Haripriya Vasishta simha : ಸಿಂಹಪ್ರಿಯಾ ಮದುವೆ ಡೇಟ್‌ ಅನೌಸ್ಸ್‌.. 26 ರಂದು ಅದ್ಧೂರಿ ಮದುವೆ..!

ಗುಟ್ಟಾಗಿ ಎಂಗೆಜ್‌ಮೆಂಟ್‌ ಮಾಡಿಕೊಂಡು ಪ್ಯಾನ್ಸ್‌ಗೆ ಸರ್ಪ್ರೈಸ್‌ ಕೊಟ್ಟಿದ್ದ ಸ್ಯಾಂಡಲ್​ವುಡ್​ನ​ ಕ್ಯೂಟ್‌ ಜೋಡಿ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಈಗಾಗಲೇ ಮದುವೆ ದಿನಾಂಕ ಫಿಕ್ಸ್ ಆಗಿದೆ. ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಜೋಡಿ ರೆಡಿಯಾಗಿದ್ದು, ಜನವರಿ 26 ಸಿಂಹಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Written by - Krishna N K | Last Updated : Jan 11, 2023, 09:13 PM IST
  • ಎಂಗೆಜ್‌ಮೆಂಟ್‌ ಮಾಡಿಕೊಂಡು ಪ್ಯಾನ್ಸ್‌ಗೆ ಸರ್ಪ್ರೈಸ್‌ ಕೊಟ್ಟಿದ್ದ ಸ್ಯಾಂಡಲ್​ವುಡ್​ನ​ ಕ್ಯೂಟ್‌ ಜೋಡಿ ಸಿಂಹಪ್ರಿಯಾ
  • ಮದುವೆ ದಿನಾಂಕ್‌ ರಿವೀಲ್‌ ಮಾಡಿದ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ
  • ಜನವರಿ 26 ಮದುವೆ, 28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ
Haripriya Vasishta simha : ಸಿಂಹಪ್ರಿಯಾ ಮದುವೆ ಡೇಟ್‌ ಅನೌಸ್ಸ್‌.. 26 ರಂದು ಅದ್ಧೂರಿ ಮದುವೆ..! title=

Haripriya Vasishta simha marriage : ಗುಟ್ಟಾಗಿ ಎಂಗೆಜ್‌ಮೆಂಟ್‌ ಮಾಡಿಕೊಂಡು ಪ್ಯಾನ್ಸ್‌ಗೆ ಸರ್ಪ್ರೈಸ್‌ ಕೊಟ್ಟಿದ್ದ ಸ್ಯಾಂಡಲ್​ವುಡ್​ನ​ ಕ್ಯೂಟ್‌ ಜೋಡಿ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಈಗಾಗಲೇ ಮದುವೆ ದಿನಾಂಕ ಫಿಕ್ಸ್ ಆಗಿದೆ. ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಜೋಡಿ ರೆಡಿಯಾಗಿದ್ದು, ಜನವರಿ 26 ಸಿಂಹಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಸ್ಯಾಂಡಲ್‌ವುಡ್‌ ಕಡಕ್‌ ನಟ ವಸಿಷ್ಠ ಸಿಂಹ ಹಾಗೂ ಕ್ಯೂಟ್‌ ಬೆಡಗಿ ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಎಂಗೇಜ್​ಮೆಂಟ್ ಬಳಿಕ ಇದೇ ಮೊದಲ ಸುದ್ದಿಗೋಷ್ಠಿ ನಡೆಸಿ ಮದುವೆ ಬಗ್ಗೆ ಅಧಿಕೃತವಾಗಿ ಸ್ಟಾರ್‌ ಜೋಡಿಗಳು ಘೋಷಣೆ ಮಾಡಿದ್ದಾರೆ. ಮೈಸೂರಿನಲ್ಲಿ ಜನವರಿ 26ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅದ್ಧೂರಿ ವಿವಾಹ ಜರುಗಲಿದೆ. 28ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rakul Preet Singh : ʼಸೆಕ್ಸ್‌ ಎಜುಕೇಶನ್ʼ ಹೇಳಿಕೊಡ್ತಾರಂತೆ ನಟಿ ರಕುಲ್‌..! ಪಾಠ ಕೇಳೋಕೆ ರೆಡಿನಾ..

