Freddie Mercury: 18 ಲಕ್ಷಕ್ಕೆ ಹರಾಜಾಯ್ತು ಈ ಖ್ಯಾತ ಗಾಯಕನ ಚಡ್ಡಿ.!
Freddie Mercury: ಖ್ಯಾತ ವ್ಯಕ್ತಿಗಳ ಯಾವುದೇ ವಸ್ತುಗಳನ್ನು ಹರಾಜಿಗಿಟ್ಟರು ಸಹ ಅದು ಲಕ್ಷಾಂತರ ರೂಪಾಯಿಗೆ ಮಾರಟವಾಗುತ್ತದೆ. ಪ್ರಸಿದ್ಧ ಕ್ರೀಡಾಪಟುಗಳು, ಹೀರೋಗಳು, ನಟರ ವಸ್ತುಗಳನ್ನು ಹರಾಜಿಗೆ ಇಟ್ಟಿರುತ್ತಾರೆ, ಅವು ಕೋಟಿಗಟ್ಟಲೇ ಹಣಕ್ಕೆ ಹರಾಜಾಗುತ್ತವೆ.
Freddie Mercury: ಬ್ರಿಟಿಷ್ ಗಾಯಕ ಮತ್ತು ಗೀತರಚನೆಕಾರ ಫ್ರೆಡ್ಡಿ ಮರ್ಕ್ಯುರಿ ಅವರ 1980 ರ ಬರ್ಮಿಂಗ್‌ಹ್ಯಾಮ್ ಗಿಗ್‌ನಲ್ಲಿ ಧರಿಸಿದ್ದ ಚಿಕ್ಕ ಹಾಟ್‌ಪ್ಯಾಂಟ್‌ಗಳು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದ ಹರಾಜಿನಲ್ಲಿ 18000 ಪೌಂಡ್‌ಗಳಿಗೆ (ರೂ 18,37,658) ಮಾರಾಟವಾಯಿತು ಎಂದು ಬಿಬಿಸಿ ವರದಿ ಮಾಡಿದೆ. ಫ್ರೆಡ್ಡಿ ಮರ್ಕ್ಯುರಿ ರಾಕ್ ಬ್ಯಾಂಡ್ ಕ್ವೀನ್‌ನ ಪ್ರಮುಖ ಗಾಯಕರಾಗಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು.
ಇದನ್ನೂ ಓದಿ: ಕಿಚ್ಚನ ಪ್ರಚಾರದ ವಿರುದ್ಧ ಅವಹೇಳನ ಆರೋಪ: ರೊಚ್ಚಿಗೆದ್ದ ಸುದೀಪ್ ಫ್ಯಾನ್ಸ್
ಹಲವಾರು ಪ್ರದರ್ಶನಗಳಲ್ಲಿ ಗಾಯಕ ಈ ಉಡುಪನ್ನು ಧರಿಸಿದ್ದರು ಮತ್ತು ಕ್ವೀನ್ಸ್ ಫ್ಯಾನ್ ಕ್ಲಬ್ ಕಾರ್ಯದರ್ಶಿ ಜಾಕಿ ಗನ್ ಅವರು 1992 ರ ಜೀವನಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹರಾಜು ಮನೆಯ ಪ್ರಕಾರ, ಡಿಸೆಂಬರ್ 6, 1980 ರಂದು ಬರ್ಮಿಂಗ್‌ಹ್ಯಾಮ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಫ್ರೆಡ್ಡಿ ಮರ್ಕ್ಯುರಿ ಈ ಚರ್ಮದ ಶಾರ್ಟ್ಸ್ ಅನ್ನು ಧರಿಸಿದ್ದರು.
[[{"fid":"302881","view_mode":"default","fields":{"format":"default","field_file_image_alt_text[und][0][value]":"Freddie Mercury","field_file_image_title_text[und][0][value]":"Freddie Mercury"},"type":"media","field_deltas":{"1":{"format":"default","field_file_image_alt_text[und][0][value]":"Freddie Mercury","field_file_image_title_text[und][0][value]":"Freddie Mercury"}},"link_text":false,"attributes":{"alt":"Freddie Mercury","title":"Freddie Mercury","class":"media-element file-default","data-delta":"1"}}]]
70-80ರ ದಶಕದ ಖ್ಯಾತ ಬ್ರಿಟೀಷ್ ಗಾಯಕ ಹಾಗೂ ಗೀತೆ ರಚನೆಕಾರ ಫ್ರೆಡ್ಡಿ ಮರ್ಕ್ಯುರಿ ಅವರ ಕೆಲವು ವಸ್ತುಗಳನ್ನು ಹರಾಜಿಗೆ ಇಡಲಾಗಿತ್ತು, ಈ ವೇಳೆ ಅವರ ಹಾಟ್‌ಪ್ಯಾಂಟ್ 18 ಲಕ್ಷಕ್ಕೆ ಮಾರಾಟವಾಗಿದೆ. ಮರ್ಕ್ಯುರಿ ರಾಕ್ ಬ್ಯಾಂಡ್ ಕ್ವೀನ್‌ನ ಪ್ರಮುಖ ಗಾಯಕರಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ. ಫ್ರೆಡ್ಡಿ ಮರ್ಕ್ಯುರಿ ಅವರು 1980ರ ಬರ್ಮಿಂಗ್ ಹ್ಯಾಮ್ ಸಂಗೀತ ಕಚೇರಿಯಲ್ಲಿ ಇದನ್ನು ಧರಿಸಿದ್ದರು. ಕಪ್ಪು ಲೆದರ್ ಹಾಟ್‌ಪ್ಯಾಂಟ್ ಇದಾಗಿದೆ.
ಇದನ್ನೂ ಓದಿ: ಸಮಂತಾ ಆಸ್ಪತ್ರೆಯಲ್ಲಿರುವ ಫೋಟೋ ಕಂಡು ಆತಂಕಗೊಂಡ ಫ್ಯಾನ್ಸ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.