ತಪ್ಪನ್ನೇ ಹುಡುಕ್ತಿದ್ರೆ ಎಲ್ಲಾ ತಪ್ಪಾಗಿ ಕಾಣುತ್ತೆ : ಕಿಚ್ಚನ ಕಿಚ್ಚಿನ ಮಾತು ಯಾರಿಗೆ..?

ಯಾವತ್ತು ನಾವು ತಪ್ಪನ್ನೇ ಹುಡುಕಿಕೊಂಡು ಹೋಗ್ಬಾರ್ದು. ತಪ್ಪನ್ನೇ ಹುಡುಕುತ್ತಿದ್ದರೆ ಎಲ್ಲವೂ ತಪ್ಪಾಗಿಯೇ ಕಾಣುತ್ತದೆ ಎಂದು ಪಿವಿಆರ್‌ನಲ್ಲಿ ಬಾಲಿವುಡ್‌ ಸ್ಟಾರ್‌ಗಳ ಫೋಟೋಗಳಿವೆ ಆದರೆ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರುಗಳ ಫೋಟೋಗಳು ಯಾಕಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಉತ್ತರಿಸಿದ್ದು ಬಗೆ ಇದು.

Written by - Krishna N K | Last Updated : Dec 2, 2022, 04:31 PM IST
  • ಪಿವಿಆರ್‌ನಲ್ಲಿ ಬಾಲಿವುಡ್‌ ಸ್ಟಾರ್‌ಗಳ ಫೋಟೋಗಳಿವೆ ಕನ್ನಡ ನಟರ ಫೋಟೋಗಳಿಲ್ಲ
  • ಯಾವತ್ತು ನಾವು ತಪ್ಪನ್ನೇ ಹುಡುಕಿಕೊಂಡು ಹೋಗ್ಬಾರ್ದು
  • ಸುದ್ದಿಗಾರರ ಪ್ರಶ್ನೆಗೆ ಕಿಚ್ಚ ಸುದೀಪರ್‌ ಪ್ರತಿಕ್ರಿಯೆ
ತಪ್ಪನ್ನೇ ಹುಡುಕ್ತಿದ್ರೆ ಎಲ್ಲಾ ತಪ್ಪಾಗಿ ಕಾಣುತ್ತೆ : ಕಿಚ್ಚನ ಕಿಚ್ಚಿನ ಮಾತು ಯಾರಿಗೆ..? title=

ಬೆಂಗಳೂರು : ಯಾವತ್ತು ನಾವು ತಪ್ಪನ್ನೇ ಹುಡುಕಿಕೊಂಡು ಹೋಗ್ಬಾರ್ದು. ತಪ್ಪನ್ನೇ ಹುಡುಕುತ್ತಿದ್ದರೆ ಎಲ್ಲವೂ ತಪ್ಪಾಗಿಯೇ ಕಾಣುತ್ತದೆ ಎಂದು ಪಿವಿಆರ್‌ನಲ್ಲಿ ಬಾಲಿವುಡ್‌ ಸ್ಟಾರ್‌ಗಳ ಫೋಟೋಗಳಿವೆ ಆದರೆ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರುಗಳ ಫೋಟೋಗಳು ಯಾಕಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಉತ್ತರಿಸಿದ್ದು ಬಗೆ ಇದು.

ಹೌದು.. ಸಿಲಿಕಾನ್‌ ಸಿಟಯ ರೆಕ್ಸ್​ ಚಿತ್ರಮಂದಿರ ಸ್ಥಳದಲ್ಲಿ ಈಗ ಹೊಸದಾಗಿ ಪಿವಿಆರ್​ ಮಲ್ಟಿಪ್ಲೆಕ್ಸ್​ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಗೆ ಆಗಮಿಸಿದ್ದ ಕಿಚ್ಚ ಸುದೀಪ್‌ ಅವರಿಗೆ ಸುದ್ದಿಗಾರರು, ಪಿವಿಆರ್‌ ಆವರಣದಲ್ಲಿ ಬರೀ ಹಾಲಿವುಡ್​, ಬಾಲಿವುಡ್​ನ ಸ್ಟಾರ್‌ ನಟರ ಫೋಟೋಗಳನ್ನು ಹಾಕಲಾಗಿದೆ. ಕನ್ನಡದ ಯಾವುದೇ ಸೆಲೆಬ್ರಿಟಿಗಳ ಫೋಟೋ ಹಾಕಿಲ್ಲ ಏಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Vasishta Simha - Haripriya: ಇಂದು ಗುಟ್ಟಾಗಿ ಎಂಗೇಜ್ಮೆಂಟ್‌ ಮಾಡಿಕೊಂಡ ವಸಿಷ್ಠ ಸಿಂಹ - ಹರಿಪ್ರಿಯಾ!?

ಸುದ್ದಿಗಾರರ ಪ್ರಶ್ನೆಗೆ ತನ್ನದೆ ಶೈಲಿಯಲ್ಲಿ ಉತ್ತರಿಸಿ ಸುದೀಪ್​ ಅವರು, ಯಾವಾಗಲೂ ತಪ್ಪನ್ನೇ ಹುಡುಕೋಕೆ ಹೋಗ್ಬಾರದು. ಇಲ್ಲಿ ಕನ್ನಡ ಸಿನಿಮಾ ರಿಲೀಸ್​ ಆಗಲಿ ಅಂತ ಮಲ್ಟಿಪ್ಲೆಕ್ಸ್​ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಂಥ ಮಲ್ಟಿಪ್ಲೆಕ್ಸ್​ ಶುರುವಾಗಿರುವುದಕ್ಕೆ ಖುಷಿಪಡೋಣ. ಆತುರ ಬೇಡ. ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ ನಟರ ಫೋಟೋ ಹಾಕ್ತಾರೆ ಬಿಡಿ ನೋಡೋಣ ಎಂದು ಸುದೀಪ್​ ಹೇಳಿದರು.

ಹೌದು.. ಅಲ್ಲದೆ, ಉತ್ತಮ ವಿಚಾರಗಳ ಕಡೆ ಗಮನ ನೀಡೋಣ. ಒಂದು.. ಮಾನವನ ಮುಖ ನೋಡಿ ಮಾತನಾಡಿ.. ಇಲ್ಲವೇ.. ಕಾಲು ನೋಡಿ ಅದು ಬಿಟ್ಟು, ಶರ್ಟ್‌ ಬಟನ್‌ ಓಪನ್‌ ಆಗಿದೆ, ಪ್ಯಾಂಟ್‌ ಜೀಪ್‌ ತೆರೆದಿದೆ ಎಂದು ನೋಡಿ ಹೇಳುವುದಲ್ಲ. ಅಲ್ಲದೆ, ಕನ್ನಡ ಸಿನಿಮಾ ಪ್ರಸಾರ ಮಾಡುವ ಎಲ್ಲಾ ಚಿತ್ರಮಂದಿರಗಳಿಗೆ ನನ್ನ ಬೆಂಬಲ ಇದೆ ಎಂದರು. ಇನ್ನು ಸಿನಿಮಾ ವಿಚಾರವಾಗಿ ಹೇಳುವುದಾದರೆ, ಉಪೇಂದ್ರ ನಿರ್ದೇಶನ ಯಐ ಸಿನಿಮಾದಲ್ಲಿ ಸುದೀಪ್‌ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News