Shah Rukh Khan World 4th Richest Actors: ಬಾಲಿವುಡ್ ಕಿಂಗ್ ಎಂದು ಕರೆಸಿಕೊಳ್ಳುವ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ ಚಿತ್ರದ ಕುರಿತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ವರದಿಯೊಂದು ಹೊರಬಿದ್ದಿದ್ದು, ಅದರಲ್ಲಿ ನಟ ಶಾರುಖ್ ಖಾನ್ ವಿಶ್ವದ ನಾಲ್ಕನೇ ಶ್ರೀಮಂತ ನಟ ಎಂದು ಬಣ್ಣಿಸಲಾಗುತ್ತಿದೆ. ಅವರ ನಿವ್ವಳ ಮೌಲ್ಯ ಕೇಳಿದ್ರೆ ಎಲ್ಲರೂ ಅಚ್ಚರಿ ಪಡುವಂತಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದರಲ್ಲಿ ವಿಶ್ವದ 8 ಶ್ರೀಮಂತ ನಟರ ಬಗ್ಗೆ ಹೇಳಲಾಗಿದ್ದು, ಇದರಲ್ಲಿ ಶಾರುಖ್ ಖಾನ್ ಹೆಸರೂ ಸೇರಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಕಿಂಗ್ ಖಾನ್. ಈ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದರ ಪ್ರಕಾರ ಕಿಂಗ್ ಖಾನ್ 770 ಮಿಲಿಯನ್ ಡಾಲರ್ ಗೂ ಹೆಚ್ಚು ಅಂದರೆ 6 ಸಾವಿರದ 300 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ.


ಇದನ್ನೂ ಓದಿ : ಲಂಡನ್ ನಲ್ಲಿ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದ ತುಪ್ಪದ ಬೆಡಗಿ ರಾಗಿಣಿ


ವಿಶ್ವದ ಶ್ರೀಮಂತ ನಟರು:


ಜೆರ್ರಿ ಸೀನ್‌ಫೆಲ್ಡ್: $1 ಬಿಲಿಯನ್


ಟೈಲರ್ ಪೆರ್ರಿ: $1 ಬಿಲಿಯನ್


ಡ್ವೇನ್ ಜಾನ್ಸನ್: $800 ಮಿಲಿಯನ್


ಶಾರುಖ್ ಖಾನ್: $770 ಮಿಲಿಯನ್


ಟಾಮ್ ಕ್ರೂಸ್: $620 ಮಿಲಿಯನ್


ಜಾಕಿ ಚಾನ್: $520 ಮಿಲಿಯನ್


ಜಾರ್ಜ್ ಕ್ಲೂನಿ: $500 ಮಿಲಿಯನ್


ರಾಬರ್ಟ್ ಡಿ ನಿರೋ: $500 ಮಿಲಿಯನ್


ಜೆರ್ರಿ ಸೀನ್‌ಫೆಲ್ಡ್, ಟೈಲರ್ ಪೆರ್ರಿ, ಶಾರುಖ್ ಖಾನ್, ಟಾಮ್ ಕ್ರೂಸ್, ಜಾಕಿ ಚಾನ್, ಜಾರ್ಜ್ ಕ್ಲೂನಿ, ರಾಬರ್ಟ್ ಡಿ ನಿರೋ ಈ ಪಟ್ಟಿಯಲ್ಲಿದ್ದಾರೆ. ಜೆರ್ರಿ ಸೀನ್‌ಫೆಲ್ಡ್ $1 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಶಾರುಖ್ ಖಾನ್ ವಿಷಯಕ್ಕೆ ಬಂದರೆ, ಅವರ ಜನಪ್ರಿಯತೆ ಪ್ರಪಂಚದಾದ್ಯಂತ ಹರಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಲಕ್ಷಾಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಿದ್ದಾರೆ. 


ಇದನ್ನೂ ಓದಿ : Haripriya Vasishta simha : ಸಿಂಹಪ್ರಿಯಾ ಮದುವೆ ಡೇಟ್‌ ಅನೌಸ್ಸ್‌.. 26 ರಂದು ಅದ್ಧೂರಿ ಮದುವೆ..!


ಇತ್ತೀಚೆಗಷ್ಟೇ ಶಾರುಖ್ ಖಾನ್ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದ್ದರು. ಇದರಲ್ಲಿ, ಒಬ್ಬ ಬಳಕೆದಾರರು ಅವರನ್ನು ನೀವು ತಿಂಗಳಿಗೆ ಎಷ್ಟು ಸಂಪಾದಿಸುತ್ತೀರಿ? ಎಂದು ಕೇಳಿದ್ದರು. ಈ ಬಗ್ಗೆ ಕಿಂಗ್ ಖಾನ್ ಕೊಟ್ಟ ಉತ್ತರ ತಿಳಿದರೆ ನಿಮಗೆ ಖುಷಿಯಾಗುತ್ತೆ. ನಾನು ಪ್ರತಿದಿನ ಅಪಾರ ಪ್ರೀತಿಯನ್ನು ಸಂಪಾದಿಸುತ್ತೇನೆ ಎಂದು ಅವರು ಹೇಳಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.