ನವದೆಹಲಿ: ಕಣ್ಸನ್ನೆ ಕುವರಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ 'ಶ್ರೀದೇವಿ ಬಂಗ್ಲೋ' ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ದಿವಂಗತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಚಿತ್ರ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. 


COMMERCIAL BREAK
SCROLL TO CONTINUE READING

'ಶ್ರೀದೇವಿ ಬಂಗ್ಲೋ' ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಶ್ರೀದೇವಿ ಪಾತ್ರದಲ್ಲಿ ಏಕಾಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಟೀಸರ್ ಅಂತ್ಯದಲ್ಲಿ ಬಾತ್ ಟಬ್'ನಲ್ಲಿ ಆಕೆ ಮುಳುಗಿ ಜೀವನ ಅಂತ್ಯಗೊಳ್ಳುವ ದೃಶ್ಯವನ್ನು ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀದೇವಿಯ ಪತಿ ಹಾಗೂ ಚಲನಚಿತ್ರ ನಿರ್ದೇಶಕ ಬೋನಿ ಕಪೂರ್ ಚಿತ್ರ ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ.



"ಬೋನಿ ಕಪೂರ್ ಅವರು ಕಳುಹಿಸಿದ್ದ ಲೀಗಲ್ ನೋಟಿಸ್ ಅನ್ನು ಕಳೆದ ವಾರ ದೊರೆತಿದೆ. ನಾವು ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ. ನನ್ನ ಚಿತ್ರ ಒಂದು ಸಸ್ಪೆನ್ಸ್ ಥ್ರಿಲ್ಲರ್ ಎಂದು ನಾನು ಈಗಾಗಲೇ ಹೇಳಿದ್ದೇನೆ. ಅಲ್ಲದೆ, ಶ್ರೀದೇವಿ ಎಂಬುದು ಒಂದು ಸಾಮಾನ್ಯ ಹೆಸರು ಎಂಬುದನ್ನು ಬೋನಿ ಕಪೂರ್ ಅವರಿಗೆ ತಿಳಿಸಿದ್ದೇನೆ. ನನ್ನ ಚಿತ್ರದ ಪಾತ್ರವೂ ಸಹ ಓರ್ವ ನಟಿಯದ್ದೇ ಆಗಿದೆ" ಎಂದು ಚಿತ್ರದ ನಿರ್ದೇಶಕ ಮಾಂಬುಲಿ Cinestaan.com ಗೆ ಹೇಳಿದ್ದಾರೆ.


ಮತ್ತೊಂದೆಡೆ, ಈ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ, 'ಶ್ರೀದೇವಿ ಬಂಗ್ಲೋ' ನಟಿ ಶ್ರೀದೇವಿ ಅವರ ಜೀವನಾಧಾರಿತ ಎಂಬುದನ್ನು ಒಪ್ಪಿಕೊಳ್ಳಲು ಪ್ರಿಯಾ ಪ್ರಕಾಶ್ ವಾರಿಯರ್ ನಿರಾಕರಿಸಿದ್ದಾರೆ.