆ. ಈ ಇಬ್ಬರ ನಂತರ ಮಧ್ಯ ಟ್ವಿಟ್ಟರ್ ವಾರ್ ಶುರುವಾಗಿದೆ ಎಂದರು ಸುಳ್ಳಾಗದು. 

ಕಿಚ್ಚ ಸುದೀಪ್ ಹೇಳಿದ್ದೇನು?

ದಿ ಡೆಡ್ಲಿಯಸ್ಟ್ ಗ್ಯಾಂಗ್ ಸ್ಟರ್ ಎವರ್ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದರು. ಅಲ್ಲದೆ, 'ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡದಲ್ಲಿ ತಯಾರಾಗುತ್ತಿವೆ, ಅದರ ಬಗ್ಗೆ ಅಲ್ಪಸ್ವಲ್ಪ ತಿದ್ದುಪಡಿ ಮಾಡಲು ನಾನು ಬಯಸುತ್ತೇನೆ. ಹಿಂದಿ ಇನ್ನು ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ. ಇಂದು ಬಾಲಿವುಡ್‌ನಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳು ನಡೆಯುತ್ತಿವೆ. ಆದ್ರೆ, ಅವರು ತೆಲುಗು ಮತ್ತು ತಮಿಳು ಚಿತ್ರಗಳ ರಿಮೇಕ್ ಮಾಡುತ್ತಿದ್ದಾರೆ, ಇಷ್ಟೆಲ್ಲಾ ಮಾಡಿದ್ರು ಕಷ್ಟಪಡುತ್ತಿದ್ದಾರೆ. ಇಂದು ನಾವು ಪ್ರಪಂಚ ಜನ ನೋಡುವಂತ ಸಿನಿಮಾಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಕಿಚ್ಚ ನೀಡಿದ್ದ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಅಜಯ್ ದೇವಗನ್ ಪ್ರತಿಕ್ರಿಯೆ ಇಲ್ಲಿದೆ

ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅಜಯ್ ದೇವಗನ್, ಕಿಚ್ಚ ಸುದೀಪ್ ಅವರ ಈ ಮಾತು ನಟ ಅಜಯ್ ದೇವಗನ್ ಗೆ ಸ್ವಲ್ಪವೂ ಇಷ್ಟವಾಗಲಿಲ್ಲ.- 'ಬ್ರದರ್ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದಲ್ಲಿ ನಿಮ್ಮ ಮಾತೃಭಾಷೆಯಲ್ಲಿ ನಿರ್ಮಾಣ ಮಾಡಿರುವ ಚಿತ್ರಗಳನ್ನೇಕೆ ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ಬಹುಶಃ ಮುಂದೆಯೂ ಕೂಡ ಇದು ನಮ್ಮ ರಾಷ್ಟ್ರಭಾಷೆಯಾಗಿಯೇ ಇರಲಿದೆ. ಜನ ಗಣ ಮನ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್​ ನನಗೆ ಅರ್ಥವಾಯ್ತು. ನಾನು ಕನ್ನಡದಲ್ಲಿ ಟೈಪ್ ಮಾಡಿದ್ರೆ ಪರಿಸ್ಥಿತಿ ಏನಾಗಬಹುದು? ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ, ಹಿಂದಿ ಕಲಿತಿದ್ದೇವೆ’ ನಾವೂ ಭಾರತಕ್ಕೆ ಸೇರಿದವರಲ್ಲವೇ ಸಾರ್ ? ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಅಜಯ್ ದೇವಗನ್​ಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್

'ನನ್ನ ಹೇಳಿಕೆ ಕೆರಳಿಸುವ, ನೋಯಿಸುವಂಥದ್ದಲ್ಲ, ಈ ವಿಷಯದಲ್ಲಿ ಚರ್ಚೆ ಹುಟ್ಟುಹಾಕುವ ಉದ್ದೇಶವೂ ಇಲ್ಲ. ನಾನು ದೇಶದ ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ, ನನ್ನ ಹೇಳಿಕೆ ಬೇರೆಯದ್ದೇ ಅರ್ಥದಲ್ಲಿತ್ತು. ನನ್ನ ಹೇಳಿಕೆ ನಿಮಗೆ ಬೇರೆಯದ್ದೇ ರೀತಿಯೇ ತಲುಪಿದೆ. ಈ ವಿಚಾರವನ್ನು ಇಲ್ಲಿಗೆ ಮುಕ್ತಾಯಗೊಳಿಸೋಣ. ನಿಮ್ಮ ಮೇಲೆ ಪ್ರೀತಿ, ಗೌರವವಿದೆ, ಶೀಘ್ರ ಸಿಗೋಣ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಸರಣಿ ಟ್ವೀಟ್ ಗಳ ಮೂಲಕ ಅಜಯ್ ದೇವಗನ್ ಮಾಡಿದ ಟ್ವೀಟ್ ಗೆ ಸುದೀಪ್ ಸ್ಪಷ್ಟನೆ ನೀಡಿದರು.  

ಕಿಚ್ಚನಿಗೆ ಥಾಕ್ಸ್ ಹೇಳಿದ  ಅಜಯ್ ದೇವಗನ್​

ಪ್ರತಿಕ್ರಿಯೆ ನೀಡಿದ ದೇವಗನ್, ನೀವು ನನ್ನ ಫ್ರೆಂಡ್​, ತಪ್ಪು ತಿಳಿವಳಿಕೆಗೆ ಸ್ಪಷ್ಟನೆ ನೀಡಿದ್ದಕ್ಕೆ ಥ್ಯಾಂಕ್ಸ್. ಇಡೀ ಚಿತ್ರೋದ್ಯಮ ಒಂದೇ ಎಂದು ನಾನು ನಂಬಿದ್ದೇನೆ. ಎಲ್ಲ ಭಾಷೆಗಳನ್ನು ನಾವು ಗೌರವಿಸಬೇಕು. ಎಲ್ಲರೂ ನಮ್ಮ ಭಾಷೆ ಗೌರವಿಸಬೇಕೆಂದು ನಿರೀಕ್ಷಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News