Viral Video: ‘ಸೈಮಾ’ ಸಮಾರಂಭಕ್ಕೆ ಬಂದಿದ್ದ ರಣವೀರ್ ಸಿಂಗ್‌ಗೆ ಕಪಾಳಮೋಕ್ಷ!

ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

Written by - Puttaraj K Alur | Last Updated : Sep 12, 2022, 12:43 PM IST
  • ‘ಸೈಮಾ’ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್‍ಗೆ ಕಪಾಳಮೋಕ್ಷ
  • ರೆಡ್ ಕಾರ್ಪೆಟ್ ಸಂದರ್ಭದಲ್ಲಿ ಆಕಸ್ಮಿಕವಾಗಿ ನಟನ ಕೆನ್ನೆಗೆ ಬಾರಿಸಿದ ಅಭಿಮಾನಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ‘ಸೈಮಾ’ ಸಮಾರಂಭಕ್ಕೆ ಬಂದಿದ್ದ ರಣವೀರ್ ಸಿಂಗ್‌ಗೆ ಕಪಾಳಮೋಕ್ಷ!   title=
ರಣವೀರ್ ಸಿಂಗ್‍ಗೆ ಕಪಾಳಮೋಕ್ಷ

ಬೆಂಗಳೂರು: ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಚಿತ್ರರಂಗದ ನಟ-ನಟಿಯರು, ನಿರ್ಮಾಪಕರು-ನಿರ್ದೇಶಕರು ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ.ಪುನೀತ್ ರಾಜ್‍ ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.   

ಶನಿವಾರ ಹಾಗೂ ಭಾನುವಾರ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು. ಈ 2 ದಿನಗಳ ಕಾರ್ಯಕ್ರಮದಲ್ಲಿ ಮೊದಲನೇ ದಿನ ಕನ್ನಡ ಹಾಗೂ ತೆಲುಗು ಚಿತ್ರಗಳ ಪ್ರಶಸ್ತಿ ಪ್ರದಾನ ನಡೆದರೆ, 2ನೇ ದಿನ ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೊದಲನೇ ದಿನ ಕನ್ನಡ ಮತ್ತು ತೆಲುಗು ನಟರ ಜೊತೆಗೆ ಬಾಲಿವುಡ್ ನಟ ರಣವೀರ್ ಸಿಂಗ್‍ ಕಾಣಿಸಿಕೊಂಡು ಮಿಂಚಿದರು. ವೈಟ್ ಅಂಡ್ ವೈಟ್ ಸೂಟ್ ಧರಿಸಿ ‘ಸೈಮಾ’ ಕಾಣಿಸಿಕೊಂಡ ರಣವೀರ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಇದೇ ವೇಳೆ ನಟನಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಪ್ರೀತಿಸಲ್ಪಡುವ ಹಿಂದಿ ನಟನೆಂಬ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಖತ್ ಮಿಂಚಿದ ಹಿಂದಿ ನಟನ ಕೆನ್ನೆಗೆ ಏಟು ಬಿದ್ದಿರುವ ಘಟನೆ ನಡೆದಿದೆ.

ಇದನ್ನೂ ಓದಿ: Ramesh Aravind : ನಟ ರಮೇಶ್​ ಅರವಿಂದ್​ ಬರೆದ ಹೊಸ ಪುಸ್ತಕ ಬಿಡುಗಡೆ!

ಕಾರ್ಯಕ್ರಮದ ಆರಂಭದಲ್ಲೇ ಕಪಾಳಮೋಕ್ಷ!

ವರದಿಗಳ ಪ್ರಕಾರ ‘ಸೈಮಾ’ ಕಾರ್ಯಕ್ರಮದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಟ ರಣವೀರ್ ಸಿಂಗ್ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನ ಜೊತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ತಳ್ಳಾಟ-ನೂಕಾಟ ನಡೆದು ಅಕಸ್ಮಿಕವಾಗಿ ರಣವೀರ್ ಸಿಂಗ್ ಕೆನ್ನೆಗೆ ಏಟು ಬಿದ್ದಿದೆ ಎನ್ನಲಾಗಿದೆ. ರೆಡ್ ಕಾರ್ಪೆಟ್ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ರಣವೀರ್ ಸಿಂಗ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ಅಭಿಮಾನಿಯೊಬ್ಬ ಆಕಸ್ಮಿಕವಾಗಿ ರಣವೀರ್ ಮುಖಕ್ಕೆ ಹೊಡೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ರಣವೀರ್ ಸಿಂಗ್‍ಗೆ ಯಾವುದೇ ರೀತಿಯ ಅಪಾಯವುಂಟಾಗಿಲ್ಲ. ಘಟನೆಯಿಂದ ಕೊಂಚ ಕಸಿವಿಸಿಗೊಂಡ ರಣವೀರ್ ಅಭಿಮಾನಿಗಳ ಕೈಯಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ವರ್ಸಟೈಲ್ ನಟಿ ಎಂದು ಕರೆಸಿಕೊಳ್ಳುವಾಸೆ, ‘ಗಾಳಿಪಟ 2’ ಬೆಡಗಿ ವೈಭವಿ ಶಾಂಡಿಲ್ಯ ಮನದ ಮಾತು

ಶಿವಣ್ಣ ಮತ್ತು ವಿಜಯ್ ಜೊತೆ ರಣವೀರ್ ಡ್ಯಾನ್ಸ್

‘ಸೈಮಾ’ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ವೇದಿಕೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಮೂವರು ನಟರು ಕುಣಿದು ಕುಪ್ಪಳಿಸಿರೋ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News