ನವೆಂಬರ್: ಸೆಪ್ಟೆಂಬರ್ 9ರ ದಿನವು ರಣಬೀರ್ ಕಪೂರ್ ಅಭಿಮಾನಿಗಳಿಗೆ ಇನ್ನಿಲ್ಲದ ಸಂತೋಷ ತಂದಿತ್ತು. ಕಳೆದ ಹಲವು ವರ್ಷಗಳಿಂದ ತಯಾರಾಗುತ್ತಿದ್ದ ‘ಬ್ರಹ್ಮಾಸ್ತ್ರ’ ಚಿತ್ರ ಕೊನೆಗೂ ತೆರೆಕಂಡಿತು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬಿಗ್ ಬಜೆಟ್ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಹಿಂದಿ ಸೇರಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಯ್ತು. ಸದ್ಯ ಯಶಸ್ವಿಯಾಗಿ ಪದರ್ಶನವಾಗುತ್ತಿರುವ ಈ ಚಿತ್ರದ ಕಲೆಕ್ಷನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಚಿತ್ರ ಪಕ್ಕಾ ಫ್ಲಾಪ್ ಆಗಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಫ್ಲಾಪ್‌ನಿಂದ ಪಿವಿಆರ್ ಮತ್ತು ಇತರ ಹೂಡಿಕೆದಾರರು 800 ಕೋಟಿ  ರೂ.ಗಳಷ್ಟು ದೊಡ್ಡ ನಷ್ಟ ಅನುಭವಿಸಿದ್ದಾರೆಂದು ಅನೇಕ ಪೋಸ್ಟ್‌ಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

800 ಕೋಟಿ ನಷ್ಟ!?


‘ಬ್ರಹ್ಮಾಸ್ತ್ರ’ ತುಂಬಾ ಶ್ರಮದ ನಂತರ ಬಿಡುಗಡೆಯಾಗಿದೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವು ಮೊದಲ ದಿನದಿಂದ ಬಿಡುಗಡೆಯಾದ 3ನೇ ದಿನದವರೆಗೆ 75 ಕೋಟಿ ರೂ. ಗಳಿಸಿದೆ. ಆದರೆ ಹೂಡಿಕೆದಾರರಿಗೆ 800 ಕೋಟಿ ರೂ. ನಷ್ಟವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇತ್ತೀಚೆಗೆ ಪಿವಿಆರ್‌ನ ಸಿಒ ಕಮಲ್ ಗಿಯಾಂಚಂದಾನಿ ಈ ಬಗ್ಗೆ ಸತ್ಯವನ್ನು ಹೇಳಿದ್ದಾರೆ.


ಇದನ್ನೂ ಓದಿ: ಪ್ರೇಕ್ಷಕರ ‘ದಿಲ್ ಪಸಂದ್’ ಮಾಡಲು ಬರ್ತಿದ್ದಾರೆ ಡಾರ್ಲಿಂಗ್ ಕೃಷ್ಣ


PVRನ CO ಹೇಳಿದ ಸತ್ಯವೇನು..?


ವಾಸ್ತವವಾಗಿ ಕಮಲ್ ಗಿಯಾಂಚಂದಾನಿ ಕೆಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ಇಲ್ಲಿ ಅವರು ಚಿತ್ರದಿಂದ ಆದ ನಷ್ಟ ಅಥವಾ ಲಾಭದ ಬಗ್ಗೆ ಹೇಳಿದ್ದಾರೆ. ಮಾಧ್ಯಮಗಳಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರದ ಬಗ್ಗೆ ನೆಗೆಟಿವ್ ಸುದ್ದಿಗಳು ಬರುತ್ತಿರುವುದು ನನಗೆ ಅಚ್ಚರಿ ತಂದಿದೆ ಎನ್ನುತ್ತಾರೆ ಎಂದಿದ್ದಾರೆ. ದ್ವೇಷವನ್ನು ಹರಡಲು ಬುದ್ದಿಹೀನವಾಗಿ ಅಥವಾ ಉದ್ದೇಶಪೂರ್ವಕವಾಗಿ ಈ ರೀತಿ ಬರೆಯಲಾಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕಾಗಿ ನಾವು ಅಗತ್ಯ ಸಂಗತಿಗಳನ್ನು ನಿರ್ಲಕ್ಷಿಸುವುದಿಲ್ಲ. ಪಿವಿಆರ್ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ‘ಬ್ರಹ್ಮಾಸ್ತ್ರ’ 8.18 ಕೋಟಿ ರೂ. ವ್ಯವಹಾರ ಮಾಡಿದೆ ಅಂತಾ ಅವರು ಹೇಳಿದ್ದಾರೆ.


ಚಿತ್ರ ಉತ್ತಮ ಬ್ಯುಸಿನೆಸ್ ಮಾಡುತ್ತದೆ


‘ಬ್ರಹ್ಮಾಸ್ತ್ರ’ದ ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನಷ್ಟು ಹೆಚ್ಚಲಿದೆ ಎಂದು ಗಿಯಾಂಚಂದಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದರೆ, ಮೊದಲ 3 ದಿನಗಳಲ್ಲಿ ಚಿತ್ರವು 100 ಕೋಟಿ ರೂ. ಗಡಿ ದಾಟುತ್ತದೆ ಎಂದು ಕಮಲ್ ಬರೆದುಕೊಂಡಿದ್ದಾರೆ. ಆದರೆ ಅನೇಕ ನೆಟಿಜನ್‍ಗಳು ಮಾತ್ರ ಈ ಚಿತ್ರ ನಿರೀಕ್ಷಿಸಿದಂತೆ ಬಾಕ್ಸ್ ಆಫೀಸ್‍ನಲ್ಲಿ ಯಶಸ್ವಿಯಾಗಿಲ್ಲವೆಂದು ಹೇಳಿದ್ದಾರೆ.


ಇದನ್ನೂ ಓದಿ: Viral Video: ‘ಸೈಮಾ’ ಸಮಾರಂಭಕ್ಕೆ ಬಂದಿದ್ದ ರಣವೀರ್ ಸಿಂಗ್‌ಗೆ ಕಪಾಳಮೋಕ್ಷ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.