BS Rammurthy: ರಂಗಸಂಪದ ತಂಡದ ಹಿರಿಯ ನಟ ಬಿ.ಎಸ್.ರಾಮಮೂರ್ತಿ ವಿಧಿವಶ
BS Rammurthy passed away: ರಂಗಸಂಪದ ರಂಗತಂಡದ ಎಲ್ಲಾ ನಾಟಕಗಳಲ್ಲಿಯೂ ಬಿ.ಎಸ್.ರಾಮಮೂರ್ತಿಯವರು ತಮ್ಮ ಕ್ರಿಯಾಶೀಲ ನಟನೆಯ ಮೂಲಕ ಜನಮನ ಸೆಳೆದಿದ್ದರು.
ಬೆಂಗಳೂರು: ರಂಗಸಂಪದ ತಂಡದ ಅದ್ಭುತ ನಟ ಬಿ.ಎಸ್.ರಾಮಮೂರ್ತಿಯವರು ವಿಧಿವಶರಾಗಿದ್ದಾರೆ. ರಂಗಸಂಪದ ರಂಗತಂಡದ ಎಲ್ಲಾ ನಾಟಕಗಳಲ್ಲಿಯೂ ರಾಮಮೂರ್ತಿಯವರು ತಮ್ಮ ಕ್ರಿಯಾಶೀಲ ನಟನೆಯ ಮೂಲಕ ಜನಮನ ಸೆಳೆದಿದ್ದರು.
ಗೋವಾ ಫಿಲಂ ಫೆಸ್ಟಿವಲ್ ಮುಗಿಸಿ ಬಂದ ತಕ್ಷಣ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆಂದು ತಿಳಿದುಬಂದಿದೆ. ರಾಮಮೂರ್ತಿಯವರು ಮೃತಪಟ್ಟಿರುವುದು ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟವಾದಂತಾಗಿದೆ.
ಇದನ್ನೂ ಓದಿ: "ದುಡ್ಡಿಗಾಗಿ ಆದಿವಾಸಿ ಸಂಸ್ಕೃತಿ ಹೈಜಾಕ್ ಮಾಡೋದು ಸರೀನಾ?" : ನಟ ಚೇತನ್
ರಾಮಮೂರ್ತಿಯವರು ಸಿಎಂಟಿಐ ಸಂಸ್ಥೆಯ ನಿವೃತ್ತ ಉದ್ಯೋಗಿ. ರಂಗಸಂಪದದ ‘ತ್ರಿಶಂಕು’ ನಾಟಕದ ಮೂಲಕ ಅವರು ರಂಗಪ್ರವೇಶ ಮಾಡಿದ್ದರು. ಅಭಿನಯ, ನಿರ್ದೇಶನದ ಮೂಲಕ ಅವರು 40ಕ್ಕೂ ಹೆಚ್ಚು ನಾಟಕಗಳ ಭಾಗವಾಗಿದ್ದರು. ‘ಹರಕೆಯ ಕುರಿ’, ‘ಮಹಾ ಚೈತ್ರ’, ‘ಒಡಲಾಳ’ ಮುಂತಾದ ನಾಟಕಗಳಲ್ಲಿ ನಟಿಸಿದ್ದರು. ‘ಜೈಸಿದನಾಯ್ಕ’, ‘ಸಂಗ್ಯಾಬಾಳ್ಯ’ ಸೇರಿ ಹಲವು ನಾಟಕಗಳನ್ನು ಅವರು ನಿರ್ದೇಶಿಸಿದ್ದರು. ಕೋಟ್ರಿಶಿಯ ಕನಸು, ಆರಂಭ, ಅಸಂಭವ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು.
ರಾಮಮೂರ್ತಿಯವರು ಪತ್ನಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಪುತ್ರ ಅನುಪ್ ಉದಿಯೋನ್ಮುಖ ನಟ ಹಾಗೂ ನಿರ್ದೇಶಕರಾಗಿ ರೂಪುಗೊಳ್ಳುತ್ತಿದ್ದಾರೆ. ರಂಗಸಂಪದದ ಪದಾಧಿಕಾರಿಗಳು ಹಾಗೂ ರಂಗಭೂಮಿಯ ದಿಗ್ಗಜರು ಸೇರಿ ಅನೇಕ ಗಣ್ಯರು ರಾಮಮೂರ್ತಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿಂಹ ನಿನ್ನ ತೋಳಿನಲ್ಲಿ ಕಂದ ನಾನು...!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.