ರಾಜಧಾನಿಯ ಕೆ.ಸಿ ಪ್ಯಾಲೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಜೋಡಿ, ತುಂಬಾ ಅದ್ಧೂರಿಯಾಗಿ ಮದುವೆ ಆಗುತ್ತಿದ್ದೇವೆ. ಜನವರಿ 26ಕ್ಕೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ನಡೆಯುತ್ತದೆ. 28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಇರುತ್ತೆ‌ ಎಂದು ತಿಳಿಸಿದ್ದಾರೆ. ಅಲ್ಲದೆ, ಎರಡು ತಿಂಗಳಿಂದ ಸತತವಾಗಿ ನಾವು ಸಿಕ್ಕಿಲ್ಲ ಅದಕ್ಕೆ ಸಾರಿ ಅಂದ್ರು. 

ಲವ್ ಮ್ಯಾರೇಜ್ ಆಗಿದ್ದು, ಈಗ ಅರೇಂಜ್ ಮ್ಯಾರೇಜ್ ಆಗಿದೆ. ನಾವು ಹೇಳದೆ ಹೋದ್ರು ನಿಮಗೆ ಗೊತ್ತಾಗಿದೆ, ಆಗ ನಾವು ಏನ್ ಹೇಳೋದು. ಒಮ್ಮೆ ಹರಿಪ್ರಿಯಾ ನಮ್ಮ ಸೆಟ್‌ಗೆ ಬಂದಿದ್ರು, 2016 ರಲ್ಲಿ ಒಂದು ಸಿನಿಮಾ ಪ್ರೀಮಿಯರ್ ಅಲ್ಲಿ ಭೇಟಿ ಅಗಿದ್ವಿ, ಹರಿಪ್ರಿಯಾಗೆ ನಾನು ಅಭಿಮಾನಿ, ಎಷ್ಟು ಮುದ್ದಾಗಿದ್ದಾರೆ ಅಲ್ವಾ ಅಂತ ಹೇಳ್ತಿದ್ದೇ, ಅವ್ರೆ ಈಗ ನನ್ನ ಬಾಳ ಸಂಗಾತಿ ಆಗ್ತಿದ್ದಾರೆ ಅಂತ ಕ್ಯೂಟ್‌ ಲವ್‌ ಹೇಳಿದ್ರು ವಸಿಷ್ಠ.

ಇದನ್ನೂ ಓದಿ: ಮೈಸೂರು ಹುಡುಗ ಆದಿಲ್‌ ಕೈಹಿಡಿದ ರಾಖಿ ಸಾವಂತ್‌..! ಫೋಟೋಸ್‌ ವೈರಲ್‌

ಹರಿಪ್ರಿಯಾ ಮಾತನಾಡಿ, ಮೊದಲು ಸಿನಿಮಾ ಬಗ್ಗೆ ಮಾತನಾಡುವಾಗ ಟೆನ್ಷನ್ ಇತ್ತು, ಈಗ ಈ ವಿಷ್ಯ ಹೇಳೋಕೆ ಖುಷಿ ಆಗ್ತಿದೆ. ನಮ್ಮ ಪ್ರೀತಿ, ಎಂಗೇಜ್ ಮೆಂಟ್ ಬಗ್ಗೆ ಹೇಳೋಕು ಮುಂಚೇನೆ ಎಲ್ಲಾ ಕಡೆ ಸುದ್ದಿಯಾಯ್ತು. ಏರ್ ಪೋರ್ಟ್ ಪೋಟೋ, ಎಂಗೇಜ್ ಮೆಂಟ್ ಫೊಟೊ, ನಾಯಿ‌ ಮರಿದು, ಎಲ್ಲಾದು ನೋಡಿ ಶಾಕ್‌ ಆದೆ.  ನಾಯಿ ಮರಿ ಕೋಡೋದಕ್ಕೆ ಮುಂಚೇನೆ ಪ್ರೀತಿಯಲ್ಲಿ ಇದ್ವಿ, 2016 ರಿಂದ ನಮ್ಮಿಬ್ರ ಸ್ನೇಹ ಇತ್ತು, ಗೋಧಿ ಬಣ್ಣ ಸಿನಿಮಾ ನೋಡಿ ಅವ್ರು ನನಗೆ ತುಂಬಾ ಚನ್ನಾಗಿ ಮಾಡಿದ್ದೀರ ಅಂತ ಹೇಳಿದ್ರು, ನನಗಿಂತ ಸೀನಿಯರ್ ಅವ್ರು, ಅವಾಗ ನನಗೆ ಖುಷಿ‌ ಆಯ್ತು, ಅಲ್ಲಿಂದ ನಮ್ಮ ಸ್ನೇಹ ಶುರುವಾಯ್ತು ಅಂತ ಹರಿಪ್ರಿಯಾ ಪ್ರೇಮ ಕಥೆ ಹೇಳಿದ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News